ಮಣಿಪಾಲ: ರಾಜ್ಯದಲ್ಲಿ ಕೋವಿಡ್ 19 ನಿಯಮಾವಳಿಗಳನ್ನು ಅನುಸರಿಸುವ ವಿಚಾರದಲ್ಲಿ ಜನರಿಗಿಂತ ಜನಪ್ರತಿನಿಧಿಗಳೇ ಹೆಚ್ಚಿನ ನಿರ್ಲಕ್ಷ್ಯವನ್ನು ತೋರಿಸುತ್ತಿದ್ದಾರೆ ಎಂಬ ಮಾತಿಗೆ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಪ್ರಶಾಂತ್ ಜೆ ಎಸ್: ಜನಪ್ರತಿನಿಧಿಗಳು ಅಂದರೆ ಪ್ರಜಾಪ್ರಭುತ್ವದಲ್ಲಿ “ಪ್ರಭುಗಳು” ಹಾಗಾಗಿ ಅವರಿಷ್ಟದಂತೆ ಬದುಕುವ ಹಕ್ಕನ್ನು ಸಂವಿಧಾನದತ್ತವಾಗಿ ಪಡೆದಿದ್ದಾರೆ. ಅದು ಪ್ರಶ್ನಾತೀತ. ಪ್ರಜೆಗಳ ಪ್ರಶ್ನೆಗೆ ಸರಿಯಾದ ಉತ್ತರವೆಲ್ಲಿ?
ಸತೀಶ್ ರಾವ್; ನಿಯಮಗಳನ್ನು ರೂಪಿಸುವವರು ಅದಕ್ಕೆ ಬದ್ಧರಾಗಿರಬೇಕು, ಹಾಗೂ ಅದನ್ನು ಸರಿಯಾಗಿ ಪಾಲಿಸಬೇಕು ಇಲ್ಲದಿದ್ದರೆ, ತೀರ ಸಾಮಾನ್ಯ ಜನರಿಂದಲೂ ಹೇಳಿಸಿ ಕೊಳ್ಳಬೇಕಾಗುತ್ತದೆ
ಚಿ. ಮ. ವಿನೋದ್ ಕುಮಾರ್: ಜನರಿಗೆ ಮಾದರಿಯಾಗಿರಬೇಕಾದ ಜನಪ್ರತಿನಿಧಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯತೆಯಿಂದ ನಡೆದು ಕೊಳ್ಳುತ್ತಿರುವುದು ದೊಡ್ಡ ತಪ್ಪು. ಅಂಥವರ ಸದಸ್ಯತ್ವವನ್ನು ರದ್ದುಗೊಳಿಸುವಂತಃ ನಿಯಮಗಳನ್ನು ಸರ್ಕಾರ ಜಾರಿಗೆ ತರಬೇಕು.
ಹರೀಶ್ ಆರ್ ಪುತ್ತೂರ್: ಒಳ್ಳೇದು ಅವರಿಗೆ ಏನೂ ಆಗೋಲ್ಲ