Advertisement

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

10:27 PM Apr 07, 2020 | Hari Prasad |

ಬೀಜಿಂಗ್‌: ಕೋವಿಡ್ 19 ವೈರಸ್‌ ನ ತವರು ಮನೆಯಾಗಿರುವ ಚೀನದಲ್ಲಿ ಸೋಮವಾರ ಹೊಸತಾಗಿ 39 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ 38 ಇತರ ದೇಶಗಳಿಂದ ಬಂದದ್ದು. ಇದರಿಂದಾಗಿ ಆ ದೇಶದಲ್ಲಿ ಎರಡನೇ ಹಂತದ ಕೋವಿಡ್ 19 ಸೋಂಕು ಶುರುವಾಗಿದೆಯೇ ಎಂಬ ಆತಂಕ ವ್ಯಕ್ತವಾಗಿದೆ. ಬೀಜಿಂಗ್‌ನಲ್ಲಿ ಮಾತನಾಡಿದ ಚೀನದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ದೀರ್ಘಾವಧಿಗೆ ರಾಜಧಾನಿ ಹೆಚ್ಚಿನ ಅವಧಿಯ ವರೆಗೆ ವೈರಸ್‌ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿದೆ.

Advertisement

ವಿವಿಧ ರಾಷ್ಟ್ರಗಳಲ್ಲಿ ಅತಂತ್ರರಾಗಿರುವ ತನ್ನ ಪ್ರಜೆಗಳನ್ನು ಚಾರ್ಟರ್ಡ್‌ ವಿಮಾನದ ಮೂಲಕ ಕರೆ ತರುತ್ತಿದೆ. ಅಂಥವರಲ್ಲಿ ಕೆಲವರಿಗೆ ಸೋಂಕು ಇದ್ದಿರಬಹುದು ಎಂದು ಚೀನ ಅಧಿಕಾರಿ ಹೇಳಿದ್ದಾರೆ. ಭಾನುವಾರ ಒಂದು ಸಾವು ಸಂಭವಿಸಿದೆ. ಜತೆಗೆ 78 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ದೇಶದಲ್ಲಿ 81, 708 ಸೋಂಕು ಪ್ರಕರಣ, 77,078 ಮಂದಿ ಡಿಸಾcರ್ಜ್‌ ಆಗಿ, 3, 331 ಮಂದಿ ಅಸುನೀಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next