Advertisement

IRDAI: 65 ವರ್ಷ ದಾಟಿದ್ರು ಹೊಸ ವಿಮೆ ಕೊಳ್ಳಬಹುದು!

12:53 AM Apr 22, 2024 | Team Udayavani |

ಹೊಸದಿಲ್ಲಿ: ಇನ್ನು ಮುಂದೆ 65 ವರ್ಷ ಮೇಲ್ಪಟ್ಟವರು ಕೂಡ ಹೊಸ ಆರೋಗ್ಯ ವಿಮೆ ಖರೀದಿಸಬಹುದು. ಭಾರ ತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಆರೋಗ್ಯ ವಿಮೆ ಖರೀದಿಗೆ ನಿಗದಿಪಡಿಸಿದ್ದ ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ. ಹೀಗಾಗಿ ಯಾವುದೇ ವಯಸ್ಸಿನವರು ಆರೋಗ್ಯ ವಿಮೆ ಖರೀದಿಸಬಹುದಾಗಿದೆ.

Advertisement

ಈ ಹಿಂದೆ ಆರೋಗ್ಯ ವಿಮೆ ಖರೀದಿಸಲು ಐಆರ್‌ಡಿಎಐ ವಯಸ್ಸಿನ ಮಿತಿಯನ್ನು ಗರಿಷ್ಠ 65 ವರ್ಷಕ್ಕೆ ನಿಗದಿ ಪಡಿಸಿತ್ತು. 2024ರ ಎ.1ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಆದರೆ ಕ್ಯಾನ್ಸರ್‌, ಹೃದಯ ಕಾಯಿಲೆ, ಏಡ್ಸ್ ನಂತಹ ಗಂಭೀರ ವೈದ್ಯಕೀಯ ರೋಗಗಳನ್ನು ಹೊಂದಿರುವವರಿಗೆ ಆರೋಗ್ಯ ವಿಮೆ ವಿತರಿಸುವುದನ್ನು ನಿರಾಕರಿಸಲಾಗಿದೆ.

ವಿಮೆ ಸೆಟಲ್‌ಮೆಂಟ್‌ ಅವಧಿ ಇಳಿಕೆ: ಆರೋಗ್ಯ ವಿಮೆ ಸೆಟಲ್‌ಮೆಂಟ್‌ಗೆ ಕಾಯುವಿಕೆ ಅವಧಿಯನ್ನು 48 ತಿಂಗ ಳಿಂದ 36 ತಿಂಗಳಿಗೆ ಇಳಿಸಲಾಗಿದೆ. ಈ ಪರಿಷ್ಕರಣೆಗಳನ್ನು ಎಲ್ಲ ಹೊಸ ವಿಮೆ ಗಳಿಗೆ ಅನ್ವಯಿಸಲಾಗುತ್ತದೆ ಮತ್ತು ನವೀಕರಣದ ಅನಂತರ ಅಸ್ತಿತ್ವದಲ್ಲಿರುವ ವಿಮೆಗಳಿಗೆ ಸಂಯೋಜಿಸಲಾಗುತ್ತದೆ ಎಂದು ಐಆರ್‌ಡಿಎಐ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next