Advertisement

Tollywood: ರಾಮ್‌ ಚರಣ್‌ ಜೊತೆ ಸಿನಿಮಾ ಮಾಡಲಿದ್ದಾರ ರಾಜ್‌ಕುಮಾರ್ ಹಿರಾನಿ?

05:38 PM Oct 05, 2023 | Team Udayavani |

ಹೈದರಾಬಾದ್: ಮೆಗಾ ಪವರ್‌ ಸ್ಟಾರ್‌ ರಾಮ್‌ ಚರಣ್‌ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಅವರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

ರಾಮ್‌ ಚರನ್‌ ಇತ್ತೀಚೆಗೆ ಮುಂಬಯಿಯ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದಲ್ಲದೇ ಅವರು ಟೀಮ್‌ ಇಂಡಿಯಾದ ಮಾಜಿ ಕಪ್ತಾನ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಭೇಟಿ ಆಗಿದ್ದರು. ಈ ಸಂದರ್ಭದಲ್ಲಿನ ಅವರ ಫೋಟೋಗಳು ವೈರಲ್‌ ಆಗಿದೆ. ಇದೀಗ ರಾಮ್‌ ಚರಣ್‌ ಸಿನಿಮಾದ ವಿಚಾರವಾಗಿ ಸುದ್ದಿಯಾಗಿದ್ದಾರೆ.

ʼಆರ್‌ ಆರ್‌ ಆರ್‌ʼ ಬಳಿಕ ರಾಮ್‌ ಚರಣ್‌ ಶಂಕರ್‌ ಅವರ ಬಿಗ್‌ ಪ್ರಾಜೆಕ್ಟ್‌ ʼಗೇಮ್‌ ಚೇಂಜರ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಗೊತ್ತೇ ಇದೆ. ಬಾಲಿವುಡ್‌ ಸೂಪರ್‌ ಹಿಟ್‌ ನಿರ್ದೇಶಕರೊಬ್ಬರು ರಾಮ್‌ ಚರಣ್‌ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ವರದಿಗಳ ಪ್ರಕಾರ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ರಾಮ್‌ ಚರಣ್‌ ಅವರ ಜೊತೆ ಸಿನಿಮಾದ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಿನಿಮಾದ ಕಥೆಯ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಸದ್ಯ ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿನ ಮೆಗಾ ಪವರ್‌ ಸ್ಟಾರ್‌ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಸೌತ್‌ ಸ್ಟಾರ್‌ ಜೊತೆ ಬಾಲಿವುಡ್‌ ಸೂಪರ್‌ ಹಿಟ್‌ ನಿರ್ದೇಶಕನ ಸಿನಿಮಾವೆಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

Advertisement

ಸದ್ಯ ರಾಜ್‌ ಕುಮಾರ್‌ ಹಿರಾನಿ ಅವರು ಶಾರುಖ್‌ ಅವರ ʼ ಡಂಕಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಡಿಸೆಂಬರ್‌ 22 ರಂದು ರಿಲೀಸ್‌ ಆಗಲಿದೆ. ಅದೇ ದಿನ ʼಸಲಾರ್‌ʼ ರಿಲೀಸ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next