ನವದೆಹಲಿ: ಶನಿ ಗ್ರಹದ ಉಪ ಗ್ರಹ ಎನ್ಸಿಲೆಡಸ್ ಸಾಮಾನ್ಯವಾದುದಲ್ಲ, ಅದರಲ್ಲಿ ಮಾನವ ವಾಸಕ್ಕೆ ಯೋಗ್ಯವಾದ ಎಲ್ಲ ಅಂಶಗಳೂ ಇವೆ ಎಂಬ ಅಚ್ಚರಿಯ ಸಂಗತಿಯೊಂದು ಈಗ ಬೆಳಕಿಗೆ ಬಂದಿದೆ.
ಎನ್ಸಿಲೆಡಸ್‌ನಲ್ಲಿ ಹಲವು ಜೈವಿಕ ಕ್ರಿಯೆಗಳಿಗೆ ಅಗತ್ಯವಾಗಿರುವ ಪ್ರಮುಖ ರಾಸಾಯನಿಕ ಅಂಶವಾದ ಫಾಸ್ಫರಸ್ ಇದೆ ಎಂಬುದು ಈಗ ತಿಳಿದುಬಂದಿದೆ. ಈ ಉಪ ಗ್ರಹದ ಮೇಲ್ಮೆ„ನಿಂದ ಸಾವಿರಾರು ಕಿಲೋಮೀಟರ್ ಎತ್ತರದಲ್ಲಿ ನೀರಿನ ಹರಿವು ಇರುವುದನ್ನು ಜೇಮ್ಸ್ ವೆಬ್ ದೂರದರ್ಶಕವು ಪತ್ತೆಹಚ್ಚಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ಪುಟ್ಟ ಉಪ ಗ್ರಹದಿಂದ ಹೊರಸೂಸಲ್ಪಟ್ಟ ಮಂಜುಗಡ್ಡೆಯ ಕಣಗಳಲ್ಲಿ ಫಾಸ್ಫರಸ್ ಕಂಡುಬಂದಿದೆ. ಅದರ ಉಪ ಮೇಲ್ಮೆ„ ಸಾಗರದಲ್ಲಿ ಈ ಅಂಶಗಳು ವಿಫುಲವಾಗಿ ಇರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಜರ್ಮನಿ ನೇತೃತ್ವದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಈ ಆವಿಷ್ಕಾರವನ್ನು ಮಾಡಿದ್ದು, ನೇಚರ್ ನಿಯತಕಾಲಿಕೆಯಲ್ಲಿ ಈ ಕುರಿತ ಮಾಹಿತಿ ಪ್ರಕಟವಾಗಿದೆ.
ಎನ್ಸಿಲೆಡಸ್‌ನಲ್ಲಿನ ಮಂಜುಗಡ್ಡೆಯ ಕಣಗಳಲ್ಲಿ ಅಮೀನೋ ಆಮ್ಲಕ್ಕೆ ಬೇಕಾದ ಅಂಶಗಳು ಸೇರಿದಂತೆ ಸಮೃದ್ಧವಾದ ಖನಿಜಗಳು ಮತ್ತು ಸಂಕೀರ್ಣ ಸಾವಯವ ಸಂಯುಕ್ತಗಳಿವೆ ಜೀವಿಗಳಿಗೆ ಅಗತ್ಯವೆಂದು ಪರಿಗಣಿಸಲಾದ 6 ರಾಸಾಯನಿಕ ಅಂಶಗಳಲ್ಲಿ ಫಾಸ್ಫರಸ್ ಕೂಡ ಒಂದು. ಈಗ ಭೂಮಿಯಾಚೆಗಿನ ಸಮುದ್ರದಲ್ಲಿ ಇಂಥದ್ದೊಂದು ಅತ್ಯವಶ್ಯಕ ಅಂಶವು ಪತ್ತೆಯಾಗಿರುವುದು ಇದೇ ಮೊದಲು ಎಂದೂ ಗ್ರಹೀಯ ವಿಜ್ಞಾನಿ ಫ್ರಾಂಕ್ ಪೋಸ್ಟ್‌ಬರ್ಗ್.