Advertisement

ಬಾಲಿವುಡ್‌ ನಟಿ ಎಲ್ಲಿ ಅವ್ರಾಮ್‌ ಜತೆ ಹಾರ್ದಿಕ್‌ ಡೇಟಿಂಗ್‌?

08:15 AM Mar 07, 2018 | |

ನವದೆಹಲಿ: ಸ್ಟೈಲಿಶ್‌ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಮತ್ತು ಬಾಲಿವುಡ್‌ ನಟಿ ಎಲ್ಲಿ ಅವ್ರಾಮ್‌ ಡೇಟಿಂಗ್‌ ಮಾಡುತ್ತಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಇಬ್ಬರೂ ತುಟಿ ಬಿಚ್ಚಿಲ್ಲ. ಮಾ.5ರಂದು ಹಾರ್ದಿಕ್‌ ಪಾಂಡ್ಯ ಅವರನ್ನು  ಮುಂಬೈ ಏರ್‌ಪೋರ್ಟ್‌ಗೆ ಕಾರ್‌ನಲ್ಲಿ ಎಲ್ಲಿ ಅವ್ರಾಮ್‌ ಡ್ರಾಪ್‌ ನೀಡಿದ್ದರು. ಇದನ್ನು ನೋಡಿದ ಅಭಿಮಾನಿಗಳು
ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದಾರೆ.

Advertisement

ಇದಕ್ಕೂ ಮುನ್ನ ಹಾರ್ದಿಕ್‌ ಸಹೋದರ ಕೃಣಾಲ್‌ ಪಾಂಡ್ಯ ವಿವಾಹದಲ್ಲಿಯೂ ಎಲ್ಲಿ ಕಾಣಿಸಿಕೊಂಡಿದ್ದರು. ಇದು ಸಹಜವಾಗಿಯೇ
ಇಬ್ಬರ ನಡುವೆ ಏನೋ ಇದೆ ಎಂಬ ಊಹೆಗಳಿಗೆ ಕಾರಣವಾಗಿದೆ. ಅವ್ರಾಮ್‌ ಹಿಂದಿ ಬಿಗ್‌ಬಾಸ್‌ ಸೇರಿದಂತೆ ಅನೇಕ ರಿಯಾಲಿಟಿ ಶೋನಲ್ಲಿ ಅಭಿನಯಿಸಿದ್ದಾರೆ. ಹಿಂದಿ, ತಮಿಳು ಮತ್ತು ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next