Advertisement

ಮಳೆಗಾಲಕ್ಕೆ ರೆಡೀನಾ, ಟಯರ್‌ ಹೇಗಿದೆ ? 

03:44 PM May 25, 2018 | |

ಮಳೆಗಾಲ ಸಮೀಪಿಸುತ್ತಿದೆ. ಈ ಹೊತ್ತಿನಲ್ಲಿ ನಿಮ್ಮ ವಾಹನದ ಟಯರ್‌ ಹೇಗಿದೆ ಎನ್ನುವುದು ಅತಿ ಅಗತ್ಯ. ಸುರಕ್ಷಿತ
ಚಾಲನೆಗೆ ಇದು ಮಹತ್ವದ್ದು ಕೂಡ. ಟಯರ್‌ ಸವೆದಿದ್ದರೆ ಮಳೆಗಾಲದಲ್ಲಿ ಚಾಲನೆ ಅತಿ ಅಪಾಯಕಾರಿಯೂ ಹೌದು.
ಆದ್ದರಿಂದ ಟಯರ್‌ ಬಗ್ಗೆ ಕೇರ್‌ ತೆಗೆದುಕೊಳ್ಳುವುದು ಒಳ್ಳೆಯದು.

Advertisement

ಹೀಗೆ ನೋಡಿ
ನಿಮ್ಮ ಬಳಿ ಕಾರ್‌ ಇದ್ದರೆ ಅವುಗಳ ನಾಲ್ಕೂ ಟಯರ್‌ ಗಳನ್ನು ಚೆಕ್‌ ಮಾಡಿ ಒಂದು ರೂ. ನಾಣ್ಯ ಹಿಡಿದು ಅದರ
ತ್ರೆಡ್ ಗೆ ಹಿಡಿದು ನೋಡಿ. ನಾಲ್ಕೂ ಟಯರ್‌ಗಳ ತ್ರೆಡ್  ಸಮಾನಾಂತರವಾಗಿ ಸವೆದಿದ್ದರೆ ಏನೂ ಚಿಂತೆ
ಇಲ್ಲ. ಆದರೆ ವ್ಯತ್ಯಾಸವಿದ್ದರೆ ಅಲೈನ್‌ಮೆಂಟ್‌ ವ್ಯತ್ಯಾಸವಿದೆ ಎಂದರ್ಥ. ಇದಕ್ಕಾಗಿ ಕೂಡಲೇ ವೀಲ್‌ ಅಲೈನ್‌
ಮೆಂಟ್‌/ ಬ್ಯಾಲೆನ್ಸಿಂಗ್‌ ಮಾಡಿಸಿಕೊಳ್ಳಬೇಕು. ಇದರೊಂದಿಗೆ ಟಯರ್‌ ಬದಿ ಊದಿಕೊಂಡಿದ್ದರೆ ಕೂಡಲೇ ಟಯರ್‌ ಬದಲಾಯಿಸಬೇಕು. ಮಳೆಗಾಲಕ್ಕೂ ಮೊದಲೇ ಸವೆದ ಟಯರ್‌ ಬದಲಾಯಿಸುವುದು ಒಳ್ಳೆಯದು.

ಟಯರ್‌ ಬದಲಿಸುವ ಮುನ್ನ
ಟಯರ್‌ ಸವೆದಿದ್ದರೆ, ಎಲ್ಲ ಟಯರ್‌ ಗಳನ್ನೂ ಬದಲಾಯಿಸುವುದು ಉತ್ತಮ  ಅಥವಾ ಎರಡು ಟಯರ್‌ಗಳನ್ನು ಮಾತ್ರ ಬದಲಿಸಬಹುದು. ಈ ವೇಳೆ ಟಯರ್‌ ಗಳನ್ನು ಅದಲು ಬದಲು ಮಾಡಿಯೇ ಹಾಕಬೇಕು. ಇದರಿಂದ ಸಮತೋಲನಕ್ಕೆ ಕಾಪಾಡಿಕೊಳ್ಳಲು ಉತ್ತಮ.

ಟಯರ್‌ ಕ್ಲೀನಾಗಿಡಿ, ಪ್ರೆಶರ್‌ ನೋಡಿ
ಕೆಸರಿನಲ್ಲಿ ಟಯರ್‌ ಹೋಗಿದ್ದರೆ, ಟಯರ್‌ ಆದಷ್ಟೂ ಕ್ಲೀನಾಗಿರುವಂತೆ ನೋಡಿ. ಮಣ್ಣು ಹಿಡಿದಿದ್ದರೆ, ಟಯರ್‌ಗೆ ಏನಾದರೂ ಸಮಸ್ಯೆ ಇದ್ದರೆ ಗೋಚರವಾಗದು. ಇದರೊಂದಿಗೆ ಸಮಪ್ರಮಾಣದ, ಬೇಕಾದಷ್ಟು ಪ್ರೆಶರ್‌ ಟಯರ್‌ಗೆ ಇರಲಿ. ಇದಕ್ಕಾಗಿ ನಿಮ್ಮ ಕಾರಿನ ಯೂಸರ್‌ ಮ್ಯಾನ್ಯುವಲ್‌ ನೋಡುವುದು ಒಳ್ಳೆಯದು. ಜತೆಗೆ ಜೋರು ಮಳೆಯ ಸಂದರ್ಭ ನಿಧಾನವಾಗಿ ಡ್ರೈವ್‌ ಮಾಡುವುದು ಹೆಚ್ಚು ಸುರಕ್ಷಿತ. 

ಬೈಕ್‌ ಟಯರ್‌ ಕೇರ್‌
ಬೈಕ್‌ನಲ್ಲೂ ಟಯರ್‌ ಸವೆದಿದ್ದರೆ ತತ್‌ಕ್ಷಣ ಬದಲಾಯಿಸಿ. ಮಳೆಗಾಲದಲ್ಲಿ ರಸ್ತೆಯಲ್ಲಿ ದೊಡ್ಡ ವಾಹನಗಳ ಆಯಿಲ್‌ ಬಿದ್ದು ನೀರಿನೊಂದಿಗೆ ಮಿಶ್ರ ಆಗುವುದರಿಂದ ಸ್ಕಿಡ್‌ ಆಗುವ ಸಮಸ್ಯೆ ಹೆಚ್ಚಿರುತ್ತದೆ. ಟಯರ್‌ ತ್ರೆಡ್  ಅನ್ನು ನೋಡಿ, ಟಯರ್‌ ಅನ್ನು ಬದಲಾಯಿಸಿ. ದ್ವಿಚಕ್ರ ವಾಹನಗಳನ್ನು ಮಳೆಗಾಲದಲ್ಲಿ ನಿಧಾನವಾಗಿ, ಚಾಲನೆ ಮಾಡುವುದು ಸೂಕ್ತ.

Advertisement

ಈಶ 

Advertisement

Udayavani is now on Telegram. Click here to join our channel and stay updated with the latest news.

Next