Advertisement
ಶರಾವತಿ ಮತ್ತು ಅಘನಾಶಿನಿಯಿಂದ ಬೆಂಗಳೂರಿಗೆ ನೀರು ತರಬೇಕು ಎಂಬ ಚರ್ಚೆ ನಡೆಯುವ ಹೊತ್ತಿಗೇ ಪಶ್ಚಿಮ ಘಟ್ಟಗಳ ಕಾರ್ಯಪಡೆ ಸರ್ಕಾರಕ್ಕೆ ಇಂಥದ್ದೊಂದು ಶಿಫಾರಸು ನೀಡಿದೆ.
Related Articles
Advertisement
‘ಆಗಿದ್ದಾಯ್ತು; ಮುಂದೆ ಆಗೋದು ಬೇಡ’: ಎತ್ತಿನಹೊಳೆ ಬಗ್ಗೆ ಕಾರ್ಯಪಡೆ ನಿಲುವೇನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಉದ್ದೇಶಿತ ಯೋಜನೆ ಈಗಾಗಲೇ ಅನುಷ್ಠಾನಗೊಳ್ಳುತ್ತಿದೆ. ಆದ್ದರಿಂದ ಆಗಿರುವುದನ್ನು ನಿಲ್ಲಿಸಿ ಎಂದು ಹೇಳಲು ಆಗುವುದಿಲ್ಲ. ಸಾಧ್ಯವಾದಷ್ಟು ಅರಣ್ಯ ಉಳಿಸಬೇಕು ಎಂದು ಹೇಳಿದ್ದೇವೆ. ಇನ್ನು ಈ ಯೋಜನೆ ಬಗೆಗಿನ ನಿಲುವನ್ನು ಸರ್ಕಾರಕ್ಕೆ ಬಿಡುತ್ತೇವೆ’ ಎಂದಷ್ಟೇ ಹೇಳಿದರು.
ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ 22 ಮುಖ್ಯ ನದಿಗಳು ಮತ್ತು 180 ಉಪನದಿಗಳು ಹುಟ್ಟುತ್ತವೆ. ಆ ಎಲ್ಲ ನದಿ ಮೂಲಗಳನ್ನು ಸಂರಕ್ಷಿಸಿ, ಅವುಗಳು ಸದಾ ಜೀವನದಿಗಳಾಗಿ ಇರುವಂತೆ ಕಾಪಾಡುವುದು ಆದ್ಯಕರ್ತವ್ಯ. ಆದರೆ, ನದಿ ದಂಡೆಗಳಲ್ಲಿ ಇರುವ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರವಾಸಿಗಳು ಬಹಿರ್ದೆಸೆಗೆ ಹೋಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಪ್ಪಿಸಲು ನದಿಗಳ ಸಮೀಪ ಹಾಗೂ ಶಾಲೆಗಳು, ಆರೋಗ್ಯ ಕೇಂದ್ರಗಳ ಸಮೀಪ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ, ಒಳಚರಂಡಿ ವ್ಯವಸ್ಥೆ ಕಲ್ಪಿಸುವ ತುರ್ತು ಅಗತ್ಯವಿದೆ.
ಅಲ್ಲದೆ, ಪಶ್ಚಿಮಘಟ್ಟ ವ್ಯಾಪ್ತಿಯ ಗ್ರಾಮ, ಪಟ್ಟಗಳಲ್ಲಿ ಶೌಚಾಲಯಗಳ ಕೊರತೆ ಇರುವುದರಿಂದ ಬಹಿರ್ದೆಸೆ ಪದ್ಧತಿ ಈಗಲೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮನೆಗಳಿಗೂ ಶೌಚಾಲಯ ನಿರ್ಮಾಣದ ಜತೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.