Advertisement
ಹೊರಗಡೆ ಶ್ವೇತ ವರ್ಣ, ಒಳಗೆ ಪ್ರವೇಶಿಸಿದರೆ ಧೂಳು ಮತ್ತು ಅಲ್ಲಲ್ಲಿ ಕಸದ ರಾಶಿ, ಫೈಲ್‌ಗಳ ಅಟ್ಟಿ, ಶೌಚಾಲ ಯಕ್ಕೆ ಹೋಗಬೇಕಾದರೆ ಮೂಗು ಮುಚ್ಚುವ ಪರಿಸ್ಥಿತಿಯಿದೆ. ಮಿನಿ ವಿಧಾನ ಸೌಧದ ಸ್ವತ್ಛತೆ ಹಾಗೂ ನಿರ್ವಹಣೆ ಬಗ್ಗೆ ಸರಿಯಾಗಿ ಗಮನ ಕೊಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಿನಿ ವಿಧಾನಸೌಧದ ಲಿಫ್ಟ್ ಒಂದು ತಿಂಗಳಿನಿಂದ ಬಂದ್ ಆಗಿರುವುದಾಗಿ ದೂರಲಾಗಿದೆ. ಮಿನಿ ವಿಧಾನಸೌಧ ನಿರ್ವಹಣೆಯ ಬ್ಯಾಟರಿ ಹಾಗೂ ಮಿನಿ ಜನರೇಟರ್ ಆಗಾಗ್ಗೆ ಕೈಕೊಡುತ್ತಿದೆ. ಸಬ್‌ರಿಜಿಸ್ಟ್ರಾರ್ ಅತ್ಯಂತ ಹೆಚ್ಚು ಚಟುವಟಿಕೆಯಲ್ಲಿರುವ ಕೊಠಡಿಯಾಗಿದ್ದು, ಲಿಫ್ಟ್ ಕೈಕೊಟ್ಟ ಕಾರಣ ಇಲ್ಲಿಗೆ ತೆರಳುವ ಸಾರ್ವಜನಿಕರು ಮೆಟ್ಟಿಲು ಹತ್ತಬೇಕಾಗುತ್ತಿದೆ. ಕೆಲವು ವೃದ್ಧರನ್ನು ಎತ್ತಿಕೊಂಡೇ ಹೋಗುವ ಪ್ರಸಂಗವೂ ಇದೆ. ಅನೇಕರಿಗೆ ಪ್ರಯಾಸ
ಸಬ್ ರಿಜಿಸ್ಟ್ರಾರ್ ಕಚೇರಿಗೆ ಕೆಲಸಕ್ಕೆಂದು ಬಂದಿದ್ದೆ, ಸರತಿ ಸಾಲು ಇತ್ತು. ಲಿಫ್ಟ್ ಹತ್ತಲು ಹೋದರೆ ಅಲ್ಲಿ ಬಂದ್ ಎಂಬ ಚೀಟಿಯನ್ನೂ ಅಂಟಿಸಿಲ್ಲ. ಸ್ವಲ್ಪ ಹೊತ್ತು ಕಾದ ಬಳಿಕ ಇದು ಕೆಲಸ ಮಾಡುತ್ತಿಲ್ಲ ಎಂದು ತಿಳಿಯಿತು. ಬಳಿಕ ಮೆಟ್ಟಿಲು ಹತ್ತಿ ಕಚೇರಿಗೆ ತೆರಳಿದೆ. ನನಗೆ ಮಂಡಿ ನೋವಿದ್ದು ನನ್ನಂತೆ ಅನೇಕರು ಪ್ರಯಾಸಪಡುತ್ತಿದ್ದಾರೆ.
-ಪ್ರಭಾಕರ ದೈವಗುಡ್ಡೆ, ಸಾಮಾಜಿಕ ಕಾರ್ಯಕರ್ತ
Related Articles
ಜನರೇಟರ್ ಇದ್ದರೂ ಕೆಲಸ ನಿರ್ವಹಿಸುತ್ತಿಲ್ಲ. ಲಿಫ್ಟ್ ಕೆಲಸ ಮಾಡದೇ ಇರುವ ವಿಚಾರ ಗಮನಕ್ಕೆ ಬಂದಿದೆ. ಈ ಕುರಿತು ನಾವು ಈಗಾಗಲೇ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿ ದ್ದೇವೆ. ಒಂದು ವಾರದಲ್ಲಿ ಸಮಸ್ಯೆಗೆ ಪರಿಹಾರ ದೊರಕಬಹುದು.
-ಸಣ್ಣರಂಗಯ್ಯ, ತಹಶೀಲ್ದಾರ್, ಬಂಟ್ವಾಳ
Advertisement