Advertisement

ಮಕ್ಕಳ ಭವಿಷ್ಯಕ್ಕೆ ರಿಯಲ್‌ ಎಸ್ಟೇಟ್‌ ಹೂಡಿಕೆ ಉತ್ತಮವೇ?

06:00 AM Dec 24, 2018 | |

ಹೂಡಿಕೆ ಅಂದರೆ ಮ್ಯೂಚವಲ್‌ ಫ‌ಂಡ್‌ ಮಾತ್ರವಲ್ಲ. ರಿಯಲ್‌ ಎಸ್ಟೇಟೂ ಇದೆ. ಮಕ್ಕಳ ಭವಿಷ್ಯಕ್ಕಾಗಿ ಇಲ್ಲೂ ಹಣ ಹೂಡಬಹುದು. ಅದಕ್ಕಿಂತ ಮೊದಲು ಏನೇನು ಮುಖ್ಯ ಸಂಗತಿಗಳನ್ನು ತಿಳಿದುಕೊಳ್ಳಬೇಕು ಅನ್ನೋ ಮಾಹಿತಿ ಇಲ್ಲಿದೆ… 

Advertisement

ಮಕ್ಕಳ  ಭವಿಷ್ಯಕ್ಕಾಗಿ ಹಣ ಉಳಿಸಿ ದೀರ್ಘಾವಧಿಗೆ ಹೂಡಿಕೆ ಮಾಡ ಬಯಸುವ ಬಹುತೇಕ ಪೋಷಕರು ಯಾವ ಮಾಧ್ಯಮದಲ್ಲಿ ಹಣ ಹೂಡಿದರೆ ಹೆಚ್ಚು ಲಾಭದಾಯಕ ಎಂಬ ಪ್ರಶ್ನೆ ಕಾಡುವುದು ಸಹಜ.

ಆಗ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. 

ಹೆತ್ತವರ ಮುಂದಿರುವ ಆಯ್ಕೆಗಳಲ್ಲಿ ರಿಯಲ್‌ ಎಸ್ಟೇಟ್‌ ಕೂಡ ಒಂದು. ಮಕ್ಕಳ ಭವಿಷ್ಯಕ್ಕೆಂದು ಒಂದು ತುಂಡು ಭೂಮಿಯನ್ನು ಖರೀದಿಸಿಡುವ ಹೆತ್ತವರ ಸಂಖ್ಯೆ ಕಡಿಮೆ ಏನಿಲ್ಲ. ಅದೇ ರೀತಿ ನಗರವಾಸಿಗಳು ತಾವು ಬಾಡಿಗೆ ಮನೆಯಲ್ಲಿರುತ್ತಾ ಮಕ್ಕಳ ಭವಿಷ್ಯಕ್ಕೆಂದು ಫ್ಲಾ$Âಟ್‌ ಖರೀದಿಸಿ, ಅದನ್ನು ಬಾಡಿಗೆಗೆ ಬಿಟ್ಟು, ಅದರಿಂದ ಬರುವ ಆದಾಯವನ್ನು ಸಾಲ ತೀರಿಸಲೋ ಅಥವಾ ಸ್ವಂತ ವಾಸಕ್ಕೇ ಬಳಸಿದರೆ ಬಾಡಿಗೆ ಉಳಿಯುತ್ತದೆ. ಆ ಹಣವನ್ನು ಇನ್ನೊಂದು ಕಡೆ ಹೂಡಬಹುದು ಅಂತೆಲ್ಲಾ ಯೋಚನೆ ಮಾಡುತ್ತಾರೆ. 

ಈ ಹಿನ್ನೆಲೆಯಲ್ಲಿ ಎದುರಾಗುವ ಬಹುಮುಖ್ಯ ಪ್ರಶ್ನೆ ಏನೆಂದರೆ-ಇದರಲ್ಲಿ ಫ್ಲ್ಯಾಟ್‌ ಅಥವಾ ಖಾಲಿ ನಿವೇಶನ- ಯಾವುದರ ಮೇಲಿನ ಹೂಡಿಕೆ ಒಳ್ಳೆಯದು?

