Advertisement

Illegal immigrants: ರಾಜ್ಯ ಅಕ್ರಮ ವಲಸಿಗರ ನೆಲೆಯಾಗಿದೆಯಾ?

06:27 PM Mar 05, 2024 | Team Udayavani |

ರಾಮನಗರ: ರಾಜಧಾನಿ ಬೆಂಗಳೂರು ರೋಹಿಂಗ್ಯಾ ಗಳು ಮತ್ತು ಅಕ್ರಮ ವಲಸಿಗರ ನೆಲೆಯಾಗಿದೆಯಾ..? ಸದನದಲ್ಲಿ ರಾಜ್ಯ ಗೃಹ ಇಲಾಖೆ ನೀಡಿರುವ ಮಾಹಿತಿಯನ್ನು ಗಮನಿಸಿದರೆ ಇಂತಹುದೊಂದು ಸಂದೇಹ ಮೂಡುತ್ತದೆ.

Advertisement

ರಾಜ್ಯದಲ್ಲಿ 104 ಮಂದಿ ರೋಹಿಂಗ್ಯಾಗಳು ಸೇರಿದಂತೆ 175 ಮಂದಿಯನ್ನು ಅಕ್ರಮ ವಲಸಿಗರು ಎಂದು ಗುರುತಿಸಲಾಗಿದ್ದು, ಇವರನ್ನು ಡಿಟೆಂಷನ್‌ ಸೆಂಟರ್‌ನಲ್ಲಿ ಇರಿಸಲಾಗಿದೆ ಎಂದು ಸರ್ಕಾರ ಸದನ ದಲ್ಲಿ ಮಾಹಿತಿ ನೀಡಿದೆ. ಆದರೆ, ಪೊಲೀಸ್‌ ಇಲಾಖೆಯ ಗಮನಕ್ಕೆ ಬಾರದಂತೆ ಸಾಕಷ್ಟು ಮಂದಿ ನೆಲೆಸಿದ್ದು, ಇವರನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಬೇಕಿದೆ.

ರಾಜ್ಯದಲ್ಲಿ ಪದೇ ಪದೆ ಬಾಂಬ್‌ಸ್ಫೋಟ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹಲ್ಲೆ ಹೀಗೆ ಒಂದಿಲ್ಲೊಂದು ಭಯೋತ್ಪಾದನ ಘಟನೆ ಗಳು ನಡೆಯುತ್ತಿದ್ದು, ಇದರ ಹಿಂದೆ ಉಗ್ರಗಾಮಿ ಸಂಘಟನೆಗಳ ನಂಟಿದೆ ಎಂಬ ಸಂಗತಿ ತನಿಖಾ ತಂಡಗಳು ಬಹಿರಂಗ ಪಡಿಸುತ್ತಿವೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ರೋಹಿಂಗ್ಯಾಗಳು ಸೇರಿದಂತೆ 175 ಮಂದಿ ಅಕ್ರಮ ವಲಸಿಗರು ಪೊಲೀಸ್‌ ಇಲಾಖೆಯ ಗಮನಕ್ಕೆ ಬಂದಿದೆ.

ಬೆಂಗಳೂರು ನಗರದಲ್ಲಿ 104 ರೋಹಿಂಗ್ಯಾಗಳು: ಬರ್ಮಾ ದೇಶದಿಂದ ಹೊರದೂಲ್ಪಟ್ಟಿರುವ ಅಪಾಯ ಕಾರಿ ಎಂದು ಗುರುತಿಸಲಾಗಿರುವ ರೋಹಿಂಗ್ಯಾಗಳು ಬೆಂಗಳೂರು ನಗರದಲ್ಲಿ 104 ಮಂದಿ ಪತ್ತೆಯಾಗಿ ದ್ದಾರೆ. ಇದು ಗƒಹ ಇಲಾಖೆಯ ಕಣ್ಣಿಗೆ ಬಿದ್ದಿರುವ ಸಂಖ್ಯೆಯಾದರೆ, ಗೃಹ ಇಲಾಖೆಗೆ ಮಾಹಿತಿ ಇಲ್ಲದೆ ಇರುವವರ ಸಂಖ್ಯೆ ಇನ್ನೆಷ್ಟಿರಬಹುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಬೆಂಗಳೂರು ನಗರ ದಲ್ಲಿ ಪತ್ತೆಯಾಗಿರುವ ಅಕ್ರಮ ವಾಸಿಗಳ ಸಂಖ್ಯೆ 153 ಎಂದು ಗುರುತಿಸಿದ್ದು, 49 ಮಂದಿ ಇತರ ದೇಶದ ವಾಸಿಗಳು, 104 ಮಂದಿ ರೋಹಿಂಗ್ಯಾಗಳು ಸಿಲಿಕಾನ್‌ ಸಿಟಿಯಲ್ಲಿ ಪೊಲೀಸ್‌ ಇಲಾಖೆಗೆ ಸಿಕ್ಕಿದ್ದಾರೆ. ರಾಜ ಧಾನಿಯಲ್ಲಿ ಪದೇ ಪದೆ ಭಯೋತ್ಪಾದಕ ಚಟು ವಟಿಕೆಗಳು ನಡೆಯುತ್ತಿದ್ದು, ಈ ಅಕ್ರಮ ವಾಸಿಗಳ ವಿರುದ್ಧ ರಾಜ್ಯ ಸರ್ಕಾರ ಕಣ್ಣಿರಿಸಬೇಕಿದೆ.

