Advertisement
ಹೌದು. ಕೇಂದ್ರ ಸರಕಾರ ಇಂಥದ್ದೊಂದು ಗಂಭೀರ ಚಿಂತನೆಗೆ ಮುಂದಾಗಿದೆ. ನಾವು ಏಕೆ ಹೊರ ದೇಶಗಳ ವಾಟ್ಸ್‌ಆ್ಯಪ್, ಜಿ ಮೇಲ್ನಂಥ ಸಂವಹನ ಮಾಧ್ಯಮಗಳ ಮೇಲೆ ಅವಲಂಬಿತರಾಗಬೇಕು? ನಮ್ಮದೇ ಆದ ಒಂದು ಸಂವಹನ ಮಾಧ್ಯಮವನ್ನು ಸೃಷ್ಟಿ ಮಾಡಿಕೊಳ್ಳಬಾರದೇಕೆ ಎಂಬ ನಿಲುವಿಗೆ ಕೇಂದ್ರ ಸರಕಾರ ಬಂದಿದೆ. ವಾಟ್ಸ್‌ಆ್ಯಪ್ ಸಂಸ್ಥೆಯ ಜಿಗುಟುತನ ಮತ್ತು ಅಮೆರಿಕ ಸರಕಾರದ ಹಠಮಾರಿ ಧೋರಣೆಯಿಂದಾಗಿ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಚಿಂತನೆ ಶುರುವಾಗಿದೆ. ಈ ಬಗ್ಗೆ ಇಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
Related Articles
Advertisement
ವಾಟ್ಸ್‌ಆ್ಯಪ್‌ನ ಜಿಗುಟುತನವೇನು?
ಇತ್ತೀಚಿನ ವರ್ಷಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದಾಗಿ ಗುಂಪುಥಳಿತದಂಥ ಪ್ರಕರಣಗಳು ಹೆಚ್ಚಾಗಿದ್ದವು. ಆಗ ಭಾರತ ವಾಟ್ಸ್ ಆ್ಯಪ್ ಸಂಸ್ಥೆಯ ಮೇಲೆ ಸಮರವನ್ನೇ ಸಾರಿತ್ತು. ಹಿಂಸಾಚಾರಕ್ಕೆ ಕಾರಣವಾದ ಮೆಸೇಜ್ ಅನ್ನು ಕಳುಹಿಸಿದ ಮೂಲ ವ್ಯಕ್ತಿ ಯಾರು ಎಂಬ ಬಗ್ಗೆ ಮಾಹಿತಿ ಕೊಡಬೇಕು ಎಂಬುದು ಕೇಂದ್ರ ಸರಕಾರದ ವಾದವಾಗಿತ್ತು. ಆದರೆ ಇದಕ್ಕೆ ವಾಟ್ಸ್‌ಆ್ಯಪ್ ಇನ್ನೂ ಒಪ್ಪಿಲ್ಲ.