Advertisement

ಬಿಬಿಎಂಪಿಯಲ್ಲಿ ಕಾನೂನು ವಿಭಾಗ ಇದೆಯೇ: ಹೈಕೋರ್ಟ್‌ ಪ್ರಶ್ನೆ

09:49 AM Feb 05, 2020 | sudhir |

ಬೆಂಗಳೂರು: ಬಿಬಿಎಂಪಿಯ ಕಾನೂನು ವಿಭಾಗಕ್ಕೆ ಕೋರ್ಟ್‌ ಆದೇಶಗಳು ಅರ್ಥವಾಗುವುದಿಲ್ಲವೇ ಎಂದು ಹೈಕೋರ್ಟ್‌ ಚಾಟಿ ಬೀಸಿದೆ.
ಸಾರ್ವಜನಿಕ ಪ್ರದೇಶಗಳಲ್ಲಿನ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಸುಪ್ರೀಂಕೋರ್ಟ್‌ ನಿರ್ದೇಶನ ಮೇರೆಗೆ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

Advertisement

ಆಗ, ಬಿಬಿಎಂಪಿ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ಇದೊಂದು ಅತ್ಯಂತ ದೋಷಪೂರಿತ ಪ್ರಮಾಣಪತ್ರವಾಗಿದೆ. ಇದನ್ನು ನೋಡುತ್ತಿದ್ದರರೆ ಬಿಬಿಎಂಪಿಯಲ್ಲಿ ಕಾನೂನು ವಿಭಾಗ ಇದೆಯೆ? ಅಲ್ಲಿದ್ದವರಿಗೆ ಹೈಕೋರ್ಟ್‌, ಸುಪ್ರೀಂಕೋರ್ಟ್‌ ಆದೇಶಗಳು ಅರ್ಥ ಆಗುತ್ತವೆಯೇ ಎಂಬ ಅನುಮಾನ ಮೂಡುತ್ತದೆ. ಪ್ರಮಾಣಪತ್ರದ ಪ್ರತಿ ಪುಟದಲ್ಲಿ ತಪ್ಪುಗಳಿವೆ.

ನ್ಯಾಯಾಲಯದ ಇಷ್ಟೊಂದು ಸರಳ ಆದೇಶವನ್ನು ಇಷ್ಟೊಂದು ತಪ್ಪಾಗಿ ಅಥೆìçಸಲಾಗಿದೆ. ಕಾನೂನು ವಿಭಾಗದಲ್ಲಿ ಎಷ್ಟು ವಕೀಲರು, ಅಧಿಕಾರಿಗಳು ಇದ್ದಾರೆ, ಅವರಿಗೆ ಸಲಹೆ ನೀಡುವ ಹೊಣೆ ಯಾರದು ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸೂಚಿಸಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next