Advertisement
ಒಲಿಂಪಿಕ್ಸ್ ಕೂಟಕ್ಕೆ ಬೇರೆ ಬೇರೆ ದೇಶಗಳಿಂದ ಕ್ರೀಡಾಪಟುಗಳು ಬರುತ್ತಾರೆ. ಲಕ್ಷಾಂತರ ಪ್ರೇಕ್ಷಕರು ಸೇರುತ್ತಾರೆ. ಹೀಗಾಗಿ ಕೂಟ ಆರಂಭವಾಗುವ ಮೊದಲು ಆತಿಥ್ಯ ವಹಿಸುವ ರಾಷ್ಟ್ರದಲ್ಲಿ ವೈರಸ್ ನಿಯಂತ್ರಣಕ್ಕೆ ಬರಬೇಕಾಗಿದೆ ಇಲ್ಲವಾದಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂದು ಕೋಬೆ ವಿಶ್ವವಿದ್ಯಾಲಯದ ಸೋಂಕು ರೋಗಗಳ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಕೆಂಟಾರೊ ಮಾಧ್ಯಮ ಪ್ರಕಟನೆಯಲ್ಲಿ ಹೇಳಿದ್ದಾರೆ.
ಟೋಕಿಯೊ ಒಲಿಂಪಿಕ್ ಸಂಘಟನ ಸಮಿತಿಯ ಅಧಿಕಾರಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಕಾರ್ಯಕಾರಿ ಸಮಿತಿ ಬುಧವಾರ ಖಚಿತ ಪಡಿಸಿದೆ.30 ವರ್ಷದ ಪುರುಷ ಅಧಿಕಾರಿಯೊಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ. ಮುಖ್ಯ ಕಚೇರಿಯ ಭಾಗವಾದ ಟೋಕಿಯೊದ ಹರೂಮಿ ಎನ್ನುವ ಸ್ಥಳದಲ್ಲಿ ಈ ಅಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.