Advertisement

ಕೋವಿಡ್‌ ಸಾಮಗ್ರಿ ಖರೀದಿ ಹೆಸರಲ್ಲಿ ಅವ್ಯವಹಾರ

12:09 PM Feb 06, 2022 | Team Udayavani |

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ನೀಡಿದ ಅನುದಾನದಲ್ಲೂ, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳು ಬಹಿರಂಗಗೊಂಡಿವೆ.

Advertisement

ಬೆಂಗಳೂರು ನಗರ ಜಿಪಂ ಮತ್ತು ರಾಮನಗರ ಜಿಪಂಗಳ ಕೆಲವು ಗ್ರಾಪಂಗಳಲ್ಲಿ ಸ್ವಂತ ನಿಧಿಯ (ವರ್ಗ-1 15ನೇ ಹಣಕಾಸು ಹಾಗೂ ಇತರೆ) ಖಾತೆಗಳಿಂದ ಸಂದೇಹಾಸ್ಪದವಾಗಿ ಹಣ ಬ್ಯಾಂಕ್‌ ಖಾತೆಯಿಂದ ತೆಗೆದಿರುವುದು ಸಾರ್ವಜನಿಕರಿಂದ ಸ್ವೀಕೃತವಾದ ದೂರುಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ಗಮನಕ್ಕೆ ಬಂದಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಪಂ ವ್ಯಾಪ್ತಿಯ ಕೆಲವು ಗ್ರಾಪಂಗಳಲ್ಲಿ ಕೊರೊನಾ ನಿಯಂತ್ರಣ ನೆಪವೊಡ್ಡಿ ಸ್ವಂತ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಚೆಕ್‌ ಮುಖಾಂತರ ಅನೇಕ ಸಾಮಗ್ರಿ ಖರೀದಿಸಲಾಗಿದೆ. ಯಾವುದೇ ಕ್ರಿಯಾ ಯೋಜನೆಯ ಅನುಮೋದನೆ ಇಲ್ಲದೆ ಲಕ್ಷಾಂತರ ರೂ. ಸಂದೇಹಾಸ್ಪದವಾಗಿ ಬಳಕೆ ಮಾಡಲಾಗಿದೆ.

ಗ್ರಾಪಂ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳಲ್ಲಿ ಹಾಗೂ ಸಾಮಗ್ರಿ ಖರೀದಿಯಲ್ಲಿನ ಒಟ್ಟು ಮೊತ್ತ 50 ಸಾವಿರ ರೂ.ಗಿಂತಲೂ ಮೇಲ್ಪಟ್ಟ ಹಣ ಪಾವತಿ ಮಾಡಬೇಕಾದರೆ ಜಿಪಂ ಅನುಮೋದನೆ ಕಡ್ಡಾಯ ಎಂದು ಗ್ರಾಮೀಣಾಭಿವೃದ್ದಿ ಪಂಚಾಯ್ತಿ ರಾಜ್‌ ಇಲಾಖೆ ಆದೇಶವನ್ನೂ ಹೊರಡಿಸಿದೆ. ಗ್ರಾಪಂ ಮಟ್ಟದಲ್ಲಿ ಸಾರ್ವಜನಿಕರ ಹಣ ದುರ್ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹೀಗಾಗಿ, ಈಗ ಬೆಂಗಳೂರು ನಗರ ಜಿಪಂ ತನ್ನ ವ್ಯಾಪ್ತಿಯ ಬೆಂಗಳೂರು ಉತ್ತರ, ಪೂರ್ವ, ದಕ್ಷಿಣ,ಯಲಹಂಕ ಹಾಗೂ ಅನೇಕಲ್‌ ವ್ಯಾಪ್ತಿಯ 87 ಗ್ರಾಪಂನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಪಂಚಾಯ್ತಿ ಇಲಾಖೆಯ ಸುತ್ತೂಲೆಯನ್ನು ರವಾನಿಸಿದೆ.

Advertisement

ಗ್ರಾಪಂ ವಿವಿಧ ಯೋಜನೆಗಳ ಮುಖಾಂತರ ಅನುಷ್ಠಾನಗೊಳಿಸುತ್ತಿ ರುವ ಕಾಮಗಾರಿಗಳಲ್ಲಿ ಹಾಗೂ ಸಾಮಗ್ರಿ ಖರೀದಿಯ ಬಿಲ್‌ 50 ಸಾವಿರ ರೂ. ಮೇಲ್ಪಟ್ಟರೆ ಆಗ ಹೆಚ್ಚಿನ ಮೊತ್ತವನ್ನು ಪಾವತಿಸುವ ಮುನ್ನ ಜಿಪಂ ಸಿಇಒ ಅನುಮೋದನೆ ಅಗತ್ಯ ಎಂದು ಪಂಚಾಯತ್‌ ರಾಜ್‌ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಸಂಗಪ್ಪ, ಬೆಂ. ನಗರ, ಜಿಪಂ ಸಿಇಒ

ಕ್ರಿಯಾ ಯೋಜನೆಯಿಲ್ಲದೆಲಕ್ಷಾಂತರ ರೂ. ಬಳಕೆ:  ಕೊರೊನಾ ನೆಪವೊಡ್ಡಿ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಪಂನ ಕೆಲವು ಗ್ರಾಪಂಗಳಲ್ಲಿ ಕ್ರಿಯಾ ಯೋಜನೆಯ ಅನುಮೋದನೆಯಿಲ್ಲದೆ ಲಕ್ಷಾಂತರರೂ.ಬಿಲ್‌ ಮಾಡಿ ಹಣ ದುರುಪಯೋಗ ಮಾಡಿಕೊಂಡಿರುವುದನ್ನು ಸಾರ್ವಜನಿಕರು ಪಂಚಾಯತ್‌ ರಾಜ್‌ ಇಲಾಖೆಗೆ ಸಾರ್ವಜನಿಕರು ತಮ್ಮ ದೂರಿನಲ್ಲಿ ಪ್ರಶ್ನಿಸಿದ್ದರು. ಕ್ರಿಯಾ ಯೋಜನೆಯಿಲ್ಲದೆ ಅನುದಾನ ಬಳಕೆ ಮಾಡಿದರೆ ಸಾರ್ವಜನಿಕ ಹಣ ವ್ಯರ್ಥವಾಗಲಿದೆ. ಈ ಬಗ್ಗೆ ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ ಕ್ರಮಕೈಗೊಂಡುನಡೆದಿರುವ ಲೋಪವನ್ನು ಸರಿಪಡಿಸಬೇಕು. ಹಣದ ದುರ್ಬಳಕೆ ತಡೆಗಟ್ಟಬೇಕು ಎಂದು ಮನವಿ ಮಾಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ತಿಳಿಸಿದ್ದಾರೆ.

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next