Advertisement
ಇನ್ನೂ ನಾಲ್ಕು ಅಸೊ.ಗಳು ಚುನಾವಣೆ ತಯಾರಿ ನಡೆಸುತ್ತಿವೆ. 26 ಅಸೋ.ಗಳು ಈಗಾಗಲೇ ಚುನಾವಣಾ ಅಧಿಕಾರಿಯನ್ನೂ ನೇಮಿಸಿಕೊಂಡಿವೆ. ಹೀಗಾಗಿ 30 ಸದಸ್ಯರ ಪರಿಪೂರ್ಣ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದೇವೆ. ಎಂದು ನ್ಯಾಯಾಲಯ ನೇಮಿಸಿರುವ ಆಡಳಿತಾಧಿಕಾರಿ ವಿನೋದ್ ರಾಯ್ ಹೇಳಿದ್ದಾರೆ.
2 ವರ್ಷಗಳಿಂದ ಬಿಸಿಸಿಐ ಆಡಳಿತ ಸಮಿತಿಯನ್ನು ಹೊಂ ದಿಲ್ಲ. ರಾಯ್ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿರುವ ತಾತ್ಕಾಲಿಕ ಸಮಿತಿಯೇ ಬಿಸಿಸಿಐ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಇದರಿಂದಾಗಿ ಆಡಳಿತದಲ್ಲಿ ಗೊಂದಲಗಳು ಉಂಟಾಗುತ್ತಿರುವುದು ಮಾತ್ರವ ಲ್ಲದೆ ವಿವಿಧ ಕ್ರಿಕೆಟ್ ಮಂಡಳಿಗಳ ನಡುವೆ ಸೌಹಾರ್ದಯುತ ವಾತಾವರಣವೂ ಇಲ್ಲದಂತಾಗಿದೆ.
ಅಕ್ಟೋಬರ್ 22ರಂದು ಬಿಸಿಸಿ ಐಗೆ ಚುನಾವಣೆ ನಡೆಸಬೇಕೆಂದು ಆಡಳಿತ ಸಮಿತಿ ನಿರ್ಧರಿಸಿದೆ. ಇದ ಕ್ಕೂ ಮೊದಲು ರಾಜ್ಯಗಳ ಕ್ರಿಕೆಟ್ ಅಸೋ.ಗಳಿಗೆ ಚುನಾವಣೆ ನಡೆದು ಆಡಳಿತ ಮಂಡಳಿಗಳು ಅಸ್ತಿತ್ವಕ್ಕೆ ಬರಬೇಕು.