Advertisement

ಸವಿತಾ ಹಾಲಪ್ಪನವರ್‌ಗೆ ನ್ಯಾಯ: Ireland ನ‌ಲ್ಲಿ ಗರ್ಭಪಾತ ಕಾನೂನುಬದ್ಧ

04:12 PM Dec 14, 2018 | Team Udayavani |

ಲಂಡನ್‌ : ಕ್ಯಾಥೋಲಿಕ್‌ ಬಹುಸಂಖ್ಯಾಕರ ದೇಶವಾಗಿರುವ ಅಯರ್ಲಂಡ್‌ ಇದೇ ಮೊದಲ ಬಾರಿಗೆ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಪಾಸುಮಾಡಿದೆ.

Advertisement

2012ರಲ್ಲಿ ರಕ್ತದಲ್ಲಿ  ವಿಷ ಸೇರಿಕೊಂಡು ಸಾವು ಬದುಕಿನ  ಹೋರಾಟದಲ್ಲಿದ್ದ  31ರ ಹರೆಯದ ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ್‌, ತಮಗೆ ಚಿಕಿತ್ಸೆ ನೀಡುತ್ತಿದ್ದ ಗಾಲ್‌ ವೇ ಆಸ್ಪತ್ರೆಯ ವೈದ್ಯರಲ್ಲಿ ತಮಗೆ ಗರ್ಭಪಾತ ಮಾಡಿ ತನ್ನ ಜೀವ ಉಳಿಸುವಂತೆ ಗೋಗರೆದಿದ್ದರು. ಆದರೆ ವೈದ್ಯರು ಕಾನೂನಿನ ನಿಷೇಧದಿಂದಾಗಿ ಗರ್ಭಪಾತ ಮಾಡಲು ಮುಂದಾಗಿರಲಲ್ಲ; ಪರಿಣಾಮವಾಗಿ ಸವಿತಾ ಹಾಲಪ್ಪನವರ್‌ ಮೃತಪಟ್ಟಿದ್ದರು. 

ಅದಾಗಿ ಅಯರ್ಲಂಡ್‌ನ‌ಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಬೇಕೆಂಬ ಭಾರೀ ಜನಾಂದೋಲನವೇ ನಡೆದಿತ್ತು. ಅದರ ಫ‌ಲಶ್ರುತಿಯಾಗಿ ಇದೀಗ ಅಂತಹ ಮಸೂದೆಯನ್ನು ಅಯರ್ಲಂಡ್‌ ಸಂಸತ್ತು ಪಾಸು ಮಾಡಿದೆ. 

ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಸಲುವಾಗಿ ಎಂಟನೇ ತಿದ್ದುಪಡಿಯನ್ನು ರದ್ದಗೊಳಿಸುವ ಮೂಲಕ ಸಂವಿಧಾನಕ್ಕೆ ಬದಲಾವಣೆ ತರುವ ಪ್ರಸ್ತಾವದ ಪರವಾಗಿ ಅಯರ್ಲಂಡ್‌ ಸಂಸತ್ತು  ಈ ವರ್ಷ ಮೇ ತಿಂಗಳಲ್ಲಿ ಶೇ.66.4 ಮತ ಹಾಕಿತ್ತು. 

ಅಯರ್ಲಂಡ್‌ ಸಂಸತ್ತು ಪಾಸು ಮಾಡಿರುವ ಈ ತಿದ್ದುಪಡಿ ಮಸೂದೆಯು ಈಗಿನ್ನು ಕಾಯಿದೆಯಾಗಿ ಹೊರಬರಲು ಅಧ್ಯಕ್ಷ ಮೈಕೆಲ್‌ ಡಿ ಹಿಗ್ಗಿನ್ಸ್‌ ಅವರ ಅಂಕಿತ ಪಡೆಯಬೇಕಿದೆ ಎಂದು ಐರಿಷ್‌ ಬ್ರಾಡ್‌ಕಾಸ್ಟರ್‌ ಆರ್‌ಟಿಇ ವರದಿ ಮಾಡಿದೆ. 

Advertisement

‘ಐರಿಷ್‌ ಮಹಿಳೆಯರಿಗೆ ಇದು ಐತಿಹಾಸಿಕ ಕ್ಷಣ. ಅಯರ್ಲಂಡ್‌ನ‌ ಸಂಸತ್ತಿನ ಎರಡೂ ಸದನಗಳಲ್ಲಿ ಈ ಮಸೂದೆ ಪಾಸಾಗುವುದಕ್ಕೆ ಆರೋಗ್ಯ ಸಚಿವ ಸೈಮನ್‌ ಹ್ಯಾರಿಸ್‌ ಅವರಿಗೆ ಬೆಂಬಲ ನೀಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು’ ಎಂದು 39ರ ಹರೆಯದ ಭಾರತೀಯ ಮೂಲದ ಅಯರ್ಲಂಡ್‌ ಪ್ರಧಾನಿ ಲಿಯೋ ವರದ್‌ಕರ್‌ ಹೇಳಿದ್ದಾರೆ.

ಅಂದಹಾಗೆ ವರದ್‌ಕರ್‌ ಅವರು ಕ್ಯಾಥೋಲಿಕ್‌ ಬಹುಸಂಖ್ಯಾಕರ ಅಯರ್ಲಂಡ್‌ನ‌ ಅತೀ ಕಿರಿಯ ವಯಸ್ಸಿನ ಮತ್ತು ಮುಕ್ತವಾಗಿ ಘೋಷಿಸಿಕೊಂಡ ದೇಶದ ಪ್ರಥಮ ಸಲಿಂಗಿ ಪ್ರಧಾನಿ ಆಗಿ ಕಳೆದ ವರ್ಷ ಜೂನ್‌ನಲ್ಲಿ  ಇತಿಹಾಸ ಸೃಷ್ಟಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next