Advertisement

ವರ ಅಂದ್ಕೊಂಡಿದ್ದು ಶಾಪ ಆಗ್ಬೇಕಾ?

10:55 PM Nov 18, 2019 | Lakshmi GovindaRaj |

ಇತ್ತೀಚಿನ ದಿನಗಳಲ್ಲಿ ನಾವೆಲ್ಲಾ ಮೊಬೈಲ್‌ ಆ್ಯಪ್‌ಗಳಿಗೆ ದಾಸರಾಗಿದ್ದೇವೆ. ನಮ್ಮ ಎಲ್ಲ ಚಟುವಟಿಕೆಗಳು, ಇಷ್ಟ-ಕಷ್ಟಗಳು, ಬೇಕು-ಬೇಡಗಳು, ಖಾಸಗಿ ಮಾಹಿತಿಗಳು ಅವಕ್ಕೆ ತಿಳಿದಿವೆ. ಸದಾ ನಮ್ಮ ಮೇಲೆ ಹದ್ದಿನಕಣ್ಣಿಟ್ಟಿರುವ ಈ ಆ್ಯಪ್‌ಗಳು, ನಮ್ಮದೇ ಖಾಸಗಿ ವಿಚಾರಗಳನ್ನು ಮೂರನೆಯವರೊಂದಿಗೆ ಲಾಭಕ್ಕಾಗಿ ಹಂಚಿಕೊಳ್ಳುತ್ತಿವೆ. ಹೇಗೆ ಗೊತ್ತಾ? ಪೀರಿಯಡ್‌/ಮುಟ್ಟಿನ ದಿನವನ್ನು ನೆನಪಿಟ್ಟುಕೊಳ್ಳಲೂ ಆ್ಯಪ್‌ಗಳು ಇವೆ.

Advertisement

ಈ ತಿಂಗಳ ಮುಟ್ಟಿನ ದಿನವನ್ನು ಆ್ಯಪ್‌ಗೆ ಫೀಡ್‌ ಮಾಡಿದರೆ, ಅದನ್ನಾಧರಿಸಿ ಮುಂದಿನ ಮುಟ್ಟಿನ ದಿನವನ್ನು ಅದು ಮುಂಚಿತವಾಗಿ ನೆನಪಿಸುತ್ತದೆ. ತಾಲಿಯಾ ಶಾಡ್ವೆಲ್‌ ಎಂಬಾಕೆ ಪ್ರತಿ ತಿಂಗಳೂ, ಪೀರಿಯಡ್‌ ಟ್ರ್ಯಾಕಿಂಗ್‌ ಆ್ಯಪ್‌ ಬಳಸುತ್ತಿದ್ದರು. ಆದರೆ, ಕಳೆದ ತಿಂಗಳು ಮುಟ್ಟಿನ ದಿನವನ್ನು ಆ್ಯಪ್‌ಗೆ ದಾಖಲಿಸುವುದನ್ನು ಆಕೆ ಮರೆತರು. ಆ ನಂತರ ತಾಲಿಯಾಗೆ ಫೇಸ್‌ಬುಕ್‌ನಲ್ಲಿ ಬರೀ ಗರ್ಭಿಣಿ ಮತ್ತು ಸಣ್ಣ ಮಕ್ಕಳಿಗೆ ಸಂಬಂಧಿಸಿದ ಜಾಹೀರಾತೇ ಕಾಣಿಸತೊಡಗಿತು.

ಏನಪ್ಪಾ ಹೀಗಾಗ್ತಿದೆ ಅಂತ ಯೋಚಿಸಿದಾಗ ತಾಲಿಯಾಗೆ ಅರ್ಥವಾಯ್ತು, ಆಕೆಯ ಮಾಹಿತಿಯನ್ನು ಪೀರಿಯಡ್‌ ಟ್ರ್ಯಾಕಿಂಗ್‌ ಆ್ಯಪ್‌, ಜಾಹೀರಾತು ಕಂಪನಿಗಳಿಗೆ ಮಾರಿದೆ ಎಂದು. ತಕ್ಷಣ ಆಕೆ, ಟ್ರ್ಯಾಕಿಂಗ್‌ ಆ್ಯಪ್‌ನಲ್ಲಿ ಮುಟ್ಟಿನ ದಿನವನ್ನು ದಾಖಲಿಸಿದರು. ಆ ನಂತರ ಅವರಿಗೆ ಆ ಜಾಹೀರಾತುಗಳು ಕಾಣಿಸಲಿಲ್ಲ. ತಿಂಗಳ ಮುಟ್ಟನ್ನು ದಾಖಲಿ ಸದ ತಾಲಿಯಾಳನ್ನು ಗರ್ಭಿಣಿ ಎಂದು ಭಾವಿಸಿದ ಜಾಹೀ ರಾತು ಕಂಪನಿಗಳು, ಗರ್ಭಿಣಿಯರಿಗೆ ಸಂಬಂಧಿಸಿದ ವಸ್ತು ಗಳತ್ತ ಆಕೆಯ ಗಮನ ಸೆಳೆಯಲು ಯತ್ನಿಸಿದ್ದವು. ಈಗ ತಾಲಿಯಾ ಆ ವಿರುದ್ಧ ಟ್ವಿಟರ್‌ನಲ್ಲಿ ದನಿ ಎತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next