Advertisement

Iron Doom: ಇಸ್ರೇಲ್‌ಗೆ ರಕ್ಷಣೆಯಿತ್ತ ಐರನ್‌ ಡೂಮ್‌

08:33 PM Oct 08, 2023 | Team Udayavani |

ಇಸ್ರೇಲ್‌ ವಿರುದ್ಧ ಹಮಾಸ್‌ ಉಗ್ರರು ಕಂಡು ಕೇಳರಿಯದ ರೀತಿ ದಾಳಿ ನಡೆಸಿದ್ದಾರೆ. ಶನಿವಾರ ಬೆಳಗ್ಗೆ ಕದನ ಶುರುವಾದ ಮೊದಲ 20 ನಿಮಿಷಗಳಲ್ಲಿ 5 ಸಾವಿರ ರಾಕೆಟ್‌ಗಳನ್ನು ಸಿಡಿಸಿದ್ದರು. ಆದರೆ ಇಸ್ರೇಲ್‌ ಹೊಂದಿದ್ದ ಐರನ್‌ ಡೂಮ್‌ ರಕ್ಷಣಾ ವ್ಯವಸ್ಥೆ ಉಗ್ರರು ನಿರೀಕ್ಷೆ ಮಾಡಿದಷ್ಟು ಜೀವ ಹಾನಿ ಉಂಟಾಗದಂತೆ ತಡೆದಿದೆ.

Advertisement

ಏನಿದು ಐರನ್‌ ಡೂಮ್‌ ವ್ಯವಸ್ಥೆ?
ಇಸ್ರೇಲ್‌ ಸರ್ಕಾರವೇ ಅಭಿವೃದ್ಧಿಪಡಿಸಿದ ರಕ್ಷಣಾ ವ್ಯವಸ್ಥೆಯಿದು. ಶತ್ರುಗಳು ಸಿಡಿಸಿದ ಕ್ಷಿಪಣಿಯನ್ನು ಮಾರ್ಗ ಮಧ್ಯೆಯೇ ಛೇದಿಸುವ ಸಾಮರ್ಥ್ಯ ಇದಕ್ಕಿದೆ. ಹೆಚ್ಚಿನ ಜನವಸತಿ ಪ್ರದೇಶಗಳನ್ನು ಕ್ಷಿಪಣಿ, ರಾಕೆಟ್‌ ದಾಳಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಅತ್ಯಾಧುನಿಕ ಸೆನ್ಸರ್‌ಗಳಿವೆ.

ಅದು ಹೇಗೆ ಕೆಲಸ ಮಾಡುತ್ತದೆ?
2011ರ ಮಾರ್ಚ್‌ನಲ್ಲಿ ಇಸ್ರೇಲ್‌ನ ಬೀರ್ಶೇವಾ ನಗರದಲ್ಲಿ ಅದನ್ನು ಮೊದಲ ಬಾರಿಗೆ ಅಳವಡಿಸಲಾಗಿತ್ತು. ಅದು ಗಾಜಾಪಟ್ಟಿ ಸೇರಿದಂತೆ ಹಲವು ಸ್ಥಳಗಳಿಂದ ಹಾರಿಬಿಡುವ ಕ್ಷಿಪಣಿ, ರಾಕೆಟ್‌ಗಳನ್ನು ಛೇದಿಸುವ ಸಾಮರ್ಥ್ಯ ಹೊಂದಿವೆ. ಶತ್ರುವಿನ ನೆಲೆಯಿಂದ ರಾಕೆಟ್‌ ಉಡಾವಣೆಯಾಗುತ್ತಿದ್ದಂತೆಯೇ ಅದರ ವೇಗ, ಪಥ ಮತ್ತು ನಿರೀಕ್ಷಿತ ಗುರಿಯನ್ನು ಈ ಐರನ್‌ ಡೂಮ್‌ ಕ್ಷಿಪ್ರವಾಗಿ ಅಂದಾಜಿಸುತ್ತದೆ ಮತ್ತು ಅಂಥ ರಾಕೆಟ್‌ಗಳನ್ನು ಮಾರ್ಗ ಮಧ್ಯದಲ್ಲೇ ನಾಶಗೊಳಿಸುತ್ತದೆ.

04-70 ಕಿಮೀ– ಅವುಗಳ ವ್ಯಾಪ್ತಿ
ಶೇ. 90 – ಐರನ್‌ ಡೂಮ್‌ನಿಂದಾಗಿ ಧ್ವಂಸಗೊಂಡ ಗಾಜಾ ರಾಕೆಟ್‌ಗಳು
2011– ಇಸ್ರೇಲ್‌ನಲ್ಲಿ ಅಳವಡಿಕೆ

Advertisement

Udayavani is now on Telegram. Click here to join our channel and stay updated with the latest news.

Next