Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಅನುಮತಿ ಕೊಡುವುದು ಬಿಬಿಎಂಪಿ.ಈಗ ಅದು ಕಂದಾಯ ಇಲಾಖೆಗೆ ಸೇರಿದ ಸರ್ಕಾರದ ಆಸ್ತಿ, ಅಲ್ಲಿ ಗಣೇಶೋತ್ಸವ ಅದ್ದೂರಿಯಾಗಿ ಮಾಡುತ್ತೇವೆ. ಅದೇನೋ ಗಾದೆ ಇದೆಯಲ್ಲ, ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ.? ಇವನು ಯಾವ ಸೀಮೆ ದೊಣ್ಣೆ ನಾಯಕ ಎಂದರು.
Related Articles
Advertisement
ಸಿದ್ದರಾಮಯ್ಯ ದತ್ತಪೀಠಕ್ಕೆ ಅನ್ಯಾಯ ಮಾಡಿದವರುಚುನಾವಣೆಗೆ ನಿಲ್ಲಲು ಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು. ಹತ್ತು ಜನ ಸೂಚಿಸಿದರೆ ನಾಮಪತ್ರ ಸಲ್ಲಿಕೆ ಊರ್ಜಿತ ಆಗುತ್ತದೆ.ಗೆಲ್ಲಿಸೋದು ಜನರ ಕೈಯಲ್ಲಿದೆ.ನಾನು ಚಿಕ್ಕಮಗಳೂರು ಜಿಲ್ಲೆ ಮನೆ ಮಗ. ನನ್ನನ್ನ ನಮ್ಮ ಜನ ಗೆಲ್ಲಿಸ್ತಾರೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇನೆ.ರಸ್ತೆ, ಆಸ್ಪತ್ರೆ, ಸ್ಟೇಡಿಯಂ ಎಲ್ಲಾ ಕೆಲಸ ಯಾರು ಅಂದರೆ ಸಿ.ಟಿ ರವಿ ಹೆಸರೇಳುತ್ತಾರೆ. ಸಿದ್ದರಾಮಯ್ಯ ಅಂದರೆ ದತ್ತಪೀಠಕ್ಕೆ ಅನ್ಯಾಯ ಮಾಡಿದವರು ಅಂತಿದೆ. ನಾನು ಹೇಳಿದೆ ಸಿದ್ದರಾಮಯ್ಯ ಅವರೇ ಅನ್ಯಾಯ ಮಾಡಬೇಡಿ. ಅದು ಹಿಂದೂ ಜನರದ್ದು ಅಂತ ಮನವಿ ಮಾಡಿದೆ ಆದರೂ ಕೇರ್ ಮಾಡಲಿಲ್ಲ.ಚಿಕ್ಕಮಗಳೂರು ಜನತೆ ಅವರು ಬಂದರೆ ಪಾಠ ಕಲಿಸುತ್ತಾರೆ. ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಗೆದ್ದಿದ್ದೆವು. ಈಗ ಐದಕ್ಕೆ ಐದೂ ಸ್ಥಾನ ಗೆಲ್ಲುತ್ತೇವೆ. ನಾಯಕತ್ವ ಬದಲಾವಣೆ ದಿನಾ ಸುದ್ದಿಯಲ್ಲಿರಬೇಕು ಅಂತ ಅವರ ಕನಸು. ಹಾಗಾಗಿ ಈ ವಿಚಾರ ಕೆದಕುತ್ತಿದ್ದಾರೆ. ಹೀಗಾಗಿ ಇಲ್ಲಸಲ್ಲದ ವಿಚಾರ ಪ್ರಸ್ತಾಪ ಮಾಡ್ತಿದ್ದಾರೆ.ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಅವರೇ ನಿರ್ಧರಿಸಲಿದ್ದಾರೆ. ಯಡಿಯೂರಪ್ಪ ಬದಲಾವಣೆ ಸಂದರ್ಭದಲ್ಲಿ ಮುಂಚೆಯೇ ಚರ್ಚೆ ಆಗಿತ್ತು.ಅದನ್ನ ಅವರು ಸ್ಪಷ್ಟಪಡಿಸಿದ್ದರು.ಅನುಮಾನಂ ಪೆದ್ದ ರೋಗಮ್.ಡಿ.ಕೆ ಶಿವಕುಮಾರ್ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು. ವೀರಪ್ಪ ಯೋಯ್ಲಿ ಹೇಗೆ ಸಿಎಂ ಆದರು ಅಂತ.ಕುತಂತ್ರ ರಾಜಕಾರಣ ಇರುವುದು ಕಾಂಗ್ರೆಸ್‌ನಲ್ಲಿ ಎಂದರು.
