Advertisement
ವಿಶ್ವಕಪ್‌ನಲ್ಲಿ ಈವರೆಗೆ ಆಸ್ಟ್ರೇಲಿಯ ವಿರುದ್ಧ 3 ಪಂದ್ಯಗಳನ್ನಾಡಿದರೂ ಬಾಂಗ್ಲಾ ಒಂದನ್ನೂ ಗೆದ್ದಿಲ್ಲ. ಈ ಬಾರಿ ಜಯದ ಖಾತೆ ತೆರೆದೀತೇ, ಗೆದ್ದು ಸೆಮಿಫೈನಲ್‌ಗೆ ಹತ್ತಿರವಾದೀತೇ ಎಂಬುದು ಈ ಪಂದ್ಯದ ಕುತೂಹಲ.ಅಂದಹಾಗೆ ಇದು ಪ್ರಸಕ್ತ ವಿಶ್ವಕಪ್‌ನಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕೊನೆಯ ಪಂದ್ಯ.
ಅನುಮಾನವೇ ಇಲ್ಲ, ಈ ಪಂದ್ಯದಲ್ಲಿ ಆಸ್ಟ್ರೇಲಿಯವೇ ನೆಚ್ಚಿನ ತಂಡ. ಆದರೆ ಬಹಳ ಜೋಶ್‌ನಲ್ಲಿರುವ ಬಾಂಗ್ಲಾದೇಶವನ್ನು ನಂಬಲು ಸಾಧ್ಯವಿಲ್ಲ. ಪ್ರತೀ ವಿಶ್ವಕಪ್ ಕೂಟಗಳಲ್ಲೂ ದೊಡ್ಡ ತಂಡಗಳನ್ನು ಬೇಟೆಯಾಡಿ, ಪಂದ್ಯಾವಳಿಯ ದಿಕ್ಕನ್ನೇ ಬದಲಿಸುವುದು ಬಾಂಗ್ಲಾ ಟೈಗರ್ಗೆ ಹವ್ಯಾಸವಾಗಿದೆ. ಈಗಾಗಲೇ ಮೊರ್ತಜ ಪಡೆ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸನ್ನು ಮಗುಚಿದೆ. ಕಾಂಗರೂ ಬೇಟೆಗೆ ಕಾದಿದೆ. ಬಾಂಗ್ಲಾದೇಶದ ಸಂಪೂರ್ಣ ಸಾಮರ್ಥ್ಯ ಬ್ಯಾಟಿಂಗ್ ವಿಭಾಗದಲ್ಲಿ ಅಡಗಿದೆ. ಆದರೆ ಬೌಲಿಂಗ್ ವಿಭಾಗ ತೀರಾ ದುರ್ಬಲ. ಹೀಗಾಗಿ ಆಸ್ಟ್ರೇಲಿಯದ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಹಾಗೆಯೇ ಬಾಂಗ್ಲಾ ಬೌಲಿಂಗ್ ದಾಳಿಯನ್ನು ಪುಡಿಗಟ್ಟುವುದೂ ಕಾಂಗರೂಗಳಿಗೆ ಸವಾಲೇನಲ್ಲ. ಭಾರತ ವಿರುದ್ಧ ಸೋತ ಬಳಿಕ ಫಿಂಚ್ ಪಡೆ ಬಹಳ ಎಚ್ಚರದಲ್ಲಿದೆ; ಲೆಕ್ಕಾಚಾರದ ಆಟದ ಮೂಲಕ ಮುಂದಡಿ ಇಡುತ್ತಿದೆ.
Related Articles
ಆಸ್ಟ್ರೇಲಿಯಕ್ಕೆ ಶಕಿಬ್ ಅಲ್ ಹಸನ್ ಗಂಡಾಂತರವೊಡ್ಡುವ ಸಾಧ್ಯತೆ ಇದೆ. ಸತತ ಶತಕ ಬಾರಿಸುವ ಮೂಲಕ ಅವರು ಎದುರಾಳಿಗಳಿಗೆಲ್ಲ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಆಸೀಸ್ ವಿರುದ್ಧ ದೊಡ್ಡ ಮೊತ್ತ ದಾಖಲಾಗಬೇಕಾದರೆ ಶಕಿಬ್ ಪಾತ್ರ ನಿರ್ಣಾಯಕವಾಗಬೇಕಿದೆ. ಉಳಿದಂತೆ ತಮಿಮ್, ಸರ್ಕಾರ್, ರಹೀಂ, ದಾಸ್, ಮಹಮದುಲ್ಲ ಅವರನ್ನೊಳಗೊಂಡ ಬಾಂಗ್ಲಾ ಬ್ಯಾಟಿಂಗ್ ಸರದಿ ಅತ್ಯಂತ ಬಲಿಷ್ಠ ಎಂಬುದರಲ್ಲಿ ಅನುಮಾನವಿಲ್ಲ.
Advertisement
ಆದರೆ ಬಾಂಗ್ಲಾದ ಈ ಬ್ಯಾಟಿಂಗ್ ಸರದಿಯನ್ನು ಬೆದರಿಸಲು ಸ್ಟಾರ್ಕ್, ಕಮಿನ್ಸ್, ಬೆಹೆÅಂಡಾಫ್ì, ಕೋಲ್ಟರ್ ನೈಲ್ ಮೊದಲಾದವರಿದ್ದಾರೆ. ಕಾಂಗರೂಗಳನ್ನು ನಿಯಂತ್ರಿಸಲು ಬಾಂಗ್ಲಾ ಬಳಿ ಘಾತಕ ಅಸ್ತ್ರಗಳಿಲ್ಲ. ಇದು ಪಂದ್ಯದ ವ್ಯತ್ಯಾಸಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆ ಇದೆ.
ಸಂಭಾವ್ಯ ತಂಡಗಳುಆಸ್ಟ್ರೇಲಿಯ :
ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್/ನಥನ್ ಕೋಲ್ಟರ್ ನೈಲ್, ನಥನ್ ಲಿಯೋನ್. ಬಾಂಗ್ಲಾದೇಶ :
ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಂ, ಲಿಟನ್ ದಾಸ್, ಮಹಮದುಲ್ಲ, ಮೊಸದೆಕ್ ಹೊಸೈನ್, ಮೊಹಮ್ಮದ್ ಸೈಫುದ್ದೀನ್, ಮೆಹಿದಿ ಹಸನ್ ಮಿರಾಜ್, ಮಶ್ರಫೆ ಮೊರ್ತಜ (ನಾಯಕ), ಮುಸ್ತಫಿಜುರ್ ರಹಮಾನ್