ಬಯಕೆಯ ಬಲೆಯಲ್ಲಿ ಬಿದ್ದು ಹೊರಳಾಡಿದಷ್ಟು ಖುಷಿ ಮರಿಚೀಕೆಯಾಗಿ ಉಳಿದುಬಿಡುತ್ತದೆ. ಆಸೆಗಳ ಪಟ್ಟಿ ಜಾಸ್ತಿಯೇ? ಪಡೆದಷ್ಟು ಪಡೆಯಬೇಕು ಹಂಬಲಗಳ ರಾಶಿ ಮುಗಿಯದು.
ಇನ್ನು ಬೇಕು ಮತ್ತಷ್ಟು ಬೇಕು ಎನ್ನುವ ಗುಣವೇ ಬಯಸಿದೆಲ್ಲ ಸಿಕ್ಕಿದ್ದರೆ ಬಯಕೆಗೆ ಮಿತಿಯಿಲ್ಲದೇ ಬಯಕೆಯ ಪದಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಬಯಸಿದೆಲ್ಲ ಸಿಗುವುದು ಕಷ್ಟವೇ, ಕೆಲವು ಕಷ್ಟ ಪಟ್ಟು ಗಳಿಸಬೇಕು ಮತ್ತೆ ಕೆಲವು ಋಣದಲ್ಲಿ ಇಬೇìಕು ಜತೆಗೆ ಅದೃಷ್ಟವು ಇರಬೇಕು ಎಲ್ಲವು ಸುಲಭವಾಗಿ ಸಿಕ್ಕಿ ಬಿಟ್ಟರೆ ಬಯಕೆ ಅನ್ನುವ ಪದವೇ ಹುಟ್ಟುತಿರಲಿಲ್ಲ. ಕೆಲವರಿಗೆ ಬಯಸಿದ್ದೆಲ್ಲ ಸುಲಭವಾಗಿ ಸಿಗುತ್ತದೆ ಇನ್ನು ಕೆಲವರಿಗೆ ಎಷ್ಟೇ ಕಷ್ಟಪಟ್ಟರು ಸಿಗುವುದೇ ಇಲ್ಲ. ಇರುವಷ್ಟು ಜೀವನದ ಖುಷಿ ಅಂದುಕೊಂಡರೆ ನೆಮ್ಮದಿಯಿಂದ ಬದುಕಬಹುದು. ಆಸೆಗಳ ಬೆನ್ನೇರಿ ಹೋದಷ್ಟು ನಿರಾಸೆ ಭಾವಗಳು ಸೃಷ್ಟಿಯಾಗಿ ಬಯಕೆಗಳು ಸೋತು ಜೀವನವು ಜಿಗುಪ್ಸೆ ಹಂತಕ್ಕೆ ಬರುತ್ತದೆ.
ಸಣ್ಣ ಖುಷಿ ಅನುಭವಿಸಲಾಗದೆ ದೊಡ್ಡ ಮಟ್ಟದ ಆನಂದವನ್ನು ಹುಡುಕುತ್ತಾ ಏನು ಪಡೆದುಕೊಂಡಿಲ್ಲ ಜೀವನ ಅಂದರೆ ಇಷ್ಟೇ? ಪ್ರಶ್ನೆಗಳಲ್ಲಿ ಜೀವನ ಸವೆದು ಹೋಗುತ್ತದೆ ಅಷ್ಟೇ, ಇರುವಷ್ಟರಲ್ಲಿ ಇರುವುದರಲ್ಲಿ ಖುಷಿಯನ್ನು ಕಂಡುಕೊಂಡಷ್ಟು ಬದುಕು ಮನಸ್ಸು ದಿವ್ಯವಾದ ನೆಮ್ಮದಿಯನ್ನು ಪಡೆದುಕೊಂಡಂತೆ.
ಬಯಕೆಯು ಮಿತಿಮೀರಿ ಹೋದಾಗ ಹೊಸ ಹೊಸ ಕಹಿ ಅನುಭವಗಳು ಉದ್ಭವಿಸುತ್ತದೆ. ತೀರದ ಬಯಕೆಗೆ ಕಡಿವಾಣ ಹಾಕದೆ ಹೋದಾಗ ನೋವು ಮತ್ತು ಹತಾಶೆ ಜೀವಿಸುತ್ತದೆ. ಸಾಧ್ಯವಾಗುವುದಾದರೆ ಬಯಸಿದರೆ ಸಿಗಬಹುದು. ಅಸಾಧ್ಯವಾದದ್ದನ್ನು ಬಯಸಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಬೇಕು ಅಂದುಕೊಂಡು ಬಯಸಿ ಪಡೆದಾಗ ದಕ್ಕುವುದು ಅಸಾಧ್ಯವೇ ಹೌದು ಖುಷಿ ಗಿಂತ ನೆಮ್ಮದಿ ಹಾಳಾಗೋದಂತು ನಿಜವೇ. ಬಯಕೆಗಳು ಏನೇ ಇರಲಿ ನಮಗಿರುವ ಆರ್ಥಿಕ ವ್ಯವಸ್ಥೆಗೆ ತಕ್ಕಂತೆ ಬದುಕನ್ನು ರೂಪಿಸಿ ಕೊಂಡಾಗ ಮಾತ್ರ ಬದುಕಿಗೆ ಅರ್ಥ ಸಿಕ್ಕಂತೆ.
-ವಾಣಿ
ಮೈಸೂರು