ವೀರೇಂದ್ರ ಪಾಟೀಲರು ದಾಖಲೆ ಸೀಟು ಪಡೆದು ಗೆಲುವು ಸಾಧಿಸುತ್ತಾರೆ. ಆದರೆ ಅವರ ಆರೋಗ್ಯ ವಿಚಾರಿಸಲು ಬಂದ ಗಾಂಧಿ ಏರ್ ಪೋರ್ಟ್ ಹೋಗಿ ಬದಲಾವಣೆ ಚೀಟಿ ಕೊಟ್ಟರು. ಎಲ್ಲರ ಸಮ್ಮತದ ಮೇಲೆ ಬೊಮ್ಮಾಯಿ ಅವರಿಗೆ ಸಿಎಂ ಸ್ಥಾನ ಕೊಡಲಾಗಿದೆ. ನಮ್ಮ ಪಕ್ಷದ ಸಿಎಂ ಬದಲಾವಣೆ ವಿಚಾರ ಚರ್ಚೆ ಮಾಡಲು ಇವರು ಯಾವ ಸೀಮೆ ದಾಸಪ್ಪ.ಈ ವಿಚಾರ ಕಪೋಲ ಕಲ್ಪಿತ. ಮಾಧ್ಯಮಗಳಲ್ಲಿ ಬರುವ ಬದಲಾವಣೆ ವಿಚಾರ ಸತ್ಯ ಆಗಿದ್ದರೆ ಹತ್ತು ಬಾರಿ ಬದಲಾವಣೆ ಆಗಬೇಕಿತ್ತು ಎಂದರು. ನಿತೀಶ್ ಅಭ್ಯಾಸವೇ ಆ ರೀತಿ ಬಿಹಾರದ ಪ್ರಸ್ತುತ ವಿಚಾರ ಮಾತನಾಡಿ, ನಿತೀಶ್ ಕುಮಾರ್ ಅಭ್ಯಾಸವೇ ಆ ರೀತಿ.ತೇಜಸ್ವಿ ಯಾದವ್ ಪಲ್ಲಟ್ ಚಾಚಾ ಅಂದರು. ಈ ತರದ ಸ್ವಭಾವ ಇವತ್ತಿನದ್ದು ಅಲ್ಲ.1996 ರಿಂದ ಇದೇ ರೀತಿ ಬೆಳೆಸಿಕೊಂಡು ಬಂದವರು. ಎನ್ ಡಿಎ ಬಿಟ್ಟು ಮಹಾಘಟಬಂಧನ್ ಜತೆ ಹೋಗಿ ಸಿಎಂ ಆದರು, ಆರ್ ಜೆಡಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಹೇಳಿ ಹೊರ ಬಂದರು. ಇದು ಅವರ ರಾಜಕೀಯ ರೋಗ ಅನ್ನಬಹುದು.
ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೂ ಅವರನ್ನ ಸಿಎಂ ಮಾಡಿದ್ದೆವು. ಇದು ಬಿಹಾರಕ್ಕೆ ಒಳ್ಳೆಯದಲ್ಲ.ಆರ್ ಜೆಡಿಯೇ ಅವರ ಕಾಲೆಳೆದು ಮನೆಗೆ ಕಳಿಸಬಹುದು ಎಂದರು.