Advertisement

“ಭಾರತ್‌ ಮಾತಾ ಕಿ ಜೈ” ಅಂತ ಘೋಷಣೆ ಕೂಗುವುದು ಅಪರಾಧವೇ? ಹೈಕೋರ್ಟ್‌ ಹೇಳಿದ್ದೇನು?

06:18 PM Sep 27, 2024 | Team Udayavani |

ಬೆಂಗಳೂರು: ಭಾರತದಲ್ಲಿ ಭಾರತ್‌ ಮಾತಾ ಕಿ ಜೈ (Bharat Mata Ki Jai) ಅಂತ ಘೋಷಣೆ ಕೂಗುವುದು ಅಪರಾಧವೇ? ಅಥವಾ ದ್ವೇಷಪೂರಿತ ಭಾಷಣವೇ? ಹೀಗೊಂದು ಪ್ರಕರಣ ಗಮನ ಸೆಳೆದದ್ದು ಕರ್ನಾಟಕ ಹೈಕೋರ್ಟ್‌ ನಲ್ಲಿ!

Advertisement

ಏನಿದು ಪ್ರಕರಣ?

ಜೂನ್‌ ತಿಂಗಳಿನಲ್ಲಿ ಭಾರತ್‌ ಮಾತಾ ಕಿ ಜೈ ಎಂದು ಘೋಷಣೆ ಕೂಗುವ ಮೂಲಕ ದ್ವೇಷಭಾವನೆ ಹರಡುವಂತೆ ಮಾಡಿರುವುದಾಗಿ ಆರೋಪಿಸಿ ಪೊಲೀಸರು ಐದು ಮಂದಿ ವಿರುದ್ಧ ಎಫ್‌ ಐಆರ್‌ ದಾಖಲಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ಐವರು ಭಾರತ್‌ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರ ಗುಂಪೊಂದು ಅವರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಯುವಕನೊಬ್ಬ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದರು.

Advertisement

ಹೈಕೋರ್ಟ್‌ ಹೇಳಿದ್ದೇನು?

ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ಪೀಠ, ಎಫ್‌ ಐಆರ್‌(FIR) ಅನ್ನು ರದ್ದುಗೊಳಿಸಿ, ಭಾರತ್‌ ಮಾತಾ ಕಿ ಜೈ ಎಂಬ ಘೋಷಣೆ ದ್ವೇಷಪೂರಿತ ಭಾಷಣದ ಅಡಿಯಲ್ಲಿ ಬರುವುದಿಲ್ಲ ಎಂದು ಆದೇಶ ನೀಡಿದೆ.

ಐವರ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ (IPC) ಕಲಂ 153ಎ ಅಡಿ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿ(FIR)ಯನ್ನು ರದ್ದುಗೊಳಿಸಿರುವುದಾಗಿ ಹೈಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next