Advertisement

ಝಾಕಿರ್‌ ನಾಯ್ಕ ಭಾಷಣದಿಂದ ಉಗ್ರ ಸಂಘಟನೆ ರಚನೆಗೆ ಪ್ರೇರಣೆ

11:48 AM Jul 25, 2019 | mahesh |

ಮುಂಬೈ: ಕಳೆದ ಜನವರಿಯಲ್ಲಿ ಮಹಾರಾಷ್ಟ್ರದಲ್ಲಿ ಉಗ್ರ ನಿಗ್ರಹ ಪಡೆಗೆ ಸಿಕ್ಕಿಬಿದ್ದ ಇಸ್ಲಾಮಿಕ್‌ ಸ್ಟೇಟ್ ಪ್ರೇರಿತ ಉಗ್ರ ಸಂಘಟನೆಯೊಂದು ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ ಭಾಷಣಗಳಿಂದ ಪ್ರಭಾವಿತಗೊಂಡಿದೆ ಎಂದು ಹೇಳಲಾಗಿದೆ.

Advertisement

ಮುಂಬೈ ನ್ಯಾಯಾಲಯಕ್ಕೆ ಎಟಿಎಸ್‌ ಸಲ್ಲಿಸಿದ ಚಾರ್ಜ್‌ ಶೀಟ್‌ನಲ್ಲಿ ಈ ಆರೋಪ ಮಾಡಲಾಗಿದೆ. ಈ ಉಗ್ರರು ಮುಂಬೈನಲ್ಲಿನ ಮುಂಬ್ರೇಶ್ವರ ದೇಗುಲದ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ 400 ಜನರನ್ನು ಹತ್ಯೆಗೈಯುವ ಯೋಜನೆ ರೂಪಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಶ್ರೀಮದ್‌ ಭಾಗವತ ಕಥೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಸಾವಿರಾರು ಜನರು ಭಾಗವಹಿಸಿದ್ದರು. ಇಲ್ಲಿ ವಿತರಿಸಲಾಗುವ ಪ್ರಸಾದಕ್ಕೆ ವಿಷ ಬೆರೆಸಲು ಉಗ್ರರು ಯತ್ನಿಸಿದ್ದರು ಎಂಬುದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಇವರು ಸ್ಫೋಟಕಗಳು ಹಾಗೂ ವಿಷ ತಯಾರಿಕೆ ತರಬೇತಿ ಪಡೆದಿದ್ದರು. ಅಷ್ಟೇ ಅಲ್ಲ, ಥಾಣೆ ಜಿಲ್ಲೆಯ ಮುಂಬ್ರಾ ಬೈಪಾಸ ಬಳಿ ಸ್ಫೋಟದ ಪ್ರಯೋಗವನ್ನೂ ನಡೆಸಿದ್ದರು ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ.

ಕಳೆದ ಜನವರಿಯಲ್ಲಿ ಉಮ್ಮತ್‌ ಎ ಮೊಹಮ್ಮದೀಯ ಎಂಬ ಸಂಘಟನೆಯ 10 ಸದಸ್ಯರನ್ನು ಮಹಾರಾಷ್ಟ್ರ ಎಟಿಎಸ್‌ ಬಂಧಿಸಿತ್ತು. ಇವರಿಗೆ ಐಸಿಸ್‌ ಉಗ್ರ ಸಂಘಟನೆಯೊಂದಿಗೂ ಸಂಪರ್ಕವಿತ್ತು ಎಂದು ಎಟಿಎಸ್‌ ಶಂಕಿಸಿದೆ. ಅಬು ಹಮ್ಜಾ ಎಂಬಾತ ಈ ಉಗ್ರ ಸಂಘಟನೆಗೆ ನಾಯಕನಾಗಿದ್ದ. ಈತನೇ ಸ್ಫೋಟದ ಪ್ರಯೋಗ ನಡೆಸಿದ್ದ ಎನ್ನಲಾಗಿದೆ. ಶಂಕಿತರ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳಲ್ಲಿ ನಾಯ್ಕ ವೀಡಿಯೋಗಳನ್ನು ಶೇರ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next