Advertisement

ಇನ್ನು ವಾಟ್ಸ್‌ಆ್ಯಪ್‌ “ಸ್ಟೇಟಸ್‌’ನೋಡೋದು ಸುಲಭ?

07:18 PM Aug 22, 2022 | Team Udayavani |

ವಾಷಿಂಗ್ಟನ್‌: ಇತ್ತೀಚೆಗಷ್ಟೇ ಬಳಕೆದಾರರ ಖಾಸಗಿತನದ ಹಕ್ಕನ್ನು ಬಿಗಿಗೊಳಿಸಿ, ಗ್ರೂಪ್‌ ಅಡ್ಮಿನ್‌ಗಳಿಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟ ವಾಟ್ಸ್‌ಆ್ಯಪ್‌ ಈಗ ಮತ್ತೊಂದು ಹೊಸ ಫೀಚರ್‌ ಪರಿಚಯಿಸಲು ಮುಂದಾಗಿದೆ.

Advertisement

ಅದೇನೆಂದರೆ, ಇನ್ನು ಮುಂದೆ ಬಳಕೆದಾರರು ತಮ್ಮ ಸ್ನೇಹಿತರು ಹಾಗೂ ಸಂಪರ್ಕಿತರ ಸ್ಟೇಟಸ್‌ಗಳನ್ನು ನೇರವಾಗಿ ಚಾಟ್‌ ಲಿಸ್ಟ್‌ನಲ್ಲೇ ನೋಡಬಹುದು!

ಹೌದು, ಪ್ರಸ್ತುತ ನೀವು ನಿಮ್ಮ ಸ್ನೇಹಿತರ ವಾಟ್ಸ್‌ಆ್ಯಪ್‌ ಸ್ಟೇಟಸ್‌ ನೋಡಬೇಕೆಂದರೆ, “ಸ್ಟೇಟಸ್‌’ ಎಂಬ ಪ್ರತ್ಯೇಕ ವಿಭಾಗಕ್ಕೆ ಹೋಗಿ ವೀಕ್ಷಿಸಬೇಕಾಗುತ್ತದೆ. ಆದರೆ, ಇನ್ನು ಮುಂದೆ ಸ್ನೇಹಿತರ ಪ್ರೊಫೈಲ್‌ ಫೋಟೋವನ್ನು ಕ್ಲಿಕ್‌ ಮಾಡಿದರೆ ಸಾಕು, ಅವರ “ಸ್ಟೇಟಸ್‌’ ಕಾಣಿಸಿಕೊಳ್ಳುತ್ತದೆ. ಸದ್ಯಕ್ಕೆ ಆಂಡ್ರಾಯ್ಡ ಪ್ಲಾಟ್‌ಫಾರಂನಲ್ಲಿ ಈ ಹೊಸ ಫೀಚರ್‌ ಅನ್ನು ಪರೀಕ್ಷಿಸಲಾಗುತ್ತಿದೆ. ನಂತರ ಹಂತ ಹಂತವಾಗಿ ಅವುಗಳ ಅಂತಿಮ ಆವೃತ್ತಿಯನ್ನು ಹೊರಬಿಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next