Advertisement

ಬಾಲಿವುಡ್ ಖ್ಯಾತ ನಟ ಇರ್ಫಾನ್ ತಾಯಿ ನಿಧನ; ಜೈಪುರದಲ್ಲಿ ಅಂತ್ಯಕ್ರಿಯೆ, ಪುತ್ರ ಮುಂಬೈನಲ್ಲಿ

08:27 AM Apr 27, 2020 | Nagendra Trasi |

ನವದೆಹಲಿ: ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ತಾಯಿ ಸಯೀದಾ ಬೇಗಂ(95ವರ್ಷ) ತೀವ್ರ ಅನಾರೋಗ್ಯದಿಂದ ಜೈಪುರದಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಈ ಸುದ್ದಿಯನ್ನು ಬಾಲಿವುಡ್ ವಾಣಿಜ್ಯ ವಿಶ್ಲೇಷಕ ಕೋಮಲ್ ನಹಾಟಾ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಹೇಳಿದೆ.

Advertisement

ದ ಲೈಫ್ ಆಫ್ ಪೈ ನಟ ಇರ್ಫಾನ್ ತಾಯಿ ಸಯೀದಾ ಬೇಗಂ ಶನಿವಾರ ಮನೆಯಲ್ಲಿ ವಿಧಿವಶರಾಗಿರುವುದಾಗಿ ಕೋಮಲ್ ಟ್ವೀಟ್ ಮಾಡಿ ಸಾಂತ್ವನ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಕೋವಿಡ್ 19 ಲಾಕ್ ಡೌನ್ ನಿಂದಾಗಿ ಪುತ್ರ ಇರ್ಫಾನ್ ಖಾನ್ ಸದ್ಯ ಮುಂಬೈನಲ್ಲಿ ಇದ್ದಿರುವುದಾಗಿ ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ತಾಯಿಯ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದಿರುವ ನಟ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಯಿ ಸಯೀದ್ ಬೇಗಂ ಅವರಿಗೆ ತಮ್ಮ ಅಂತಿಮ ಗೌರವ ಸಲ್ಲಿಸಿದ್ದಾರೆ.

ಜೈಪುರದ ಚುಂಗಿ ನಾಕಾ ರುದ್ರಭೂಮಿಯಲ್ಲಿ ಸಯೀದ್ ಬೇಗಂ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಅಂತ್ಯ ಸಂಸ್ಕಾರದ ವೇಳೆ ಕೆಲವೇ ಮಂದಿಗೆ ಕುಟುಂಬದ ಸದಸ್ಯರಿಗೆ ಭಾವಹಿಸಲು ಅವಕಾಶ ನೀಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next