ಇತರೆಡೆ ಪತ್ತೆಯಾಗಿರುವ ಅಕ್ರಮವಾಸಿಗಳು: ಪೊಲೀಸ್‌ ಇಲಾಖೆ ಸಂಗ್ರಹಿಸಿರುವ ಮಾಹಿತಿ ಅನ್ವಯ ಬೆಂಗಳೂರು ಜಿಲ್ಲೆ, ಕೊಡಗು ಮತ್ತು ರಾಮನಗರದಲ್ಲಿ ಅಕ್ರಮವಾಸಿಗಳು ಪತ್ತೆಯಾಗಿದ್ದಾರೆ. ಅದರಲ್ಲೂ ಬೆಂಗಳೂರು ಸುತ್ತ ಮುತ್ತಲೇ ಹೆಚ್ಚು ಮಂದಿ ಪತ್ತೆಯಾ ಗಿರುವುದು ವಿಶೇಷ. ಬೆಂಗಳೂರು ಜಿಲ್ಲೆಯಲ್ಲಿ 10 ಮಂದಿ, ಕೊಡಗಿನಲ್ಲಿ ಒಬ್ಬ, ರಾಮನಗರದಲ್ಲಿ 11 ಮಂದಿ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ.

Advertisement

92 ಮಂದಿ ಗಡಿಪಾರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವ ಕೆಲಸವನ್ನು ಕೈಗೊಂಡಿದ್ದು ಇದುವರೆಗೆ 92 ಮಂದಿ ಯನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರದಲ್ಲಿ 50 ಮಂದಿ, ಮಂಗಳೂರು ನಗರದಲ್ಲಿ 41 ಮಂದಿ, ತುಮ ಕೂರಿನಲ್ಲಿ ಒಬ್ಬರು ಅಕ್ರಮವಾಗಿ ನೆಲೆಸಿದ್ದ ವಿದೇಶಿ ಯರನ್ನು ಅವರ ದೇಶಕ್ಕೆ ಗಡಿಪಾರು ಮಾಡಲಾಗಿದೆ.

ರಾಜ್ಯದಲ್ಲಿ 8862 ವಿದೇಶಿಯರು: ರಾಜ್ಯ ಗೃಹ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 8862 ಮಂದಿ ವಿದೇಶಿಯರು ವಾಸವಿದ್ದು, ಇವರಲ್ಲಿ 754 ಮಂದಿಯ ವೀಸಾ ಅವಧಿ ಮುಗಿದೆ. ಬೆಂಗಳೂರು ನಗರದಲ್ಲಿ 5656 ಮಂದಿ ವಿದೇಶಿಯರು ನೆಲೆಸಿದ್ದು, ಮೈಸೂರು ನಗರದಲ್ಲಿ 806, ಮೈಸೂರು ಗ್ರಾಮಾಂತರದಲ್ಲಿ 280 ಮಂದಿ ನೆಲೆಸಿದ್ದಾರೆ. ಇನ್ನು ರಾಮನಗರ ಜಿಲ್ಲೆಯಲ್ಲಿ 484 ಮಂದಿ, ಕಾರವಾರದಲ್ಲಿ 354 ಮಂದಿ, ಮಂಗಳೂರಿನಲ್ಲಿ 258 ಮಂದಿ ವಿದೇಶಿಯರು ನೆಲೆಸಿದ್ದಾರೆ.

501 ಮಂದಿ ವಿದೇಶಿಯರಿಂದ ಅಪರಾಧ ಕೃತ್ಯ : ರಾಜ್ಯದಲ್ಲಿ 501 ಮಂದಿ ವಿದೇಶಿಯರ ವಿರುದ್ಧ ಅಪರಾಧ ಚಟುವಟಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖ ಲಾಗಿದೆ. ಡ್ರಗ್ಸ್‌, ಸುಲಿಗೆ, ಆನ್‌ಲೈನ್‌ ವಂಚನೆ, ಅಕ್ರಮ ವಲಸೆ ಇನ್ನಿತರ ಆರೋಪಗಳಡಿ ಇವರ ಮೇಲೆ ಪ್ರಕ ರಣ ಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲೇ ವಿದೇಶಿಯರು ಅತಿಹೆಚ್ಚು ಕಾನೂನು ಬಾಹೀರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು 451 ಮಂದಿ ಬೆಂ.ನಗರದಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.

ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚಿ, ಅವರ ದೇಶವನ್ನು ಗುರುತಿಸಿ ಅವರನ್ನು ಗಡಿಪಾರು ಮಾಡಲು ಇಲಾಖೆ ಕ್ರಮವಹಿಸಿದೆ. ಈ ಬಗ್ಗೆ ಹೆಚ್ಚಿನ ನಿಗಾವಹಿ ಸಲು ಪ್ರತಿ ಪೊಲೀಸ್‌ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ●ಜಿ.ಪರಮೇಶ್ವರ್‌, ಗೃಹಸಚಿವ (ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದು)

ಸು.ನಾ.ನಂದಕುಮಾರ್‌

 

Advertisement

Udayavani is now on Telegram. Click here to join our channel and stay updated with the latest news.

Next