Advertisement
“ಹೌದು’ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮ ತಜ್ಞರು. ಮೇಲ್ನೋಟಕ್ಕೆ ಇದು ತಾತ್ಕಾಲಿಕ ವಲಸೆ ಅನ್ನಿಸಬಹುದು. ಆದರೆ ಈ ಕೋವಿಡ್ 19 ಕಲಿಸಿ ರುವ ಪಾಠ ದೊಡ್ಡದು ಮತ್ತು ಅದರ ಭೀತಿ ಬಹುದಿನಗಳ ಕಾಲ ಹಸಿಯಾಗಿರುವಂತಹದ್ದು. ಹಾಗಾಗಿ ಜನ ಸ್ವಂತ ಊರು, ಸಂಬಂಧಿಕರು ಇರುವ ಆಸುಪಾಸು ಮನೆ ಖರೀದಿಗೆ ಮನಸ್ಸು ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಭವಿಷ್ಯದಲ್ಲಿ 2 ಮತ್ತು 3ನೇ ಹಂತದ ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅವಕಾಶ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬೆಳವಣಿಗೆ ತತ್‌ಕ್ಷಣಕ್ಕೆ ನಿರೀಕ್ಷಿಸಲು ಆಗ ದಂಥದ್ದು. ಜನರ ಬಳಿ ಈಗ ಹಣ ಇಲ್ಲ. ಜತೆಗೆ ಉದ್ಯೋಗ ಕಡಿತ, ವೇತನ ಕಡಿತದಂತಹ ಹಲವು ಸಮಸ್ಯೆಗಳು ಎದುರಾಗಬಹುದು. ಇದೆಲ್ಲವೂ ಸಹಜ ಸ್ಥಿತಿಗೆ ಬಂದ ಅನಂತರ ಖಂಡಿತ ಹುಬ್ಬಳ್ಳಿ – ಧಾರವಾಡ, ದಾವಣಗೆರೆ, ಬೆಳಗಾವಿ, ಮಂಗ ಳೂರು, ಉಡುಪಿ, ಮೈಸೂರುಗಳಂತಹ ನಗರ ಗಳಲ್ಲಿ ರಿಯಲ್ ಎಸ್ಟೇಟ್ ಬೆಳವಣಿಗೆಗೆ ಅವಕಾಶ ಇದೆ. ಅದರಲ್ಲೂ ಕೈಗೆಟಕುವ ದರದ ಮನೆಗಳಿಗೆ ಬೇಡಿಕೆ ಬರುವ ಸಾಧ್ಯತೆ ಇದೆ ಎಂದು ಭಾರ ತೀಯ ರಿಯಲ್ ಎಸ್ಟೇಟ್ ಡೆವಲಪರ್ ಸಂಘ ಗಳ ಒಕ್ಕೂಟ (ಕ್ರೆಡಾಯ್)ದ ಕರ್ನಾಟಕ ಘಟಕದ ಪ್ರದೀಪ್ ರಾಯ್ಕರ್ ಅಭಿಪ್ರಾಯಪಡುತ್ತಾರೆ. ಎನ್‌ಆರ್‌ಐಗಳು ಬೆಂಗಳೂರಿನತ್ತ?
ಈ ಮಧ್ಯೆ ಕೋವಿಡ್ 19 ಕಾಟಕ್ಕೆ ಹೆದರಿ ವಿದೇಶ ಗಳಲ್ಲಿರುವ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಸಿಲಿಕಾನ್ ಸಿಟಿ ಬೆಂಗಳೂರಿನತ್ತ ಮುಖ ಮಾಡಿದರೂ ಅಚ್ಚರಿ ಇಲ್ಲ.
ಭಾರತಕ್ಕೆ ಹೋಲಿಸಿದರೆ ಐರೋಪ್ಯ ರಾಷ್ಟ್ರಗಳಲ್ಲಿ ಕೋವಿಡ್ 19 ಪ್ರಭಾವ ತೀವ್ರವಾಗಿದೆ. ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಹಾಗಾಗಿ ಎನ್ನಾರೈಗಳು ತಾಯ್ನಾಡಿಗೆ ಮರಳುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಹೇಳುತ್ತಾರೆ. ಹಾಗೊಂದು ವೇಳೆ ಎನ್‌ಆರ್‌ಐಗಳು ಇತ್ತ ಮುಖ ಮಾಡಿದರೆ, ರಿಯಲ್ ಎಸ್ಟೇಟ್ ಬೆಳವಣಿಗೆಯ ಸಮತೋಲನಕ್ಕೆ ಪೂರಕ ಆಗಲಿದೆ.
ಸಮಸ್ಯೆ ಆಗದು, ಚೇತರಿಕೆ ಕಾಣುತ್ತದೆ
Related Articles
Advertisement
ಪ್ರಗತಿಯಲ್ಲಿವೆ 40 ಲಕ್ಷ ಮನೆಗಳು !ಬೆಂಗಳೂರೊಂದರಲ್ಲೇ ಪ್ರಗತಿಯಲ್ಲಿರುವ ಪ್ರಾಜೆಕ್ಟ್ಗಳು ಅಂದಾಜು ಆರು ಸಾವಿರಕ್ಕೂ ಅಧಿಕ. ಆ ಯೋಜನೆಗಳಡಿ 40 ಲಕ್ಷ ಮನೆಗಳು ತಲೆಯೆತ್ತಲಿವೆ. ಈಗಾಗಲೇ ಮಾರಾಟ ಮಾಡಲು ಸಿದ್ಧವಾಗಿರುವ ಮನೆಗಳ ಸಂಖ್ಯೆ ಸರಿಸುಮಾರು 60 ಸಾವಿರ. ಇದರಲ್ಲಿ ಕೈಗೆಟಕುವ ದರ ಮನೆಗಳು ಕೂಡ ಸೇರಿವೆ. ಉದ್ದಿಮೆ ಸಹಜ ಸ್ಥಿತಿಗೆ ಮರಳಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಮತ್ತು ಬ್ಯಾಂಕ್‌ಗಳು ನೆರವಿಗೆ ಬರಬೇಕು ಎಂದು ಪ್ರದೀಪ್ ರಾಯ್ಕರ್ ಒತ್ತಾಯಿಸಿದ್ದಾರೆ. ಭವಿಷ್ಯದಲ್ಲಿ ಮತ್ತೆ ಇಂತಹ ಸನ್ನಿವೇಶ ಬಂದರೆ ಗತಿ ಏನು ಎಂಬ ಭಯ ಸಹಜ. ಹೀಗಾಗಿ ಯುವ ಸಮುದಾಯ ಸ್ವಂತ ಊರುಗಳಲ್ಲೇ ಇರಲು ಇಷ್ಟ ಪಡುವ ಸಾಧ್ಯತೆ ಹೆಚ್ಚಿದೆ. ಆಗ 2 ಮತ್ತು 3ನೇ ಹಂತದ ನಗರಗಳಲ್ಲಿ ರಿಯಲ್ ಎಸ್ಟೇಟ್ ಬೆಳವಣಿಗೆಗೆ ವಿಪುಲ ಅವಕಾಶ ಸಿಗಬಹುದು.
-ಸುರೇಶ್ ಹರಿ, ಕ್ರೆಡಾಯ್ ಅಧ್ಯಕ್ಷ - ವಿಜಯಕುಮಾರ್ ಚಂದರಗಿ