Advertisement
ಬೆಂಗಳೂರು ನಗರದಲ್ಲಿ ಕುಡಿಯುವ ನೀರು , ವಿದ್ಯುತ್, ಟ್ರಾಫಿಕ್ ಮತ್ತು ಕಸ ವಿಲೇವಾರಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಐದು ವರ್ಷಗಳವರೆಗೆ ಅಪಾರ್ಟ್‌ಮೆಂಟ್ ನಿರ್ಮಾಣ ನಿಷೇಧಿಸುವ ಚಿಂತನೆಯನ್ನು ಸರ್ಕಾರ ಮಾಡುತ್ತಿದೆಯಂತೆ. ಇದು ಇನ್ನೂ ಚಿಂತನೆಯಲ್ಲಿದ್ದು, ರಿಯಲ್ ಎಸ್ಟೇಟ್ ಮತ್ತು ಇನ್ನಿತರ ಸಂಬಂಧಿತರೊಡನೆ ವಿಸ್ತ್ರತವಾಗಿ ಚರ್ಚಿಸಿ ಈ ನಿಟ್ಟಿನಲ್ಲಿ ಒಂದು ನಿರ್ಣಯವನ್ನು ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ವಿಷಯದಲ್ಲಿ ವಿಸ್ತ್ರತ ಮಾಹಿತಿ ಮತ್ತು ವಿವರಣೆಗಳು ಇನ್ನೂ ಬರಬೇಕಾಗಿವೆ. ಈ ಹೇಳಿಕೆ, ಒಂದು ಕಡೆಯಲ್ಲಿ ನಿರೀಕ್ಷೆಯಂತೆ ಗೃಹ ನಿರ್ಮಾಣ ಅಥವಾ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಂಚಲನ ಮೂಡಿಸಿದೆ. ಅದೇ ಸಮಯಕ್ಕೆ, ತಲೆಮೇಲೆ ತಮ್ಮದೇ ಆದ ಸೂರಿನ ಕನಸು ಕಾಣುತ್ತಿರುವವರಿಗೆ ಶಾಕ್ ನೀಡಿದೆ. ಹೊಸ ಯೋಜನೆಗಳಿಗೆ ನಿಷೇಧ ವಿಧಿಸಿದರೆ, ಆ ಮಾತು ಬೇರೆ. ಆದರೆ, ನಿರ್ಮಾಣದ ವಿವಿಧ ಹಂತ, ಅದರಲ್ಲೂ ಮುಖ್ಯವಾಗಿ ಬ್ಯಾಂಕ್‌ನಿಂದ ಪಡೆದ ಸಾಲದ ಹಣ ಇದರಲ್ಲಿ ಇರುವುದರಿಂದ, ಸರ್ಕಾರ ಫ್ಲ್ಯಾಟ್ ಖರೀದಿದಾರರಿಂದ ಹಾಗೂ ಬ್ಯಾಂಕು ಮತ್ತು ಗೃಹ ಸಾಲ, ನೀಡುವ ಹಣಕಾಸು ಸಂಸ್ಥೆಗಳಿಂದ ಅಕ್ರೋಶವನ್ನು ಎದುರಿಸಬೇಕಾಗುತ್ತದೆ. ಗೃಹ ನಿರ್ಮಾಣ ಸಾಲ ಬ್ಯಾಂಕುಗಳಿಗೆ ದೊಡ್ಡ ಪ್ರಮಾಣದ ವ್ಯವಹಾರವನ್ನು ನೀಡುತ್ತದೆ. ಅವರ ಬ್ಯಾಲೆನ್ಸ್ ಶೀಟ್‌ನಲ್ಲಿ ಮತ್ತು ಅದಾಯದ ಬಾಬಿ¤ನಲ್ಲಿ ಗಮನಾರ್ಹ ನೀಡಿಕೆ ಇರುತ್ತದೆ. ಅಂತೆಯೇ ಅವು ಇಂಥ ಹೆಜ್ಜೆಯನ್ನು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಖಂಡಿತ ವಿರೋಧಿಸುತ್ತವೆ.
