Advertisement

ಪ್ರಾಥಮಿಕ ಸಂಪರ್ಕದಿಂದ ಹರಡುತ್ತಿದೆಯೇ ಸೋಂಕು?

02:33 PM May 16, 2021 | Team Udayavani |

ಬೆಂಗಳೂರು: ನಗರದ ಸ್ಮಶಾನಗಳೇ  ಈಗ ಸೋಂಕಿಗೆ ರಹದಾರಿ ಆಗುತ್ತಿವೆಯೇ? ಸ್ಮಶಾನಗಳ ಮುಂದೆ ಕಳೆದ15-20 ದಿನಗಳಿಂದ ನಿತ್ಯ ಕಂಡುಬರುತ್ತಿರುವ ಶವಗಳಸಾಲು, ಅಂತ್ಯಕ್ರಿಯೆಗೆ ಬಂದವರು ಸಂಜೆವರೆಗೆಕಾಯಬೇಕಾದ ಸ್ಥಿತಿ, ಸುತ್ತಲಿನ ಪ್ರದೇಶಗಳಲ್ಲಿ ಸಾವನ್ನಪ್ಪಿದ ಬಂಧುಗಳ ಓಡಾಟ.

Advertisement

ಇವೆಲ್ಲ ಅಂಶಗಳುಸೋಂಕಿನ ಹೆಚ್ಚಳಕ್ಕೆ ಸ್ಮಶಾನಗಳತ್ತ ಬೊಟ್ಟುಮಾಡುತ್ತಿವೆ.ಹಾಗಂತ, ಕೋವಿಡ್‌ನಿಂದ ಮೃತಪಟ್ಟ ಸ್ಮಶಾನದಮುಂದೆ ಸಾಲುಗಟ್ಟಿರುವ ಪಾರ್ಥಿವ ಶರೀರಗಳಿಂದಸೋಂಕು ಹರಡುತ್ತಿಲ್ಲ. ಬದಲಿಗೆ ಅವುಗಳ ಅಂತ್ಯಸಂಸ್ಕಾರಕ್ಕೆ ಬಂದ ಬಹುತೇಕ ಪ್ರಾಥಮಿಕ ಸಂಪರ್ಕಿತರೂಆಗಿರುವ ಜನರಿಂದ ಗೊತ್ತಿಲ್ಲದೆ, ಸೋಂಕುಹರಡುತ್ತಿದೆಯೇ ಎಂಬ ಅನುಮಾನ ಏಳುತ್ತಿದೆ.

ನಗರದಲ್ಲಿ ಸುಮಾರು 13 ವಿದ್ಯುತ್‌ಚಾಲಿತ ಹಾಗೂಕೋವಿಡ್‌ನಿಂದ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆಗಾಗಿ ತಾವರೆಕರೆ ಮತ್ತು ಗಿಡ್ಡೇನಹಳ್ಳಿ ಸೇರಿದಂತೆಎರಡು ಸ್ಮಶಾನಗಳು ಇವೆ. ಇವುಗಳಲ್ಲಿ ಬಹುತೇಕಎಲ್ಲವೂ ನಗರದ ಕೇಂದ್ರಭಾಗದಲ್ಲೇ ಇವೆ. ಇಲ್ಲಿಸಂಸ್ಕಾರಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಇದೆ. ಬೆಳಗ್ಗೆ ಬಂದವರಿಗೆ ಮಧ್ಯಾಹ್ನ ಪಾಳಿ ಸಿಗುತ್ತಿದೆ.

ಸೋಂಕು ಸಾಧ್ಯತೆ ಹೆಚ್ಚು; ತಜ್ಞರು: ಶವಸಂಸ್ಕಾರಕ್ಕೆಬಂದವರು ಅನಿವಾರ್ಯವಾಗಿ ಸ್ಮಶಾನ ಆಸುಪಾಸುಹೊತ್ತು ಕಳೆಯಬೇಕಾಗಿದೆ. ನೆರಳು, ನೀರು, ಟೀ-ಕಾಫಿ,ತಿಂಡಿ ಸಿಗುವ ಜಾಗಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಕೊರೊನಾ ಮಧ್ಯೆಯೂ ಗಲ್ಲಿಗಳಲ್ಲಿ ಸಣ್ಣಪುಟ್ಟ ಹೋಟೆಲ್‌ಗ‌ಳು ತೆರೆದಿರುತ್ತವೆ. ಅಲ್ಲಿ ತಿಂಡಿ-ಊಟಕ್ಕೆಗಂಟೆಗಟ್ಟಲೆ ನಿಲ್ಲುತ್ತಾರೆ. ಜತೆಗೆ ಪಾರ್ಸೆಲ್‌ತೆ ಗೆದುಕೊಂಡು ಹೋಗುತ್ತಿದ್ದಾರೆ. ಇದೆಲ್ಲ ವೂಸೋಂಕಿಗೆ ರಹದಾರಿ ಆಗುತ್ತಿದೆ ಎನ್ನುತ್ತಾರೆ ತಜ್ಞರು.

ಅಂತ್ಯಕ್ರಿಯೆಗೆ ಕೇವಲ ಐದು ಜನರಿಗೆ ಅವಕಾಶಕಲ್ಪಿಸಲಾಗಿದೆ. ಆದರೆ, ವಾಸ್ತವವಾಗಿ ಐದಕ್ಕಿಂತ ಹೆಚ್ಚುಮಂದಿ ಪ್ರತಿ ಶವದ ಬಳಿ ಜಮಾಯಿಸುತ್ತಾರೆ. ಸ್ಮಶಾನಕ್ಕೆಬರುವವರು ನೀರು ಮತ್ತಿತರ ವ್ಯವಸ್ಥೆ ಮಾಡಿಕೊಂಡುಬರುವುದು ಉತ್ತಮ. ಹತ್ತಿರದ ಹೋಟೆಲ್‌ಗ‌ಳಲ್ಲಿಪಾರ್ಸೆಲ್‌ ತಂದು, ಓಪನ್‌ ಸ್ಪೇಸ್‌ (ಮುಕ್ತ ಪ್ರದೇಶ)ನಲ್ಲಿಆಹಾರ ಸೇವಿಸಬೇಕೆಂದು ನಿಮ್ಹಾನ್ಸ್‌ ವೈರಾಲಜಿ ವಿಭಾಗದನಿವೃತ್ತ ಪ್ರಾಧ್ಯಾಪಕ ಡಾ.ವಿ. ರವಿ ತಿಳಿಸುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next