Advertisement

ಪ್ರತಿಕ್ರಿಯೆ ನೀಡಲು ಇರುವ ವೇಗಯೋಜನೆ ಅನುಷ್ಠಾನದಲ್ಲೇಕಿಲ್ಲ?

11:17 AM Feb 06, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಪ್ರತಿಕ್ರಿಯೆ ನೀಡಲು ತೋರಿದ ವೇಗವನ್ನು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ತೋರಿಸಿದ್ದರೆ ರಾಜ್ಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತಿತ್ತು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತೀಕ್ಷಣ್ಣವಾಗಿ ತಿರುಗೇಟು ನೀಡಿದ್ದಾರೆ. 

Advertisement

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ಕಾಂಗ್ರೆಸ್‌, ಆ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ಆತಂಕ ಶುರುವಾಗಿದೆ.
 
ಅದಕ್ಕಾಗಿಯೇ ಮೋದಿಯವರು ಬೆಂಗಳೂರಿನಿಂದ ವಾಪಸಾಗುತ್ತಿದ್ದಂತೆ ತರಾತುರಿಯಲ್ಲಿ ಕೆಪಿಸಿಸಿ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಕ್ರಿಯೆ ನೀಡಿದಷ್ಟೇ ವೇಗದಲ್ಲೇ ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಿದ್ದರೆ ಬಹುತೇಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ಆಗ ಮೋದಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಲೆಕ್ಕ ಕೇಳುತ್ತಿರಲಿಲ್ಲ. ಹೀಗಾಗಿ ಪರಮೇಶ್ವರ್‌ ಅವರ ಪ್ರತಿಕ್ರಿಯೆ ರಾಜಕೀಯ ಅಜೆಂಡಾಗೆ ಸೀಮಿತವಾಗಿದೆ ಎಂದು ಟೀಕಿಸಿದರು.

ಅಧ್ಯಕ್ಷರಿಗೆ ಮಾಹಿತಿಯಿಲ್ಲ: ಬೆಂಗಳೂರು ನಗರಕ್ಕೆ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಸಬ್‌ಅರ್ಬನ್‌ ರೈಲಿಗೆ ಕೇಂದ್ರ ಸರ್ಕಾರ ಶೇ.20 ಹಾಗೂ ರಾಜ್ಯ ಸರ್ಕಾರ ಶೇ.80ರಷ್ಟು ಹಣ ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಮಾಹಿತಿ ಕೊರತೆ ಇದೆ. ಯೋಜನೆಗೆ ಕೇಂದ್ರ ಸರ್ಕಾರ 17 ಸಾವಿರ ಕೋಟಿ ಹಣ ನೀಡಿದ್ದು, ಕೇಂದ್ರದ ಶೇ.50 ಮತ್ತು ರಾಜ್ಯದ ಶೇ.50ರ ಅನುಪಾತದಲ್ಲಿ ಹಣ ಬರಲಿದೆ. ಜತೆಗೆ ಸಾಲ ಸೌಲಭ್ಯವನ್ನೂ ಕೇಂದ್ರ ಸರ್ಕಾರವೇ ಮಾಡಿಕೊಡಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಾವು ಬರೆದಿರುವ ಪತ್ರದ ದಾಖಲೆ ಇದೆ ಎಂದರು.

