Advertisement

Ironman 70.3 Goa: ಸ್ಪರ್ಧೆಯ ವೇಳೆ ಕುಸಿದು ಬಿದ್ದು ಮೃತಪಟ್ಟ ಸ್ಪರ್ಧಿ

04:55 PM Oct 10, 2023 | sudhir |
ಪಣಜಿ: ವಿಶ್ವದ ಅತ್ಯಂತ ಕಠಿಣ ಸ್ಪರ್ಧೆಗಳಲ್ಲಿ ಒಂದೆಂದು ಕರೆಯಲ್ಪಡುವ ‘ಐರನ್‍ಮ್ಯಾನ್ 70.3’ ಅನ್ನು ಭಾನುವಾರ ಪಣಜಿಯಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯ ವೇಳೆ ಸ್ಪರ್ಧಿಯೊಬ್ಬರು ಏಕಾಏಕಿ ಕುಸಿದು ಬಿದ್ದಿದ್ದು ಚಿಕಿತ್ಸೆ ವೇಳೆ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ಸ್ಪರ್ಧಿಯನ್ನು ಕಾಮಾಖ್ಯ ಸಿದ್ಧಾರ್ಥ್ (26 ವರ್ಷ) ಎಂದು ಗುರುತಿಸಲಾಗಿದೆ. ಅವರು ದೋನಾಪಾವ್ಲಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Advertisement

ಸ್ಪರ್ಧೆಗೆ ಎರಡು ದಿನ ಮೊದಲು ಸಿದ್ದಾರ್ಥ್‍ಗೆ ಜ್ವರ ಬಂದಿದ್ದರೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ವೇಳೆ ದೇಹದ ಸೆಳೆತದಿಂದಾಗಿ ಅವರು ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಸಿದ್ದಾರ್ಥ್ ಅವರನ್ನು ಚಿಕಿತ್ಸೆಗಾಗಿ ಪಣಜಿ ಸಮೀಪದ ದೋನಾಪಾವ್ಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಿದ್ದಾರ್ಥ್ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಮರಣೋತ್ತರ ಪರೀಕ್ಷೆಯ ನಂತರ ಸಿದ್ಧಾರ್ಥ್ ಸಾವಿನ ಕಾರಣವನ್ನು ಬಹಿರಂಗಪಡಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: UP: ಅಯೋಧ್ಯೆಯ ಪವಿತ್ರ ಕೊಳದಲ್ಲಿ ಬೋಲ್ಡ್‌ ಆಗಿ ಸೊಂಟ ಬಳುಕಿಸಿ ರೀಲ್ಸ್‌ ಮಾಡಿದ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next