Advertisement
ಶಾಕ್ ಕೆಲಸ ಮಾಡೋದು ಹೇಗೆ?ಶಾಕ್ ಒಳಗಡೆ ಆಯಿಲ್ ಇದ್ದು ಅದರ ಮೇಲ್ಭಾಗದಲ್ಲಿ ಪಿಸ್ಟನ್ ಇದ್ದು, ಅದರಲ್ಲಿ ರಿಬೌಂಡ್ ವಾಲ್ವ್ ಮತ್ತು ಕಂಪ್ರಷನ್ ವಾಲ್ವ್ ಅಡಕವಾಗಿರುತ್ತವೆ. ತಳದಲ್ಲಿರು ಆಯಿಲ್ ಮೆಕ್ಯಾನಿಕಲ್ ಶಕ್ತಿಯನ್ನು ಶಾಖವಾಗಿ ಪರಿವರ್ತಿಸುವುದರೊಂದಿಗೆ ತಡೆಯಂತೆ ವರ್ತಿಸುತ್ತದೆ. ಇದರಿಂದ ಕಂಪ್ರಷನ್ ವಾಲ್ ಮತ್ತು ರಿಬೌಂಡ್ ವಾಲ್ ಶಾಕ್‌ನ ಸ್ಪ್ರಿಂಗ್ ಮೇಲಕ್ಕೂ ಕೆಳಕ್ಕೂ ಸಂಚರಿಸಿ, ಆಘಾತವನ್ನು ತಡೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಪ್ರತಿ ಬಾರಿ ವಾಹನದ ಚಕ್ರ ಉಬ್ಬುತಗ್ಗು ಹಾದು ಹೋದಾಗ ಚಕ್ರ ಮಾತ್ರ ಮೇಲಕ್ಕೂ ಕೆಳಕ್ಕೂ ಸಂಚರಿ ಸುವಂತೆ ಮಾಡಿ, ವಾಹನದ ಬಾಡಿಗೆ ಅದರ ಪರಿಣಾಮ ತಟ್ಟದಂತೆ ಮಾಡುತ್ತದೆ.
ಚಿಮ್ಮುವ ಅನುಭವ: ಶಾಕ್ ಹಾಳಾದರೆ ಲೆಕ್ಕಕ್ಕಿಂತ ಹೆಚ್ಚು ಚಿಮ್ಮಿದಂತೆ ಅಥವಾ ಏರು ತಗ್ಗುಗಳಲ್ಲಿ ಕೆಲವೊಮ್ಮೆ ಪ್ರತಿಕ್ರಿಯೆ ಇಲ್ಲದಂತೆ ಇರಬಹುದು. ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಇರುವ ಕಾರುಗಳಲ್ಲಿ ಹಂಪ್‌ಗ್ಳಲ್ಲಿ ಅಡಿ ತಾಗುವ ಸಂಭವವೂ ಇರುತ್ತದೆ. ಸ್ಟೀರಿಂಗ್ ವೀಲ್ ಅದುರುವಿಕೆ: ಶಾಕ್ ಹಾಳಾದಾಗ ಸ್ಟೀರಿಂಗ್ ವೀಲ್ ವಿಪರೀತ ವೈಬ್ರೇಷನ್ ಇರಬಹುದು. ವೇಗದ ಚಾಲನೆಯಲ್ಲಿ ಇದು ಹೆಚ್ಚಾಗಿ ಕಂಡು ಬರಬಹುದು.
Related Articles
Advertisement
ಟಯರ್ ಸವೆತ: ಶಾಕ್ ಸರಿಯಿಲ್ಲದಿದ್ದರೆ, ಟಯರ್ ಹೆಚ್ಚು ಸವೆಯಬಹುದು/ ಒಂದೇ ಭಾಗದಲ್ಲಿ ಹೆಚ್ಚು ಸವೆತ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಮೇಲಿನ ಯಾವುದಾದರೊಂದು ಸಮಸ್ಯೆ ಕಂಡಬಂದಲ್ಲಿ ಕೂಡಲೇ ಮೆಕ್ಯಾನಿಕ್‌ಗಳನ್ನು ಭೇಟಿಯಾಗುವುದು ಉತ್ತಮ. ಶಾಕ್‌ನ ಆಯಿಲ್ ಸೀಲ್ ಹೋಗಿ ಲೀಕ್ ಆಗುತ್ತಿದ್ದರೆ, ಹೊಸ ಆಯಿಲ್, ಸೀಲ್ ಹಾಕುವುದೇ ಇದಕ್ಕಿರುವ ಪರಿಹಾರವಾಗಿದೆ. ಪ್ರತಿ ಬಾರಿ ಸರ್ವಿಸ್ ವೇಳೆ ಇದರ ಪರಿಶೀಲನೆ ಉತ್ತಮ.
ಶಾಕ್‌ಗಳು ಹಾಳಾಗುವುದು ಹೇಗೆ?·ಶಾಕ್‌ಗಳಲ್ಲಿ ಆಯಿಲ್ ಹೊರಗೆ ಬಾರದಂತೆ ತಡೆಯುವ ಸೀಲ್‌ಗಳಿದ್ದು ಅದಕ್ಕೆ ಹಾನಿಯಾದರೆ ಆಯಿಲ್ ಹೊರಬಂದು ಪರಿಣಾಮಕಾರಿಯಾಗಿ ವರ್ತಿಸದೇ ಇರಬಹುದು.
·ಆಘಾತದಿಂದಾಗಿ ಶಾಕ್ ಒಳಗಿನ ಪಿಸ್ಟನ್‌ಗೆಹಾನಿಯಾಗುತ್ತದೆ. ಬೆಂಡ್ ಬಂದರೆ ಸರಿಯಾಗಿ ಮೇಲಕ್ಕೂ ಕೆಳಕ್ಕೂ ಹೋಗದೆ ಸಮಸ್ಯೆಯಾಗುತ್ತದೆ.
·ಶಾಕ್ ಒಳಗಿನ ಸಣ್ಣ ಬಿಡಿಭಾಗಗಳು ಹಾಳಾದರೂ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ·ಶಾಕ್‌ಗಳು ತುಂಬ ಹಳತಾದರೆ ಕೂಡ ಅದು ಪರಿಣಾಮಕಾರಿಯಾಗಿರುವುದಿಲ್ಲ.