Advertisement

Education; ಶಿಕ್ಷಣವೆಂದರೆ ಬರಿಯ ಶಿಕ್ಷೆಯೇ?

01:22 AM Aug 19, 2024 | Team Udayavani |

ಅನಗತ್ಯ ದೈಹಿಕ ಶಿಕ್ಷೆ, ಹಲವಾರು ಸಲ ಬರೆಯಿಸುವುದು, ಇವೆಲ್ಲ ಶಿಕ್ಷಕರ ದೌರ್ಬಲ್ಯದ ಸಂಕೇತ. ಒಬ್ಬ ಶಿಕ್ಷಕ ನಿಜವಾಗಿಯೂ ತನ್ನ ವಿದ್ಯಾರ್ಥಿಗಳನ್ನು ಪ್ರೀತಿಸುವವನಾದರೆ ಖಂಡಿತವಾಗಿಯೂ ಅಂತಹ ಶಿಕ್ಷೆ ಕೊಡಲಾರ. ಅವನ ಮುಖ್ಯ ಉದ್ದೇಶ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವುದೇ ಆಗಿರುತ್ತದೆ. ಅವರನ್ನು ಹಿಂಸಿಸುವುದು ಆಗಿರುವುದಿಲ್ಲ.

Advertisement

ತರಗತಿಯಲ್ಲಿ ಮಾತನಾಡಿದ ರೆಂದು ಲೀಡರ್‌ ಹೆಸರು ಬರೆದರೆ ಅಂತವರಿಗೆ ನೂರು ಬಸ್ಕಿ ತೆಗೆಯುವ ಶಿಕ್ಷೆ,ಇಲ್ಲವೇ ಪಾಠದ ಯಾವುದೋ ಒಂದು ಪ್ಯಾರಾವನ್ನು 25 ಸಲ ಬರೆದು ಕೊಂಡು ಬರುವ ಶಿಕ್ಷೆ, ಇಂತಹುದೇ ಕೆಲವೆಲ್ಲ ಪ್ರೌಢಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿರುವ ಶಿಕ್ಷೆಗಳಂತೆ. ಶಿಕ್ಷೆ ಎಂದರೆ ಏನು? ಅದು ನಿಜಕ್ಕೂ ವಿದ್ಯಾರ್ಥಿಯಲ್ಲಿ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಮೂಡಿಸು ವಂತ¨ªಾಗಿರಬೇಕು ಇಲ್ಲವೇ ಆ ಶಿಕ್ಷೆಯು ಆತನಿಗೆ ತನ್ನನ್ನು ತಿದ್ದಿಕೊಳ್ಳಲು ನೆರವಾಗುವಂತಿರಬೇಕು ಮಾತ್ರವಲ್ಲ ಆ ಶಿಕ್ಷೆಗೆ ತಕ್ಕದಾದ ತಪ್ಪನ್ನು ಅವನು ಮಾಡಿ ರಬೇಕು. ಆದರೆ ಮಾಡಿದ ಸಣ್ಣ ಪುಟ್ಟ ತಪ್ಪಿಗೂ ದೊಡ್ಡ ದೊಡ್ಡ ಶಿಕ್ಷೆ ನೀಡಿದರೆ ವಿದ್ಯಾರ್ಥಿಗಳಲ್ಲಿ ಆ ಶಿಕ್ಷಕ/ಕಿಯ ಬಗ್ಗೆ ಪ್ರೀತಿ, ಗೌರವ ಮೂಡಲು ಸಾಧ್ಯವೇ?

