Advertisement

ಪ್ಯಾಕೆಟ್ ಹಾಲು ಸೇವನೆ ಎಷ್ಟು ಆರೋಗ್ಯಕಾರಿ ?

05:01 PM Apr 02, 2021 | Team Udayavani |

ಫ್ರೆಶ್ ಹಾಲು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಇತ್ತೀಚಿಗೆ ಪ್ಯಾಕೆಟ್ ಹಾಲಿನ ಬಳಕೆ ಹೆಚ್ಚುತ್ತಿದೆ. ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಫ್ರೆಶ್ ( ಹಸಿ) ಹಾಲು ದೊರೆಯುತ್ತಿತ್ತು. ಆದರೆ, ಇದೀಗ ಹಳ್ಳಿಗಳಿಗೂ ಕೂಡ ಪಾಕೆಟ್ ಹಾಲು ದಾಂಗುಡಿ ಇಟ್ಟಿದೆ. ಹಾಗಾದರೆ ಪ್ಯಾಕೆಟ್ ಹಾಲು ಆರೋಗ್ಯಕ್ಕೆ ಒಳ್ಳೆಯದೇ ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ…

Advertisement

ಡೈರಿಯಿಂದ ತಂದ ಮತ್ತು ನೇರವಾಗಿ ಹಸುವಿನಿಂದ ಪಡೆದ ಹಾಲು ಮೊದಲಿನಂತೆ ದೊರೆಯದಿರುವುದಕ್ಕೆ ಹಲವಾರು ಕಾರಣಗಳಿವೆ. ಇಂತಹ ಸಂದರ್ಭದಲ್ಲಿ ಪಾಕೆಟ್ ಹಾಲು ಅನಿವಾರ್ಯತೆ ಎನ್ನಬಹುದು. ಅಂಗಡಿಗಳಲ್ಲಿ ದೊರೆಯುವ ಪಾಕೆಟ್ ಹಾಲು ಸಹ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಪರಿಣಿತರು.

ಹಾಗಾದರೆ ಪ್ಯಾಕೆಟ್ ಹಾಲನ್ನು ಕಾಯಿಸದೆ ಕುಡಿಯಬಹುದೇ?

ಪ್ಯಾಕೆಟ್ ಹಾಲು ಪಾಶ್ಚರೀಕರಣಗೊಂಡಿರುತ್ತದೆ. ಇದರ ಮೂಲ ಉದ್ದೇಶವೇ ಹಸಿ ಹಾಲಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ನಾಶ ಮತ್ತು ಬಳಕೆದಾರನಲ್ಲಿಗೆ ಹೋಗುವ ವರೆಗೆ ಹಾಲನ್ನು ಸಂರಕ್ಷಿಸುವುದು. ಅದೇ ರೀತಿ ಹಸಿ ಹಾಲನ್ನು ಕಾಯಿಸುವುದೂ ಕೂಡ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದಕ್ಕಾಗಿಯೇ ಆಗಿರುವುದರಿಂದ ಪ್ಯಾಕೆಟ್ ಹಾಲನ್ನು ಕಾಯಿಸದೇ ಸೇವಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಪಾಕೆಟ್ ಹಾಲು ಸೇವನೆಯಿಂದಾಗುವ ಪ್ರಯೋಜನಗಳೇನು?

  • ಪ್ಯಾಕೆಟ್ ಹಾಲು ಕ್ಯಾಲ್ಶಿಯಮ್ ನಿಂದ ಪೂರಿತವಾಗಿದ್ದು ನಮ್ಮ ದೇಹದ ಮೂಳೆಯನ್ನು ಸುಸ್ಥಿತಿಯಲ್ಲಿರಿಸುತ್ತದೆ.
  • ಕ್ಯಾಲ್ಶಿಯಮ್ ಮತ್ತು ಫಾಸ್ಫರ್‌ಗಳು ಹಲ್ಲುಗಳ ಆರೋಗ್ಯವನ್ನು ಕಾಪಾಡುವ ಎರಡು ಅತಿ ಮುಖ್ಯವಾದ ಅಂಶವಾಗಿದ್ದು, ಹಾಲಿನಲ್ಲಿರುವ ಕ್ಯಸಿನ್ (ಹಾಲಿನಲ್ಲಿರುವ ಒಂದು ಬಗೆಯ ಫಾಸ್ಫೋಪ್ರೋಟೀನು) ಹಲ್ಲುಗಳ ಮೇಲೆ ತೆಳುವಾದ ಪದರವನ್ನು ಮಾಡುವುದರ ಮೂಲಕ ಹಲ್ಲು ಬೇಗ ಹಾಳಾಗದಂತೆ ರಕ್ಷಿಸುತ್ತದೆ.
  • ಪ್ಯಾಕೆಟ್ ಹಾಲಿನಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನಂಶವಿರುವುದರಿಂದ ರಕ್ತದೊತ್ತಡ ಇರುವವರೂ ಕೂಡ ಇದನ್ನು ಸೇವಿಸಬಹುದು.
  • ಇವುಗಳು ಲಘುವಾಗಿದ್ದು ಹಲವು ಬಗೆಯ ಜೀವಸತ್ವವನ್ನು ಹೊಂದಿರುವುದರಿಂದ ಹೃದಯಸಂಬಂಧಿ ಕಾಯಿಲೆಯಿರುವವರೂ ಕೂಡ ಸೇವಿಸಬಹುದು.
Advertisement
Advertisement

Udayavani is now on Telegram. Click here to join our channel and stay updated with the latest news.

Next