Advertisement

ಕೋವಿಡ್ ಸೋಂಕಿನಿಂದ ರಕ್ಷಣೆ ಮಾಡುತ್ತದೆಯೇ ಸ್ಟೀಮಿಂಗ್..!? ಅಧ್ಯಯನಗಳು ಏನು ಹೇಳುತ್ತವೆ..?

11:34 AM Apr 22, 2021 | Team Udayavani |

ನವ ದೆಹಲಿ : ಕೋವಿಡ್ ನ ಎರಡನೇ ಅಲೆ ಮತ್ತೆ ಇಡೀ ವಿಶ್ವವನ್ನೇ ಅಡಿಮೇಲಾಗಿಸಿದೆ. ನಾಗರಿಕ ವ್ಯವಸ್ಥೆ ಚೇತರಿಕೆಗೊಳ್ಳುತ್ತಿದೆ ಎಂಬಷ್ಟರಲ್ಲೇ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ ಕೋವಿಡ್ ರೂಪಾಂತರಿ ಅಲೆ.

Advertisement

ವಿಶ್ವಾದ್ಯಂತ 143 ದಶಲಕ್ಷಕ್ಕೂ ಹೆಚ್ಚು ಜನರು ತೀವ್ರವಾದ ಉಸಿರಾಟದ SARS-CoV-2 ಕೋವಿಡ್ ಸೋಂಕಿಗೆ  ಒಳಗಾಗಿದ್ದಾರೆ ಮತ್ತು 3 ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಈ ನಡುವೆ, ಜನರು ತಮ್ಮನ್ನು ತಾವು ಮಾರಣಾಂತಿಕ ವೈರಸ್‌ ನಿಂದ ರಕ್ಷಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಾದ್ಯಂತ ಟ್ರೆಂಡ್ ಆಗುತ್ತಿದೆ ಎಂದು ಸುದ್ದಿಯಾಗಿದ್ದು, ಸ್ಟೀಮ್ ಇನ್ ಹೇಲಿಂಗ್ ಅಥವಾ ಉಗಿ ಉಸಿರಾಡುವಿಕೆಯ ಕಾರಣದಿಂದಾಗಿ ಕೋವಿಡ್ ಸೊಂಕನ್ನು ದೂರ ಮಾಡಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ

ಆದರೆ, ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಅಥವಾ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ ಒ) ನಿಂದ ಕೋವಿಡ್ ಸೋಂಕನ್ನು ದೂರ ಮಾಡಲು ಅಥವಾ ಅದರಿಂದ ರಕ್ಷಿಸಿಕೊಳ್ಳಲು ಸ್ಟೀಮ್ ಸಹಾಐ ಮಾಡುತ್ತದೆ ಎಂಬ ಯಾವುದೇ ಅಧಿಕೃತವಾಗಿ ಹೇಳಿಲ್ಲ ಎಂಬುವುದಾಗಿ  ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

Advertisement

ಈ ಬಗ್ಗೆ ಸುದ್ದಿ ಸಂಸ್ಥೆ ರಾಯಿಟರ್ಸ್ ಗೆ ಪ್ರತಿಕ್ರಿಯೆ ನೀಡಿದ ಸಿಡಿಸಿಯ ಪ್ರತಿನಿಧಿಯೊಬ್ಬರು, ಕೋವಿಡ್ ಸೋಂಕಿಗೆ ಸ್ಟೀಮ್ ಇನ್ ಹೇಲಿಂಗ್  ಸಹಾಯ ಮಾಡುತ್ತದೆ ಎನ್ನುವುದರ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಶೀತಗಳು ಮತ್ತು ಮೇಲ್ಭಾಗದ ಶ್ವಾಸ ಕೋಶದ ಸಮಸ್ಯೆಗಳಿಗೆ ಸಾಮಾನ್ಯವಾಗಿ ಪರಿಹಾರ ಮಾರ್ಗವಾಗಿ ಈ ಸ್ಟೀಮ್ ಇನ್ ಹೇಲಿಂಗ್ ಅಥವಾ  ಉಗಿ ಉಸಿರಾಡುವಿಕೆಯನ್ನು ಬಳಸಲಾಗುತ್ತದೆ.

ಆದರೆ ವೈಜ್ಞಾನಿಕ ಅಧ್ಯಯನಗಳು ಇದು ಕೆಲವು ಪ್ರಯೋಜನಗಳನ್ನು ಹೊಂದಿದೆ ಎಂದು ಸಾಬೀತು ಪಡಿಸಿದೆ. ಆದರೇ, ಚರ್ಮ ಸಂಬಂಧಿ ಕೆಲವು ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಿಳಿಸಿವೆ.

“ಬಿಸಿನೀರಿನಿಂದ ತುಂಬಿದ ಪ್ಯಾನ್ ಮೇಲೆ ಟವೆಲ್ ಅಥವಾ ಬೆಡ್ ಶೀಟ್ ನ ಸಹಾಯದಿಂದ ತಲೆ  ಮುಚ್ಚಿಕೊಂಡು ಉಗಿಯನ್ನು ಸೇವಿಸುವ ಸಾಮಾನ್ಯ ತಂತ್ರ ಇದಾಗಿದ್ದು, ಬಿಸಿ ದ್ರವ ಅಥವಾ ಕಂಟೇನರ್‌ ನ ಸಂಭಾವ್ಯ ಸಂಪರ್ಕದಿಂದಾಗಿ ಅಪಾಯಕಾರಿ” ಎಂದು ಸ್ಪ್ಯಾನಿಷ್ ಪೀಡಿಯಾಟ್ರಿಕ್ಸ್ ಅಸೋಸಿಯೇಷನ್‌ ನ ಅಧ್ಯಯನವು ಹೇಳಿದೆ.

ಇನ್ನು, ಬರ್ಮಿಂಗ್ ಹ್ಯಾಮ್ ನ ಮಕ್ಕಳ ಆಸ್ಪತ್ರೆ  ಸ್ಟೀಮ್ ಇನ್ ಹೇಲೇಷನ್  ಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ.

ಕೋವಿಡ್ ನಂತಹ ಮಾರಣಾಂತಿಕ ಸೋಂಕನ್ನು ಸ್ಟೀಮ್ ಇನ್ ಹೇಲೇಷನ್  ಗುಣಪಡಿಸದಿದ್ದರೂ ಸಹ, ನಿಮ್ಮ ದೇಹವು ಆರಾಮವಾಗುವಂತೆ ಮಾಡುತ್ತದೆ ಎನ್ನುತ್ತಾರೆ ಕೆಲವು ತಜ್ಞ ವೈದ್ಯರು.

ಇದನ್ನೂ ಓದಿ : ಭಾರತ: ಕಳೆದ 24ಗಂಟೆಗಳಲ್ಲಿ ದಾಖಲೆಯ 3.14 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next