ತರಗತಿಯಲ್ಲಿ ಮಾತನಾಡಿದ್ದಕ್ಕೆ ನೂರು ಬಸ್ಕಿ ತೆಗೆಯುವಂತಹ ಶಿಕ್ಷೆ ಯನ್ನು ಕೊಡುವ ಅಗತ್ಯವಿದೆಯೇ? ಇಂತಹ ಶಿಕ್ಷೆಗಳು ಮಕ್ಕಳಲ್ಲಿ ಧನಾತ್ಮಕ ಬದಲಾ ವಣೆಗಿಂತ ಋಣಾತ್ಮಕ ಪರಿಣಾ ಮಗಳನ್ನು ಬೀರುವ ಸಾಧ್ಯತೆಗಳೆ ಹೆಚ್ಚು. ಹಿಂದೆಯೂ ವಿದ್ಯಾರ್ಥಿಗಳಿಂದ ಬಸ್ಕಿಯನ್ನು ತೆಗೆಸುತ್ತಿದ್ದರು, ಆದರೆ ಎಷ್ಟು?. ಐದೋ, ಹತ್ತೋ ಅಲ್ಲಿಗೆ ಮುಗಿಯುತ್ತಿತ್ತು. ಪೆಟ್ಟು ಹೊಡೆ ಯುತ್ತಿದ್ದರು. ಆಮೇಲೆ ಶಿಕ್ಷಕರಿಗೇ ಮಕ್ಕಳ ಮೇಲೆ ಕರುಣೆ ಮಾಡುತ್ತಿತ್ತು. ಹಿಂದೆ ಮಕ್ಕಳು ಎಷ್ಟೇ ತಂಟೆ ಮಾಡಿ ದರೂ, ಶಿಕ್ಷಕರು ಎಷ್ಟೇ ಶಿಕ್ಷೆ ಕೊಟ್ಟರೂ, ಮಕ್ಕಳು ಮತ್ತು ಶಿಕ್ಷಕರ ನಡುವೆ ಒಂದು ಸೌಹಾರ್ದ ಸಂಬಂಧವಿರುತ್ತಿತ್ತು. ಶಿಕ್ಷಕರಿಗೆ ತಮ್ಮ ಮೇಲೆ ಪ್ರೀತಿ ಇರು ವುದು ಮಕ್ಕಳ ಅರಿವಿಗೂ ಬರುತ್ತಿತ್ತು. ಆ ದಿನದ ತಂಟೆಗೆ ಆ ದಿನದ ಪುಟ್ಟ ಶಿಕ್ಷೆ ಮುಗಿಯಿತು, ಇಬ್ಬರೂ ಅದನ್ನು ಅಲ್ಲೇ ಮರೆತು ಬಿಡುತ್ತಿದ್ದರು. ಆದರೆ ಈಗ ಮಕ್ಕಳು ಬದಲಾಗುತ್ತಿ¨ªಾರೆ ಎಂದು ಹೇಳುತ್ತಲೇ ಶಿಕ್ಷಕರೇ ಬದಲಾ ಗುತ್ತಿ¨ªಾರೆ. ಮಕ್ಕಳಲ್ಲಿ ಭಯ ಹುಟ್ಟಿಸು ವುದಕ್ಕಾಗಿ ಶಿಕ್ಷೆ ಕೊಡುತ್ತಿ¨ªಾರೆಯೋ ಎಂದೆನಿಸುತ್ತಿದೆ.

ಇಂದಿನ ಮಕ್ಕಳನ್ನು ನಿಯಂತ್ರಣ ದಲ್ಲಿ ಇಡಲು ಇಂತಹ ಶಿಕ್ಷೆಗಳೆಲ್ಲ ಬೇಕಾಗುತ್ತದೆ ಎನ್ನುವುದು ಕೆಲವರ ವಾದ. ಆದರೆ ಇದು ಪೂರ್ಣ ಸತ್ಯ ವಿರಲಿಕ್ಕಿಲ್ಲ. ತರಗತಿಯಲ್ಲಿ ಮಕ್ಕಳನ್ನು ನಿಯಂತ್ರಿಸುವುದು ಅತೀ ಅಗತ್ಯ. ಆದರೆ ಮಕ್ಕಳ ಮೇಲೆ ನಿಯಂ ತ್ರಣ ಸಾಧಿಸಲು ಮುಖ್ಯವಾಗಿ ಶಿಕ್ಷಕರಿಗೆ ಬೇಕಾಗುವುದು ವಿಷಯದ ಮೇಲಿನ ಹಿಡಿತ. ಯಾರು ತಾವು ಪಾಠ ಮಾಡು ವ ವಿಷಯದ ಮೇಲೆ ಸಂಪೂರ್ಣ ಹಿಡಿತ ಹೊಂದಿರು ತ್ತಾರೋ, ಮಕ್ಕಳ ಸಂದೇಹಗಳನ್ನು ಪರಿ ಹರಿಸಲು ಶಕ್ತ ರಾಗಿರುತ್ತಾರೋ, ಯಾರಿಗೆ ಮಕ್ಕಳ ಬಗ್ಗೆ ನಿಜವಾದ ಕಳಕಳಿ ಇರುತ್ತದೋ, ಯಾರು ತರಗತಿಯ ಎಲ್ಲ ಮಕ್ಕಳನ್ನು ಸಮಾನವಾಗಿ ಪರಿ ಗಣಿಸು ತ್ತಾರೋ, ಹೋದ ವರ್ಷ ಮಾಡಿದ ಪಾಠವೇ ಈ ವರ್ಷ ಎಂದು ಅಸಡ್ಡೆ ತೋರದೆ ಪ್ರತೀ ತರಗತಿಗೂ ಸಿದ್ಧತೆ ನಡೆಸಿ ಕೊಂಡು ಬರುತ್ತಾರೋ ಅಂಥವ ರಿಗೆ ತರಗತಿ ನಿಯಂತ್ರಣ ಅಷ್ಟು ದೊಡ್ಡ ವಿಷಯ ವಾಗಲಾರದು, ಮಕ್ಕಳಿಗೆ ಶಿಕ್ಷೆ ಕೊಡುವ ಅಗತ್ಯವೂ ಬೀಳಲಾರದು.

