Advertisement

ಶಾ ವಕ್ರದೃಷ್ಟಿ ಬಿದ್ದಿದ್ದಕ್ಕೂ, ಹಾಲಿನ ಅಭಾವಕ್ಕೂ ಸಂಬಂಧವಿದೆಯೇ : ಕಾಂಗ್ರೆಸ್ ಪ್ರಶ್ನೆ

04:44 PM Mar 09, 2023 | Team Udayavani |

ಬೆಂಗಳೂರು : ”ನಂದಿನಿಯ ಮೇಲೆ ಅಮಿತ್ ಶಾ ಅವರ ವಕ್ರದೃಷ್ಟಿ ಬಿದ್ದಿದ್ದಕ್ಕೂ, ಹಾಲಿನ ಅಭಾವ ಸೃಷ್ಟಿಯಾಗಿದ್ದಕ್ಕೂ ಸಂಬಂಧವಿದೆಯೇ ಬಸವರಾಜ್ ಬೊಮ್ಮಾಯಿ ಅವರೇ? ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗಿದೆಯೇ ಅಥವಾ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗಿದೆಯೇ? ಇದೆಲ್ಲವೂ ನಂದಿನಿಯನ್ನು ಗುಜರಾತಿನ ಅಮುಲ್‌ಗೆ ಬಲಿ ಕೊಡಲು ಪೂರ್ವಸಿದ್ಧತೆಯೇ” ಎಂದು ಬಿಜೆಪಿಯನ್ನು ಕಾಂಗ್ರೆಸ್ ಟ್ವೀಟ್ ಗಳ ಮೂಲಕ ಪ್ರಶ್ನಿಸಿದೆ.

Advertisement

”ರಾಜ್ಯದಲ್ಲಿ ಹಾಲು ಉತ್ಪಾದನೆ ಗಣನೀಯ ಕುಸಿತ ಕಂಡಿದೆ ಎಂದರೆ ಸಣ್ಣ ಕೃಷಿಕರು ಸಂಕಷ್ಟದಲ್ಲಿದ್ದಾರೆ ಎಂದರ್ಥ. ಪಶು ಆಹಾರದ ಬೆಲೆ ಏರಿಕೆ, ಜಾನುವಾರು ಸಂರಕ್ಷಣಾ ಕಾಯ್ದೆ, ಚರ್ಮಗಂಟು ರೋಗ, ಮುಂತಾದವುಗಳೇ ಇದಕ್ಕೆ ಕಾರಣ.ಸೋಕಾಲ್ಡ್ ಗೋರಕ್ಷಕ ಸರ್ಕಾರ ಏಕೆ ಈ ಬಗ್ಗೆ ಚಿಂತಿಸುತ್ತಿಲ್ಲ? ಏಕೆ ರೈತರ ನೆರವಿಗೆ ಬರುತ್ತಿಲ್ಲ?” ಎಂದು ಸರಕಾರಕ್ಕೆ ಕಾಂಗ್ರೆಸ್ ಪ್ರಶ್ನೆಗಳನ್ನು ಮುಂದಿಟ್ಟಿದೆ.

”ಹಾಲು ಉತ್ಪಾದನೆಯ ಕುಸಿತ ಹಾಗೂ ಬೀಫ್ ರಫ್ತಿನಲ್ಲಿ ಏರಿಕೆಗಳು ಬಿಜೆಪಿ ಹೇಳುವ ಗೋರಕ್ಷಣೆಯ ಡೋಂಗಿತನವನ್ನು ಬಯಲು ಮಾಡಿವೆ. ಪಾಶ್ಚಾತ್ಯ ರಾಷ್ಟ್ರಗಳಂತೆ ಭಾರತದಲ್ಲಿ ಮಾಂಸಕ್ಕಾಗಿ ಸಾಕುವ ‘ಗೋವುಗಳ ಫಾರಂ’ ಪರಿಪಾಠವಿಲ್ಲ, ಆದರೂ ಬೀಫ್ ರಫ್ತಿನಲ್ಲಿ ಬಿಜೆಪಿ ಆಡಳಿತದಲ್ಲಿ ಭಾರತ ನಂ1 ಆಗಿದ್ದು ಹೇಗೆ ಎಂಬುದು ಈ ಶತಮಾನದ ನಿಗೂಢ ಪ್ರಶ್ನೆ!” ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next