ಸ್ವಾಗತಿಸದೇ ಸಣ್ಣವರಾದ ಸಿಎಂ: “ದೇಶದ ಪ್ರಧಾನಿ ಪಕ್ಷದ ಸಮಾವೇಶ, ಸರ್ಕಾರದ ಕಾರ್ಯಕ್ರಮ ಹೀಗೆ ಯಾವ ಉದ್ದೇಶದಿಂದ ಒಂದು ರಾಜ್ಯಕ್ಕೆ ಹೋದರೂ ಅಲ್ಲಿನ ಮುಖ್ಯಮಂತ್ರಿಗಳು ಖುದ್ದಾಗಿ ಅವರನ್ನು ಸ್ವಾಗತಿಸುವುದು ಸಂಪ್ರದಾಯ ಮತ್ತು ಶಿಷ್ಟಾಚಾರ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಯವರನ್ನು ಸ್ವಾಗತಿಸದೆ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಅವಮಾನ ಮಾಡಿದ್ದಾರೆ. ದೇಶದ ಪ್ರಧಾನಿಯನ್ನು ರಾಜ್ಯಕ್ಕೆ ಸ್ವಾಗತಿಸುವ ಮನಸ್ಥಿತಿಯೂ ಅವರಲ್ಲಿಲ್ಲ. ಈ ಮೂಲಕ ದ್ವೇಷದ ರಾಜಕಾರಣಕ್ಕೆ ಸಿಎಂ ಮುನ್ನುಡಿ ಬರೆದಿದ್ದಾರೆ,’ ಎಂದು ಆರೋಪಿಸಿದರು. “ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಕರ್ನಾಟಕದ ರಾಹುಲ್‌ ದ್ರಾವಿಡ್‌ರನ್ನು ಶ್ಲಾ ಸಿದ್ದಾರೆ.

ಅಲ್ಲದೆ, ಎಲ್ಲರನ್ನೂ ಒಗ್ಗೂಡಿಸುವವರು, ಯಾರು ಕೂಡ ಸ್ವಾರ್ಥಿಗಳಿಲ್ಲ ಎಂದು ಹೇಳಿ ಕನ್ನಡಿಗರ ಬಗ್ಗೆ ಗೌರವ ತೋರಿದ್ದಾರೆ. ಕಾಂಗ್ರೆಸ್‌ನವರು ಸ್ವಾರ್ಥ ರಾಜಕಾರಣ ಮಾಡುತ್ತಾರೆ ಎಂದೂ ಪ್ರಧಾನಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಯವರನ್ನು ಸ್ವಾಗತಿಸದೆ, ಪ್ರಧಾನಿ ಮಾತನ್ನು ಪುಷ್ಟೀಕರಿಸಿದ್ದಾರೆ,’ ಎಂದ ಕೇಂದ್ರ ಸಚಿವರು, “ಪ್ರಧಾನಿಯವರನ್ನು ಸ್ವಾಗತಿಸುವುದೇ ಮೂಢನಂಬಿಕೆ ಎಂದು ಸಿಎಂ ತಿಳಿದುಕೊಂಡಂತಿದೆ,’ ಎಂದು ವ್ಯಂಗ್ಯವಾಡಿದರು.

Advertisement

ಕಾನೂನು ಸುವ್ಯವಸ್ಥೆ ಬಗ್ಗೆ ಗಮನಹರಿಸಿ ಗೃಹ ಸಚಿವ ರಾಮಲಿಂಗಾರೆಡ್ಡಿ ವಿರುದ್ಧವೂ ಹರಿಹಾಯ್ದ ಕೇಂದ್ರ ಸಚಿವ ಸದಾನಂದಗೌಡ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ರಾಜ್ಯದ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳುತ್ತಿದ್ದಾರೆ. ಆದರೆ, ದೆಹಲಿ ನಂತರ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣ ನಡೆಯುತ್ತಿದೆ ಎಂಬುದು ಕೇಂದ್ರ ಗೃಹ
ಇಲಾಖೆಯ ವರದಿಯಲ್ಲೇ ಬಯಲಾಗಿದೆ. 

ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಅಧಿಕಾರದಲ್ಲಿದ್ದಾಗ ಬೆಳೆದು ಬಂದ ದರ್ಬಾರ್‌ ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಡಿವಾಣ ಹಾಕುತ್ತಿದ್ದು, ಕ್ರಿಮಿನಲ್‌ಗ‌ಳನ್ನು ಗುಂಡಿಟ್ಟು ಕೊಲ್ಲುವ ಪ್ರಕ್ರಿಯೆ ಆರಂಭವಾಗಿದೆ. ಇದನ್ನು ಗೃಹ ಸಚಿವರು ಅರ್ಥ
ಮಾಡಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಇತರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಗಮನಹರಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next