ಅನಗತ್ಯ ದೈಹಿಕ ಶಿಕ್ಷೆ, ಹಲವಾರು ಸಲ ಬರೆಯಿಸುವುದು, ಇವೆಲ್ಲ ಶಿಕ್ಷಕರ ದೌರ್ಬಲ್ಯದ ಸಂಕೇತ. ಒಬ್ಬ ಶಿಕ್ಷಕ ನಿಜ ವಾಗಿಯೂ ತನ್ನ ವಿದ್ಯಾರ್ಥಿಗಳನ್ನು ಪ್ರೀತಿಸುವವನಾದರೆ ಖಂಡಿತ ವಾಗಿಯೂ ಅಂತಹ ಶಿಕ್ಷೆ ಕೊಡಲಾರ. ಅವನ ಮುಖ್ಯ ಉದ್ದೇಶ ವಿದ್ಯಾರ್ಥಿ ಗಳನ್ನು ಸರಿದಾರಿಗೆ ತರುವುದೇ ಆಗಿರುತ್ತದೆ. ಅವರನ್ನು ಹಿಂಸಿಸುವುದು ಆಗಿರುವುದಿಲ್ಲ. ಹೈಸ್ಕೂಲ್‌ ಮಕ್ಕಳು ಎಂದರೆ ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟವರು. ಅವರ ಆಲೋಚನೆಯೂ ಸಹ ಭಿನ್ನವಾಗಿರುತ್ತದೆ. ಅತ್ತ ಚಿಕ್ಕ ಮಕ್ಕಳು ಅಲ್ಲ, ಇತ್ತ ಜವಾಬ್ದಾರಿ ಯುತ ದೊಡ್ಡ ಮಕ್ಕಳೂ ಅಲ್ಲ. ಇಂತಹ ಮಕ್ಕಳನ್ನು ತುಂಬಾ ಜಾಗರೂಕ ವಾಗಿ  ನಿಭಾಯಿಸಬೇಕು. ಈ ನಡು ವಿನ ಹಂತ ದಲ್ಲಿಯೇ ಮಕ್ಕಳಿಗೆ ಉತ್ತಮ ಶಿಕ್ಷಕರ ಅಗತ್ಯವಿದೆ. ಪಾಠದ ವಿಷಯದಲ್ಲಿ ಮಾತ್ರವಲ್ಲ, ಅವರ ವ್ಯಕ್ತಿತ್ವ ಬೆಳೆಸುವಲ್ಲಿಯೂ ಕೂಡ ಪ್ರೌಢ ಶಾಲಾ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಶಿಕ್ಷಕರ ನಡವಳಿಕೆಯು ಮಕ್ಕಳಿಗೆ ಆದರ್ಶಪ್ರಾಯವಾಗಿರಬೇಕು. ಶಿಕ್ಷಕರು ಎಂದೂ ಮಕ್ಕಳ ನಡುವೆ ಭೇದವೆಣಿಸಬಾರದು. ಮಕ್ಕಳ ಉತ್ತರ ಪತ್ರಿಕೆ ತಿದ್ದುವಾಗ ಒಂದೇ ಮಾನದಂಡ ಅನುಸರಿಸ ಬೇಕು. ಇದು ತುಂಬಾ ಸಣ್ಣ ವಿಷಯದಂತೆ ಕಾಣಬಹುದು. ಆದರೆ ಮಕ್ಕಳು ತಮ್ಮ ಉತ್ತರಪತ್ರಿಕೆಯನ್ನು ತಮ್ಮ ಸಹ ಪಾಠಿಗಳ ಉತ್ತರ ಪತ್ರಿಕೆಗಳ ಜತೆ ಹೋಲಿಕೆ ಮಾಡಿಯೇ ಮಾಡು ತ್ತಾರೆ. ಆಗ ಎರಡರಲ್ಲಿಯೂ ಒಂದೇ ರೀತಿ ಉತ್ತರವಿದ್ದರೂ, ಬೇರೆ ಬೇರೆ ಅಂಕ ಕೊಟ್ಟಿರುವುದು ಗೊತ್ತಾದಾಗ ಶಿಕ್ಷಕರು ಮಾಡುವ ಭೇದ-ಭಾವ ಅರಿ ವಿಗೆ ಬರುತ್ತದೆ. ಆ ಕಿರುಪರೀಕ್ಷೆಗಳ ಅಂಕ ಎಲ್ಲಿಯೂ ಗಣನೆಗೆ ಬಾರದಿರ ಬಹುದು. ಆದರೆ ಈ ಭೇದ-ಭಾವ ಮಕ್ಕಳ ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಇದರಲ್ಲಿ ಅಸಡ್ಡೆ ಸಲ್ಲ. ಶಿಕ್ಷೆಯು ಶಿಕ್ಷಕನು ಬಳಸುವ ಕೊನೆಯ ಅಸ್ತ್ರವಾಗಿರಬೇಕು. ಪ್ರೀತಿ ಯಿಂದಲೇ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಬೇಕು. ಮುಂದೊಮ್ಮೆ ವಿದ್ಯಾರ್ಥಿಗಳು ಸಿಕ್ಕಾಗ, ನೀವು ಹಿಂದೆ ಪಾಠ ಮಾಡಿದ್ದು ನಮಗೆ ಈಗಲೂ ನೆನಪಿದೆ ಎಂದು ಹೇಳಬೇಕೇ, ಹೊರತು ನೀವು ಕೊಟ್ಟ ಶಿಕ್ಷೆ ಈಗಲೂ ನೆನಪಿದೆ ಎಂದು ಹೇಳುವಂತೆ ಆಗಬಾರದು.

