Advertisement

ಮೋದಿ ಸಭೆಯಲ್ಲಿ ಭಾಗವಹಿಸುವವರಿಗೆ ಇಮ್ಯುನಿಟಿ ಬರುತ್ತದೆಯೇ : ಸಿದ್ದರಾಮಯ್ಯ ಪ್ರಶ್ನೆ

06:38 PM Jan 05, 2022 | Team Udayavani |

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯಲ್ಲಿ ಭಾಗವಹಿಸುವವರಿಗೆಲ್ಲ ಇಮ್ಯುನಿಟಿ ಬಂದು ಬಿಡುತ್ತದೆಯೇ ? ಅವರ್ಯಾರಿಗೂ ಕೋವಿಡ್ ಬರುವುದಿಲ್ಲವೇ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಜತೆ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪಂಜಾಬಿನಲ್ಲಿ ನರೇಂದ್ರ ಮೋದಿ ರ್ಯಾಲಿ ನಡೆಸುವುದು ಕಾನೂನು ವ್ಯಾಪ್ತಿಗೆ ಬರುವುದಿಲ್ಲವೇ ? ನರೇಂದ್ರ ಮೋದಿಯವರಿಗೆ ಬೇರೆ ಕಾನೂನು ಇದೆಯಾ? ಅವರು ವಾಪಾಸ್ ಬಂದಿರುವುದು ಕೋವಿಡ್ ನಿಯಮ ಪಾಲನೆಗೆ ಅಲ್ಲ, ರೈತರ ವಿರೋಧದಿಂದ ವಾಪಾಸ್ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಈ ಯೋಜನೆ ಅನುಷ್ಠಾನಕ್ಕೆ ಮನಸ್ಸಿಲ್ಲ. ಅದಕ್ಕಾಗಿ ಕೇಂದ್ರ ಸರಕಾರ, ಬಿಜೆಪಿ ಅಣ್ಣಾಮಲೈ ಮೂಲಕ ತಮಿಳುನಾಡಿನಲ್ಲಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ೨೫ ಸಂಸದರು ಇದ್ದರೂ ಬಿಜೆಪಿಯವರು ಮೇಕೆದಾಟು ಯೋಜನೆಗೆ ಏನು ಮಾಡಿಲ್ಲ ಎಂದು ಆರೋಪಿಸಿದರು.
ಕೋವಿಡ್ ನಿಯಮ ಅನ್ವಯ ನಾವು ಪಾದಯಾತ್ರೆ ಮಾಡುತ್ತೇವೆ. ಕೋವಿಡ್ ಮೂರನೇ ಅಲೆ ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದರೂ ಸರಕಾರ ಕ್ರಮ ತೆಗೆದುಕೊಂಡಿಲ್ಲ. ಈಗ ನಿರ್ಬಂಧ ಹೇರುವುದರಿಂದ ನಮ್ಮ ಪಾದಯಾತ್ರೆ ತಡೆಗೆ ಷಡ್ಯಂತ್ರ ನಡೆಸುತ್ತಿದ್ದಾರೆ‌ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಹರಿಯುವ ನೀರು, ಬೀಸಿವ ಗಾಳಿ, ಉದಿಸಿದ ಸೂರ್ಯನ ರೀತಿ ಕಾಂಗ್ರೆಸ್ ನ ನೀರಿಗಾಗಿ ನಡಿಗೆ ತಡೆಯಲು ಯಾರಿಗೂ ಸಾಧ್ಯವಿಲ್ಲ. ಪಾದಯಾತ್ರೆ ಕೆಲವರಿಗೆ ಸಂಕಟ ಉಂಟು ಮಾಡಿದೆ. ಜನಸ್ಪಂದನೆಯ ರೀತಿ ಉತ್ತಮವಾಗಿದೆ. ಹೊಟ್ಟೆಕಿಚ್ಚಿಗೆ ಔಷಧವಿಲ್ಲ ಎಂದು ವ್ಯಂಗ್ಯವಾಡಿದರು.

ನಾವು ರಾಜಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ. ಜನರಿಗಾಗಿ ಹೋರಾಟ. ಹೀಗಾಗಿ ಸರಕಾರ ವಿಧಿಸಿರುವ ಕೋವಿಡ್ ನಿಯಮ ಅನ್ವಯ ಮಾಡುತ್ತೇವೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು‌.

Advertisement

ನಮ್ಮ ಪಾದಯಾತ್ರೆ ನಿಲ್ಲಿಸುವುದೇ ಅವರ ಉದ್ದೇಶ. ೬ ಕೋಟಿ ಜನರ ಪೈಕಿ ೩ ಸಾವಿರ ಪ್ರಕರಣ ಕೋವಿಡ್ ಆಗಿದೆ ಎಂದರೆ ಹೇಗೆ ? ನಮ್ಮ ಪಾದಯಾತ್ರೆ ಮುಗಿಯುವ ೧೯ನೇ ತಾರೀಖಿನನ ಬೆಳಗಿನವರೆಗೆ ವೀಕೆಂಡ್ ಲಾಕ್ ಡೌನ್ ತಂದಿರುವ ಅರ್ಥವೇನು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next