Advertisement

ನಗದೀಕರಣ ಕಷ್ಟ
ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಸುಲಭ. ನಗದೀಕರಣ ಬಲು ಕಷ್ಟ. ತುರ್ತು ಸಂದರ್ಭದಲ್ಲಿ ಅದನ್ನು ಅಡವಿಟ್ಟು ಸಾಲ ಪಡೆಯುವ ಪ್ರಕ್ರಿಯೆ ಕೂಡ ಸಂಕೀರ್ಣವಾದದ್ದು. ಏಕೆಂದರೆ, ಲೀಗಲ್‌ ಒಪೀನಿಯನ್‌, ಟೈಟಲ್‌ ಡೀಡ್‌ ಠೇವಣಿ, ಲೋನ್‌ ಪ್ರಾಸೇಸಿಂಗ್‌ ಶುಲ್ಕ ಮುಂತಾದವೆಲ್ಲ ಕಿರಿಕಿರಿಯ ಸಂಗತಿಗಳೇ.  ಹೀಗಿದ್ದಾಗ ಮಕ್ಕಳ ಭವಿಷ್ಯಕ್ಕೆಂದು ರಿಯಲ್‌ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಸಾಧುವೇ, ಅಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಈ ಸಂದರ್ಭದಲ್ಲಿ ನಾವು ಇನ್ನೂ ಒಂದು ದೃಷ್ಟಿಕೋನದಿಂದ ರಿಯಲ್‌ ಎಸ್ಟೇಟ್‌ ಹೂಡಿಕೆ ಮತ್ತು ಬ್ಯಾಲನ್ಸ್‌ ಫ‌ಂಡ್‌ (ಮ್ಯೂಚುವಲ್‌ ಫ‌ಂಡ್‌) ಹೂಡಿಕೆಯಲ್ಲಿ ಹೇಗೆ ಲಾಭವಾಗುತ್ತದೆ ಅನ್ನೋದನ್ನು ನೋಡಬೇಕಾಗುತ್ತದೆ.  

ಮೊದಲನೆಯದಾಗಿ ರಿಯಲ್‌ ಎಸ್ಟೇಟ್‌ ಹೂಡಿಕೆಯನ್ನು ಗಮನಿಸೋಣ : 
ನೀವು 60 ಲಕ್ಷ ರೂ.ಗೆ ಮನೆಯನ್ನು ಖರೀದಿಸುತ್ತೀರಿ ಎಂದಿಟ್ಟುಕೊಳ್ಳೋಣ. ಬ್ಯಾಂಕ್‌ ಸಾಲಕ್ಕೆ ಇದರ ಡೌನ್‌ ಪೇಮೆಂಟ್‌ 10 ಲಕ್ಷ; ಮನೆ ಸಾಲ 50 ಲಕ್ಷ; ಒಟ್ಟು 60 ಲಕ್ಷ.  ಈ ಸಾಲದ ಮೇಲಿನ ಬಡ್ಡಿ ಶೇ.8.5; ಸಾಲ ಮರುಪಾವತಿಯ ಅವಧಿ 15 ವರ್ಷ; ಸಾಲ ಮರುಪಾವತಿಯ ಇಎಂಐ : 49,237 (ತಿಂಗಳ ಸಾಲದ ಕಂತು).

15 ವರ್ಷದ ಸಾಲದ ಅವಧಿಯಲ್ಲಿ 50 ಲಕ್ಷ ಪಾವತಿಸುವಾಗ ನಾವು ಪಾವತಿಸುವ ಬಡ್ಡಿಯ ಒಟ್ಟು ಮೊತ್ತ : 38.63 ಲಕ್ಷರೂ. ಎಂದರೆ ನಾವು ಪಾವತಿಸುವ ಒಟ್ಟು ಮೊತ್ತ : 98.63 ಲಕ್ಷರೂ. ಸಾಲ ಮರುಪಾವತಿಯ 15 ವರ್ಷಗಳ ಅವಧಿಯಲ್ಲಿ ರಿಯಲ್‌ ಎಸ್ಟೇಟ್‌ ಶೇ.8ರ ಬೆಳವಣಿಗೆಯನ್ನು ಕಂಡಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮ ಆಸ್ತಿ ಮೌಲ್ಯ 1.9 ಕೋಟಿ ರೂ. ಆಗುತ್ತದೆ. ಅಂದರೆ ನಿವ್ವಳ ಆಸ್ತಿ ಮೌಲ್ಯ 91.7 ಲಕ್ಷ$ ರೂ. ಆಗಿರುತ್ತದೆ. 

