Advertisement
94ಸಿ ಯೋಜನೆಯಡಿ ಸುಮಾರು 20ಕ್ಕೂ ಅಧಿಕ ಕುಟುಂಬಗಳು ಪಡೆದಿರುವ ಹಕ್ಕುಪತ್ರದಲ್ಲಿ ಸರ್ವೇ ನಂ. ವ್ಯತ್ಯಾಸ ಕಂಡು ಬಂದಿದೆ. ಅಧಿಕಾರಿಗಳ ಬೇಜವಾಬ್ದಾರಿ ಯಿಂದಾಗಿ ಕಳೆದೆರಡು ವರ್ಷಗಳಿಂದ ಆರ್‌ಟಿಸಿ ಲಭಿಸದೆ ಪರದಾಡುತ್ತಿದ್ದಾರೆ.
ದಿಕ್ಕೇ ತೋಚುತ್ತಿಲ್ಲ:
22 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. 2017ರಲ್ಲಿ ನಮಗೆ 94ಸಿ ಯೋಜನೆಯಡಿ ಹಕ್ಕುಪತ್ರ ನೀಡಿದ್ದು, ಈಗ ಆರ್‌ಟಿಸಿ ತೆಗೆ ಯಲು ಹೋದಾಗ ನಮ್ಮ ಸರ್ವೇ ನಂ.ನಲ್ಲಿ ಬೇರೆಯವರ ವರ್ಗ ಜಾಗ ಕಾಣಿಸುತ್ತಿದೆ ಎಂದು ಹೇಳುತ್ತಾರೆ. ಅಂದಿನಿಂದ ಇಂದಿನವರೆಗೆ ಸರಕಾರಿ ಸೌಲಭ್ಯ ದೊರೆಯದೆ ದಿಕ್ಕೇ ತೋಚು ತ್ತಿಲ್ಲ. ಹಕ್ಕುಪತ್ರಕ್ಕಾಗಿ ಅಧಿಕಾರಿಗಳಲ್ಲಿ ಬಿಕ್ಷೆ ಬೇಡುವ ಸ್ಥಿತಿ ಬಂದಿದೆ. – ಜಯಂತಿ ಪೂಜಾರಿ ಕೊಪ್ಪದಬಾಕಿಮಾರು
ಆತುರದಲ್ಲಿ ಹಕ್ಕು ಪತ್ರ ತಯಾರಿ:
ವೇಣೂರು ಹೋಬಳಿ ಮೂಡು ಕೋಡಿ ಗ್ರಾಮದ ಕೊಪ್ಪದಬಾಕಿಮಾರು ಗ್ರಾಮಸ್ಥರಿಗೆ 2017ರಲ್ಲಿ 94ಸಿ ಯೋಜನೆಯಡಿ ಹಕ್ಕುಪತ್ರ ನೀಡಲಾಗಿದೆ. ಅಂದು ಆತುರದಲ್ಲಿ ಹಕ್ಕುಪತ್ರ ತಯಾರಿಸಿದ್ದು, ಮೇ 29ರ ಬಳಿಕ ಎಲ್ಲ ಫಲಾನುಭವಿಗಳ ಹಕ್ಕುಪತ್ರ ಸಂಗ್ರಹಿಸಿ ಸರ್ವೇ ನಂ. ಸರಿಮಾಡಿ ನೀಡುತ್ತೇವೆ. ಬಳಿಕ ಒಂದು ವಾರ ಸಮಯ ಬೇಕಾಗುತ್ತದೆ. – ಹರೀಶ್ ಕೆ. ಗ್ರಾಮಲೆಕ್ಕಿಗ (ಕೇಸ್ ವರ್ಕರ್)
ವ್ಯತ್ಯಾಸ ಏನು?:
ಸರ್ವೇ ನಂ. 99/2ಎಪಿ8 ಮೂಡುಕೋಡಿ ಗ್ರಾಮದ ಕೊಪ್ಪದಬಾಕಿಮಾರುವಿನಲ್ಲಿರುವ ಸರಕಾರಿ ಜಾಗ. ಇದರಲ್ಲಿ ಫಲಾನುಭವಿಗಳು ವಾಸವಾಗಿದ್ದಾರೆ. ಆದರೆ ಇವರಿಗೆ ನೀಡಲಾದ ಹಕ್ಕುಪತ್ರದಲ್ಲಿ 99/2ಎಪಿ1 ಎಂದು ನಮೂದಿಸಲಾಗಿದ್ದು, ಇದು ಬೇರೆಯವರ ವರ್ಗ ಜಾಗ ಎಂದು ಕಾಣಿಸುತ್ತಿದೆ. ಹೀಗಾಗಿ ಆರ್‌ಟಿಸಿ ಲಭಿಸುತ್ತಿಲ್ಲ. 35ಕ್ಕೂ ಅಧಿಕ ಕುಟುಂಬಗಳು ಈ ಸಮಸ್ಯೆಯಡಿ ಸಿಲುಕಿವೆ. ಇದರಲ್ಲಿ ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಸರಿಮಾಡಿ ನೀಡಿರುವ ಅಧಿಕಾರಿಗಳು, ಉಳಿದ ಫಲಾನುಭವಿಗಳಿಗೆ ಸತಾಯಿಸುತ್ತಿರುವುದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
Related Articles
Advertisement