Advertisement

ಚಿಂತಕ ಜಿಡ್ಡು ಕೃಷ್ಣಮೂರ್ತಿ ಅವರು ಹೇಳುವಂತೆ ವ್ಯಾಸಂಗ ಮಾಡಲು ಶಿಕ್ಷಕ ಹಾಗೂ ವಿದ್ಯಾರ್ಥಿಯ ನಡುವೆ ಸಹ ಕಾರ ಆವಶ್ಯಕ. ಇಬ್ಬರೂ ಇದರಲ್ಲಿ ಒಳ ಗೊಂಡಿದ್ದಾರೆ. ಶಿಕ್ಷಕನಿಗೆ ಹಲವು ವಿಷಯಗಳು, ಮಾಹಿತಿಗಳು ಗೊತ್ತಿರ ಬಹುದು. ಆದರೆ ಮಮತೆಯ ಗುಣ ವಿಲ್ಲ ದಿದ್ದರೆ ತಿಳಿದುದನ್ನು ವಿದ್ಯಾ ರ್ಥಿ ಗಳಿಗೆ ದಾಟಿಸಲು ಆತನು ಹೆಣ ಗಬೇಕಾಗುತ್ತದೆ. ಹಾಗಾಗಿ ಶಿಕ್ಷಕ ತನ್ನ ಬಗ್ಗೆ ಮಾತ್ರ ಕಾಳಜಿ ತೋರಿದರೆ ಸಾಲದು, ವಿದ್ಯಾರ್ಥಿಯ ಬಗ್ಗೆಯೂ ಆತನಿಗೆ ಕಳಕಳಿ ಇರಬೇಕು. ಶಾಲೆಗಳು ಪರಿಪೂರ್ಣ ಮಾನವನ ಪೋಷಣೆಯ ಬಗ್ಗೆ ಕಾಳಜಿ ವಹಿಸಬೇಕು. ಈ ಶಿಕ್ಷಣದ ಕೇಂದ್ರಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಹಜವಾಗಿ ಅರಳು ವಂತೆ ನೋಡಿಕೊಳ್ಳಬೇಕು ಎಂದು.

ಶಿಕ್ಷಕರೂ ಸಾಮಾನ್ಯಮನುಷ್ಯರೇ. ಅವರದ್ದೇ ತಾಪತ್ರಯ, ಜವಾಬ್ದಾರಿ ಗಳೂ ಇರುತ್ತವೆ. ಆದರೆ ಅವನ್ನೆಲ್ಲ ಮೀರಿ ದೇಶದ ಭವಿಷ್ಯ ರೂಪಿಸುವ ಪೀಳಿಗೆಯನ್ನು ನಿರ್ಮಿಸುವುದೂ ಅವರ ಕೈಯಲ್ಲಿದೆ. ಅಧ್ಯಾಪನ ತುಂಬಾ ಜವಾ ಬ್ದಾರಿ ಯುತ ವಾದ ಕೆಲಸ. ಶಿಕ್ಷೆ ಹಾಗೂ ಶಿಕ್ಷಣದ ನಡುವೆ ನಮ್ಮ ಶಿಕ್ಷಕರು ಉತ್ತಮ ಸಮತೋಲನ ಸಾಧಿಸಲಿ ಎಂದು ಹಾರೈಸೋಣ.

ಶಾಂತಲಾ ಎನ್‌. ಹೆಗ್ಡೆ, ಸಾಲಿಗ್ರಾಮ

 

Advertisement

Udayavani is now on Telegram. Click here to join our channel and stay updated with the latest news.

Next