Advertisement
ಆದರೆ ಈ ನಿಟ್ಟಿನಲ್ಲಿ ಇಂಗ್ಲೆಂಡಿಗಿಂತ ನ್ಯೂಜಿಲ್ಯಾಂಡ್ ಒಂದು ಹೆಜ್ಜೆ ಮುಂದಿದೆ. ಅದು “ನ್ಯೂಜಿಲ್ಯಾಂಡರ್ ಆಫ್ ದ ಇಯರ್’ ಪ್ರಶಸ್ತಿಗೆ ಬೆನ್ ಸ್ಟೋಕ್ಸ್ ಹೆಸರನ್ನು ನಾಮನಿರ್ದೇಶ ಮಾಡಿದೆ. ಈ ಯಾದಿಯಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನೂ ಸೇರಿಸಿದೆ.
ಇದಕ್ಕೆ ಕಾರಣ ಇಷ್ಟೇ, ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಕ್ರಿಕೆಟನ್ನು ಪ್ರತಿನಿಧಿಸುತ್ತಿದ್ದರೂ ಮೂಲತಃ ಅವರು ನ್ಯೂಜಿಲ್ಯಾಂಡಿನವರು. ಇಲ್ಲೇ ಅವರ ಜನನವಾಗಿತ್ತು. 13ರ ಹರೆಯದಲ್ಲಿ ಸ್ಟೋಕ್ಸ್ ಇಂಗ್ಲೆಂಡಿಗೆ ತೆರಳಿದ್ದರು. ಅವರ ತಂದೆ ಗೆರಾರ್ಡ್ ಸ್ಟೋಕ್ಸ್ ಕ್ರೈಸ್ಟ್‌ಚರ್ಚ್ ನಲ್ಲಿ ವಾಸವಾಗಿದ್ದಾರೆ. “ಬೆನ್ ಸ್ಟೋಕ್ಸ್ ನ್ಯೂಜಿಲ್ಯಾಂಡ್ ಪರ ಆಡದೇ ಇರಬಹುದು. ಆದರೆ ಅವರು ಕ್ರೈಸ್ಟ್‌ಚರ್ಚ್ ನಲ್ಲಿ ಜನಿಸಿದ್ದು, ಅವರ ಹೆತ್ತವರು ಇಲ್ಲಿ ನೆಲೆಸಿದ್ದಾರೆ. ಬೆನ್ ಸ್ಟೋಕ್ಸ್ ಅವರನ್ನು ಈಗಲೂ ನ್ಯೂಜಿಲ್ಯಾಂಡಿನ ಪ್ರಜೆಯಾಗಿ ಮಾಡಿಕೊಳ್ಳಬಹುದು ಎಂಬುದು ಅನೇಕರ ಅಭಿಪ್ರಾಯವಾಗಿದೆ’ ಎಂಬುದಾಗಿ ಈ ಪ್ರಶಸ್ತಿಯ ಪ್ರಧಾನ ಆಯ್ಕೆಗಾರ ಕ್ಯಾಮರಾನ್ ಬೆನೆಟ್ ಹೇಳಿದ್ದಾರೆ.