Advertisement
ಬೌಲಿಂಗ್ ಆಯ್ದುಕೊಂಡ ಐರ್ಲೆಂಡ್ ಪವರ್ ಪ್ಲೇಯಲ್ಲಿ ಮೇಲುಗೈ ಸಾಧಿಸಿತು. ಸ್ಫೋಟಿಸುವ ಸೂಚನೆ ನೀಡಿದ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮ ಅವರನ್ನು 34 ರನ್ ಆಗುವಷ್ಟರಲ್ಲಿ ಪೆವಿಲಿಯನ್‌ಗೆ ರವಾನಿಸಿತು. 5 ವಿಕೆಟಿಗೆ 185 ರನ್ ಪೇರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಐರ್ಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ರಿಂಕು ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Related Articles
Advertisement
3ನೇ ವಿಕೆಟಿಗೆ ಜತೆಗೂಡಿದ ರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕ್ರೀಸ್ ಆಕ್ರಮಿಸಿಕೊಂಡು ಬಿರುಸಿನ ಆಟಕ್ಕೆ ಮುಂದಾದರು. ತಂಡಕ್ಕೆ ಹೆಚ್ಚಿನ ಹಾನಿಯೇನೂ ಸಂಭವಿಸಲಿಲ್ಲ. 10 ಓವರ್ ಅಂತ್ಯಕ್ಕೆ ತಂಡದ ಸ್ಕೋರ್ 81ಕ್ಕೆ ಏರಿತು.
ಜೋಶುವ ಲಿಟ್ಲ ಎಸೆದ 11ನೇ ಓವರ್‌ನಲ್ಲಿ ಸ್ಯಾಮ್ಸನ್ ಸಿಡಿದು ನಿಂತರು. 3 ಫೋರ್, ಒಂದು ಸಿಕ್ಸರ್ ಸೇರಿದಂತೆ 18 ರನ್ ಸೂರೆಗೈದರು. ಸ್ಯಾಮ್ಸನ್ ಗಳಿಕೆ 26 ಎಸೆತಗಳಿಂದ 40 ರನ್ (5 ಬೌಂಡರಿ, 1 ಸಿಕ್ಸರ್). ಗಾಯಕ್ವಾಡ್-ಸ್ಯಾಮ್ಸನ್ 3ನೇ ವಿಕೆಟಿಗೆ 8.1 ಓವರ್‌ಗಳಿಂದ 71 ರನ್ ಪೇರಿಸಿದರು. ರಿಂಕು ಸಿಂಗ್ ಗಳಿಕೆ 21 ಎಸೆತಗಳಿಂದ 38 ರನ್. ಮೊದಲ ಸಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಪಡೆದ ಅವರು 3 ಸಿಕ್ಸರ್, 2 ಬೌಂಡರಿಗಳೊಂದಿಗೆ ಅಬ್ಬರಿಸಿದರು.ಈ ಪಂದ್ಯಕ್ಕೆ ಎರಡೂ ತಂಡ ಗಳು ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ.