Advertisement

3 ಸಾವಿರ ಎಕರೆಗೆ ನೀರಾವರಿ-ಕೆರೆಗೆ ನೀರು: ಕರಡಿ

04:09 PM Dec 30, 2020 | Team Udayavani |

ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಬರುವ ಕೊಪ್ಪಳ ತಾಲೂಕಿನ 14ಕೆರೆಗಳಿಗೆ ಮುಂಡರಗಿ ಶಾಖಾ ಕಾಲುವೆಯಿಂದನೀರು ತುಂಬಿಸುವ ಮತ್ತು ಕೊಪ್ಪಳ ತಾಲೂಕಿನಬೆಟಗೇರಿ ಗ್ರಾಮದ ವ್ಯಾಪ್ತಿಯ 3000 ಎಕರೆಜಮೀನಿಗೆ ನೀರು ಒದಗಿಸುವ ಕಾಮಗಾರಿಗಳಿಗೆಕರ್ನಾಟಕ ನೀರಾವರಿ ನಿಗಮ ಅನುಮೋದನೆನೀಡಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಡಿ. 29ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಮಲ್ಲಿಕಾರ್ಜುನ ಗುಂಗೆ ಆದೇಶ ಮಾಡಿದ್ದಾರೆ.ತಾಲೂಕಿನ 14 ಕೆರೆಗಳಿಗೆ ತುಂಬಿಸುವಯೋಜನೆ ಕಾಮಗಾರಿ ಕೈಗೊಳ್ಳುವಂತೆಮತ್ತು ಅಳವಂಡಿ-ಬೆಟಗೇರಿ ಏತ ನೀರಾವರಿಯೋಜನೆಯಡಿ ಬೆಟಗೇರಿ ಗ್ರಾಮದ 3 ಸಾವಿರಎಕರೆ ಜಮೀನಿಗೆ ಸಿಂಗಟಾಲೂರು ಏತ ನೀರಾವರಿಯೋಜನೆಯ 5768.04 ಕೋಟಿ ಪರಿಷ್ಕೃತಅಂದಾಜಿನಲ್ಲಿ ಅಳವಡಿಸಿಕೊಂಡು ಕಾಮಗಾರಿ ಕೈಗೆತ್ತಿಕೊಂಡು ಈ ಭಾಗದ ಸಾವಿರಾರು ರೈತರಿಗೆಅನುಕೂಲ ಕಲ್ಪಿಸಿಕೊಡುವಂತೆ ಹಲವು ಬಾರಿಮನವಿ ಮಾಡಿಕೊಂಡಿದ್ದೆವು. ಬೆಂಗಳೂರಿನಲ್ಲಿ ಡಿ.8ರಂದು ನಡೆದ ಅಂದಾಜು ಪರಿಶೀಲನಾ ಸಮಿತಸಭೆಯಲ್ಲಿ ಪ್ರಸ್ತಾವನೆ ಸಹ ಸಲ್ಲಿಸಲಾಗಿತ್ತು.ಅದರಂತೆ ಸಿಂಗಟಾಲೂರು ಏತ ನೀರಾವರಿಯೋಜನೆಯ 5768.04 ಕೋಟಿ ಪರಿಷ್ಕೃƒತಅಂದಾಜಿನಲ್ಲಿ ಈ ಎರಡೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿಗಮ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

ಕೊಪ್ಪಳ ತಾಲೂಕಿನ ಒಟ್ಟು 14 ಕೆರೆಗಳಿಗೆ ಮುಂಡರಗಿ ಶಾಖಾ ನಾಲಾದಿಂದನೀರು ತುಂಬಿಸಲು ಒಟ್ಟು 2218 ಲಕ್ಷ ರೂ.,ಬೆಟಗೇರಿ ಗ್ರಾಮದ 3000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಒಟ್ಟು 1600ಲಕ್ಷ ರೂ. ಕಾಮಗಾರಿಗೆ ಸಂಬಂಧಿ ಸಿದಂತೆ ಸಬ್‌ಮರ್ಷಿಬಲ್‌ ಪಂಪ್‌ಗ್ಳನ್ನು ಅಳವಡಿಸುವುದು, ಇದಕ್ಕೆ ಸಂಬಂಧಿಸಿದ ಪ್ಲಾಟ್‌ಫಾರ್ಮ್ ನಿರ್ಮಾಣ ಮತ್ತು ಹೆಚ್ಚುವರಿ ರೈಸಿಂಗ್‌ ಮೇನ್‌ನಿರ್ಮಾಣ ಕಾಮಗಾರಿಗೆ 422.92 ಲಕ್ಷಮೊತ್ತದಲ್ಲಿ ಕೂಡಲೇ ಕಾಮಗಾರಿ ಕೈಗೊಳ್ಳಲುಟೆಂಡರ್‌ ಕರೆಯಲಾಗುವುದು ಎಂದು ನಿಗಮದಎಂಡಿ ತಿಳಿಸಿರುವುದಾಗಿ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

ಕೊಪ್ಪಳ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ಮತ್ತು ಬೆಟಗೇರಿ ಗ್ರಾಮದ 3 ಸಾವಿರ ಎಕರೆ ಪ್ರದೇಶಕ್ಕೆ ಶೀಘ್ರದಲ್ಲೆ ನೀರು ದೊರಕಲಿದೆ.ಎರಡೂ ಕಾಮಗಾರಿಗಳಿಂದ ಈ ಭಾಗದ ರೈತರ ದಶಕಗಳ ಕನಸುಈಡೇರಿದಂತಾಗುತ್ತದೆ. ರಾಜ್ಯ ಸರ್ಕಾರ ಅದರಲ್ಲೂ ನೀರಾವಸಿ ಸಚಿವರಮೇಶ್‌ ಜಾರಕಿಹೊಳಿ ಅವರು ನಮ್ಮ ಬೇಡಿಕೆಗಳಿಗೆ ಉತ್ತಮ ಸ್ಪಂದನೆ ನೀಡಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಹೀಗಾಗಿ ಸಿಎಂ, ನೀರಾವರಿ ಸಚಿವರು, ಸರ್ಕಾರಕ್ಕೆ ನಮ್ಮ ಭಾಗದ ರೈತರ ಪರ ಧನ್ಯವಾದ ಅರ್ಪಿಸುತ್ತೇನೆ. -ಸಂಗಣ್ಣ ಕರಡಿ, ಕೊಪ್ಪಳ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next