ಈಗ ನಾವು ಇದೇ 60 ಲಕ್ಷರೂ. ಹೂಡಿಕೆಯನ್ನು (50 ಲಕ್ಷ ರೂ. ಸಾಲ ಮೊತ್ತ ಮತ್ತು 10 ಲಕ್ಷ ರೂ. ಡೌನ್‌ ಪೇಮೆಂಟ್‌ ಮೊತ್ತ) ಬ್ಯಾಲನ್ಸಫ‌ಂಡ್‌ನ‌ಲ್ಲಿ ಹೂಡಿದಲ್ಲಿ ಅದು ಯಾವ ಮೊತ್ತಕ್ಕೆ ಬೆಳೆಯಲು ಸಾಧ್ಯ ಎಂಬುದನ್ನು ನೋಡೋಣ-
1. ಬ್ಯಾಲನ್ಸ್‌ ಫ‌ಂಡ್‌ ಹೂಡಿಕೆಯಲ್ಲಿ ಮೊತ್ತ ಮೊದಲಾಗಿ 10 ಲಕ್ಷ ರೂ.ಗಳನ್ನು ಏಕಗಂಟಿನಲ್ಲಿ ಶೇ.10ರ ಇಳುವರಿಯೊಂದಿಗೆ ಹೂಡೋಣ.
2. ಅನಂತರ ಪ್ರತೀ ತಿಂಗಳೂ (ಗೃಹಸಾಲ ಕಂತನ್ನು ಕಟ್ಟುವ ರೀತಿಯಲ್ಲಿ) 15 ವರ್ಷಗಳ ಅವಧಿಗೆ ಪ್ರತೀ ತಿಂಗಳಿಗೆ 49,237 ರೂ. ಹೂಡೋಣ.

ಈಗ ನಮ್ಮ ಹೂಡಿಕೆ ಸ್ವರೂಪ ಹೀಗಿರುತ್ತದೆ
1. ಬ್ಯಾಲನ್ಸ್‌ ಫ‌ಂಡ್‌ನ‌ಲ್ಲಿ ಏಕ ಗಂಟಿನ ಹೂಡಿಕೆ 10 ಲಕ್ಷ ರೂ.
2. 15 ವರ್ಷಗಳ ಅವಧಿಯಲ್ಲಿ ಪ್ರತೀ ತಿಂಗಳೂ 49,237 ರೂ. ಪ್ರಕಾರ ಪಾವತಿಸುವ ಸಿಪ್‌ (ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌).
15 ವರ್ಷಗಳ ಬಳಿಕ ನಮ್ಮ ಹೂಡಿಕೆ : 
1. ಏಕಗಂಟಿನ ಹೂಡಿಕೆಯ ಮೌಲ್ಯ : 41.77 ಲಕ್ಷ ರೂ.
2. ಸಿಪ್‌ ಕಂತು ಮೊತ್ತದ ಒಟ್ಟು ಮೌಲ್ಯ : 2.04 ಕೋಟಿ ರೂ. 
ನಿವ್ವಳ ಗಳಿಕೆ : 1.4 ಕೋಟಿ ರೂ. 
ಈ ಮೇಲಿನ ವಿಶ್ಲೇಷಣೆಯಲ್ಲಿ ರಿಯಲ್‌ ಎಸ್ಟೇಟ್‌ ಗಿಂತ ಬ್ಯಾಲನ್‌x$Õಫ‌ಂಡ್‌ ಹೂಡಿಕೆಯೇ ಹೆಚ್ಚು ಲಾಭದಾಯಕ, ಆಕರ್ಷಕ, ಸುಲಭ ನಗದೀಕರಣಕ್ಕೆ ಅವಕಾಶವಿರುವ ಹೂಡಿಕೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು. 

– ಸತೀಶ್‌ ಮಲ್ಯ

Advertisement

Udayavani is now on Telegram. Click here to join our channel and stay updated with the latest news.

Next