ಬೆಳ್ತಂಗಡಿ: ಇಳಂತಿಲದ ಅಂಡೆತಡ್ಕದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಧರ್ಮಪ್ರೇಮಿಗಳ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆ ನಡೆಸಲಾಯಿತು.
ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ, ಸನಾತನ ಸಂಸ್ಥೆಯ ವಕ್ತಾರೆ ಲಕ್ಷ್ಮೀ ಪೈ ಮತ್ತಿತರರು ಉಪಸ್ಥಿತರಿದ್ದರು.
ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ| ಜಯಂತ ಆಠವಳೆ ಇವರ ಛಾಯಾಚಿತ್ರಮಯ ಜೀವನ ದರ್ಶನ ಸ್ಮರಣಿಕೆ ಬಿಡುಗಡೆ ಮಾಡಲಾಯಿತು.
ರವಿ ಶಿಲ್ಪಾ, ವಾಣಿಶ್ರೀ ಭಜನ ಮಂದಿರದ ಅಧ್ಯಕ್ಷ ಬಾಲಕೃಷ್ಣ, ಲಕ್ಷ್ಮಣ ಮಿತ್ತಿಲ, ವಿಜಯ್ ಕುಮಾರ್, ಸುಂದರ ಶೆಟ್ಟಿ, ನ್ಯಾಯವಾದಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್, ಅಶೋಕ ಇಳಂತಿಲ, ಧ.ಗ್ರಾ. ಯೋಜನೆಯ ಸೇವಾಪ್ರತಿನಿಧಿ ಸೀತಾರಾಮ ಆಳ್ವ, ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ್ ಕುಮಾರ್, ರಾಜಶೇಖರ ರೈ, ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವೇ| ಮೂ| ಸುಬ್ರಹ್ಮಣ್ಯ ಪ್ರಸಾದ ವೇದಮಂತ್ರ ಪಠಿಸಿದರು. ದಯಾನಂದ ಹೆಗ್ಡೆ ಶಂಖನಾದ ಮೊಳಗಿಸಿದರು. ಜನಾರ್ದನ ಗೌಡ ಪರಿಚಯಿಸಿದರು. ಚೇತನಾ ಪ್ರಭು ಸೂತ್ರ ಸಂಚಾಲನೆ ನಡೆಸಿದರು.
ದುಷ್ಟ ಶಕ್ತಿ ವಿರುದ್ಧ ಹೋರಾಡಿ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಾವು ಏನು ಮಾಡಬಹುದು ಎಂದು ಚಿಂತನೆ ಮಾಡಿ. ಇನ್ನೊಬ್ಬರನ್ನು ನಾಶ ಮಾಡಲು ಹಿಂದೂ ಧರ್ಮ ಕಲಿಸಿಲ್ಲ, ಆದರೆ ನಮ್ಮ ಸಂರಕ್ಷಣೆಗೆ ದುಷ್ಟಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕಿದೆ. ಸಾತ್ವಿಕ ಶಕ್ತಿ ಉದ್ದೀಪನಗೊಳಿಸಲು ನಾವು ಸಂಕಲ್ಪ ಮಾಡಬೇಕು.
–
ಸುಬ್ರಹ್ಮಣ್ಯ ಕುಮಾರ್
ಅಗರ್ತ, ನ್ಯಾಯವಾದಿ