ಮೆಲ್ಬರ್ನ್ : ಇಲ್ಲಿ ಬುಧವಾರ ನಡೆದ ವಿಶ್ವಕಪ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು , ಇಂಗ್ಲೆಂಡ್ ಎದುರು ಐರ್ಲೆಂಡ್ ತಂಡ 5 ರನ್ ಗಳ ಗೆಲುವು ಸಾಧಿಸಿದೆ.
ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಅಂಪೈರ್‌ಗಳು ಡಿಎಲ್ ಎಸ್ ನಿಯಮದ ಪ್ರಕಾರ ಇಂಗ್ಲೆಂಡ್ 5 ರನ್ ಹಿಂದಿದ್ದ ಕಾರಣ ಐರ್ಲೆಂಡ್ ಗೆಲುವು ಸಾಧಿಸಿದೆ ಎಂದು ಘೋಷಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 19.2 ಓವರ್ ಗಲ್ಲಿ 157 ರನ್ ಗಳಿಗೆ ಆಲೌಟಾಗಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭಿಕ ಆಘಾತಕ್ಕೆ ಸಿಲುಕಿತು. ಖಾತೆ ತೆರೆಯುವ ಮುನ್ನವೇ ಜೋಸ್ ಬಟ್ಲರ್ ಔಟಾದರು. 14 ರನ್ ಗಳಿಸಿದ್ದಾಗ ಅಲೆಕ್ಸ್ ಹೇಲ್ಸ್, 29 ರನ್ ಗಳಿದ್ದಾಗ ಬೆನ್ ಸ್ಟೋಕ್ಸ್ ನಿರ್ಗಮಿಸಿ ಐರ್ಲೆಂಡ್ ಮೇಲುಗೈ ಸಾಧಿಸಿತು.ಡೇವಿಡ್ ಮಲಾನ್ 35 ರನ್ ಗಳಿಸಿ ಔಟಾದರು. ಮೊಯಿನ್ ಅಲಿ 12 ಎಸೆತಗಳಲ್ಲಿ 24 ರನ್ ಗಳಿಸಿ ಸಿಡಿಯಲು ಆರಂಭಿಸಿದ್ದರಾದರೂ ಮಳೆ ಫಲಿತಾಂಶ ಬದಲಾಯಿಸಿತು.
ಇಂಗ್ಲೆಂಡ್ 14.3 ಓವರ್ ಗಳಿಗೆ 5 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿತ್ತು. ಈ ವೇಳೆ ಮಳೆ ಬಂದ ಕಾರಣ ಫಲಿತಾಂಶ ಇಂಗ್ಲೆಂಡ್ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿತು. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಐರ್ಲೆಂಡ್ ತಂಡದ ನಾಯಕ ಆಂಡಿ ಬಾಲ್ಬಿರ್ನಿ(62ರನ್ ) ಪಂದ್ಯ ಶ್ರೇಷ್ಠ ಆಟಗಾರ ಎನಿಸಿಕೊಂಡರು.