Related Articles
Advertisement
ಮಾರಾಟವಾಗದೇ ಉಳಿದ ಸುಮಾರು 1 ಲಕ್ಷ ಫ್ಲ್ಯಾಟ್ ಗಳಿಗೆ ಮಾಲೀಕರನ್ನು ಕಾಣಿಸಬಹುದು ಎನ್ನುವ ಆಶಾಭಾವನೆ ಹುಟ್ಟಿಸಿದೆ. ಈ ಐದು ವರ್ಷಗಳ ನಿಷೇಧ ಫ್ಲ್ಯಾಟ್ ಗಳ ಪೂರೈಕೆ (supply)ಅನ್ನು ನಿಯಂತ್ರಿಸುತ್ತಿದ್ದು, ಬೇಡಿಕೆ- ಪೂರೈಕೆ ಸಮೀಕರಣದಲ್ಲಿ, ಬೇಡಿಕೆ ಹೆಚ್ಚಾಗಿ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ದರ ಎರಡೂ ಕುದುರಬಹುದು ಎನ್ನುವ ಆಶಾಭಾವನೆ ಹುಟ್ಟಿದೆ. ರಿಯಲ್ ಎಸ್ಟೇಟ್ ದರದಲ್ಲಿ ಈ ಕೂಡಲೇ 10-15% ಹೆಚ್ಚಳವಾಗಬಹುದು ಎನ್ನುವ ಮಾತೂ ಕೇಳಿಬರುತ್ತಿದೆ. ಈ ನಿಷೇಧ ನಿರೀಕ್ಷೆಯಂತೆ ಜಾರಿಯಾದರೆ, ಫ್ಲ್ಯಾಟ್ ಗಳ ದರ ಇನ್ನೂ ಹೆಚ್ಚಾಗುವುದನ್ನು ತಳ್ಳಿ ಹಾಕಲಾಗದು. ಫ್ಲ್ಯಾಟ್ ಗಳ ಪೂರೈಕೆ ಕಡಿಮೆಯಾಗುತ್ತಿದ್ದು ಸಿದ್ದವಾಗಿರುವ ಫ್ಲ್ಯಾಟ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಫ್ಲಾ$Âಟ್‌ಗಳನ್ನು ಮಾರುವವರ ಮಾರುಕಟ್ಟೆ(sellers market) ಆಗಿ ದರಗಳು ಹೆಚ್ಚಾಗುವುದು ಸ್ವಾಭಾವಿಕ ಪ್ರಕ್ರಿಯೆ ಮತ್ತು ಬೆಳವಣಿಗೆ.
ಬೆಂಗಳೂರಿನಲ್ಲಿ ಸುಮಾರು 328 ಹೊಸ ಅಪಾರ್ಟ್‌ಮೆಂಟ್ ಪ್ರಾಜೆಕ್ಟ್ಗಳು ಅನುಮತಿಯ ವಿವಿಧ ಹಂತದಲ್ಲಿದ್ದು, ಸಂಬಂಧಪಟ್ಟ ಇಲಾಖೆಯಿಂದ ಅಂತಿಮ ಅನುಮತಿಗಾಗಿ ಕಾಯುತ್ತಿವೆ ಎಂದು ಹೇಳಲಾಗುತ್ತಿದೆ. ಸುಮಾರು 19000 ಫ್ಲ್ಯಾಟ್ ಗಳನ್ನು ಹೊಂದಿರುವ 106 ಹೊಸ ಪ್ರಾಜೆಕ್ಟ್ಗಳು ಈ ವರ್ಷ ಆರಂಭವಾಗಿವೆ. ಲಕ್ಷಾಂತರ ಕೋಟಿ ವ್ಯವಹಾರದ ಮತ್ತು ಲಕ್ಷಾಂತರ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ನೀಡುವ ರಿಯಲ್ ಎಸ್ಟೇಟ್ ಉದ್ಯಮ, ಐದು ವರ್ಷಗಳ ಕಾಲ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸಾಧ್ಯವೇ? ಎನ್ನುವ ಪ್ರಶ್ನೆಗೆ ಉತ್ತರ ಸುಲಭವಲ್ಲ. ಈ ಉದ್ಯಮದಲ್ಲಿ ತೊಡಗಿಸಿಕೊಂಡವರ ಭವಿಷ್ಯ ಏನು? ಅವರಿಗೆ ಬದಲಿ ಉದ್ಯೋಗ ಏನು? ಇವರ ಸಂಖ್ಯೆ ಸಾವಿರದಲ್ಲಿ ಇಲ್ಲವೇ ಲಕ್ಷದಲ್ಲಿ ಇದೆ ಎನ್ನುವುದು ಗಂಭೀರವಾದ ವಿಚಾರ. ಒಂದು ಸಮಸ್ಯೆಗೆ ನೀಡುವ ಪರಿಹಾರ ಇನ್ನೊಂದು ಸಮಸ್ಯೆಯನ್ನು ಹುಟ್ಟು ಹಾಕಬಾರದು. ಸೂರು ನಿರ್ಮಿಸುವುದನ್ನು ನಿಯಂತ್ರಿಸುವುದು ಎಷ್ಟೇ ತಾರ್ಕಿಕ ಎನಿಸಿದರೂ, ಸೂರಿಗಾಗಿ ಅಲೆದಾಡುವವರ ಬದುಕು ಹೈರಾಣಾಗುವುದೂ ಅತಂಕಕಾರಿ ಬೆಳವಣಿಗೆ.
– ರಮಾನಂದ ಶರ್ಮಾ