Advertisement

ಕೆರಿಬಿಯನ್ ಲೀಗ್ ಆಡಲಿದ್ದಾರೆ ಭಾರತೀಯ ಆಲ್ ರೌಂಡರ್

09:42 AM May 18, 2019 | keerthan |

ಮುಂಬೈ: ಭಾರತೀಯ ಆಟಗಾರರಿಗೆ ವಿದೇಶಿ ಟೂರ್ನಿಯಲ್ಲಿ ಆಡಲು ಅವಕಾಶವಿಲ್ಲ. ಇದಕ್ಕೆ ಬಿಸಿಸಿಐ ಅವಕಾಶ ನೀಡುವುದಿಲ್ಲ. ಆದರೆ ಈಗ ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತೀಯ ಆಲ್ ರೌಂಡರ್ ಓರ್ವ ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ -ಟ್ವೆಂಟಿ ಕೂಟದಲ್ಲಿ ಆಡಲಿದ್ದಾರೆ. ಅವರೇ ಇರ್ಫಾನ್ ಪಠಾಣ್.

Advertisement

ಇರ್ಫಾನ್ ಪಠಾಣ್ ಈ ವರ್ಷದ ಸಿಪಿಎಲ್ ಹರಾಜು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮೇ 22 ರಂದು ಲಂಡನ್ ನಲ್ಲಿ ನಡೆಯಲಿರುವ ಹರಾಜಿನಲ್ಲಿ ಜೂನಿಯರ್ ಪಠಾಣ್ ಯಾವುದೇ ತಂಡದ ಪಾಲಾದಲ್ಲಿ ವಿದೇಶಿ ಟಿ-ಟ್ವೆಂಟಿ ಲೀಗ್ ಆಡುವ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಭಾರತೀಯರಿಗೆ ಅವಕಾಶವಿಲ್ಲ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ಭಾರತೀಯ ಆಟಗಾರರಿಗೆ ವಿದೇಶಿ ಟಿ-ಟ್ವೆಂಟಿ ಲೀಗ್ ಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಈಗ ಇರ್ಫಾನ್ ಪಠಾಣ್ ಸಿಪಿಎಲ್ ಆಡಬೇಕಾದರೆ ಬಿಸಿಸಿಐನಿಂದ ನಿರಾಕ್ಷೇಪಣಾ ಪತ್ರ ಪಡೆಯ ಬೇಕಾಗುತ್ತದೆ.


34 ವರ್ಷದ ಇರ್ಫಾನ್ ಪಠಾಣ್ ಕಳೆದ ಎರಡು ವರ್ಷಗಳಿಂದ ಐಪಿಎಲ್ ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. 2017ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ಪರವಾಗಿ ಕೊನೆಯದಾಗಿ ಆಡಿದ್ದ ಇರ್ಫಾನ್ ನಂತರದ ಆವೃತ್ತಿಗಳಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next