Advertisement

ಡ್ರೋನ್‌ ಮೂಲಕ ದಾಳಿ ನಡೆಸಿ ಇರಾಕ್‌ ಪ್ರಧಾನಿ ಹತ್ಯೆಗೆ ಯತ್ನ

08:52 PM Nov 07, 2021 | Team Udayavani |

ಬಾಗ್ಧಾದ್‌: ಇರಾಕ್‌ ಪ್ರಧಾನಿ ಮುಸ್ತಾಫಾ ಅಲ್‌-ಕಧಿಮಿ ಅವರ ನಿವಾಸದ ಮೇಲೆ, ಭಾನುವಾರ ಶಸ್ತ್ರಸಜ್ಜಿತ ಡ್ರೋನ್‌ಗಳಿಂದ ಭಯೋತ್ಪಾದಕರು ದಾಳಿ ನಡೆಸಿದ್ದು, ಈ ಮಾರಣಾಂತಿಕ ದಾಳಿಯಿಂದ ಕಧಿಮಿ ಅವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

Advertisement

ಈವರೆಗೆ, ಸೇನಾ ನೆಲೆಗಳು ಇತ್ಯಾದಿ ಗೌಪ್ಯ ತಾಣಗಳ ಮೇಲೆ ದಾಳಿ ನಡೆಸಲು ಡ್ರೋನ್‌ಗಳನ್ನು ಬಳಸಲಾಗಿದೆ. ಆದರೆ, ಪ್ರಧಾನಿ ಹುದ್ದೆಯಲ್ಲಿರುವಂಥ ವ್ಯಕ್ತಿಯೊಬ್ಬರ ಹತ್ಯೆಗೆ ಡ್ರೋನ್‌ ಬಳಸಿರುವುದು ಇದೇ ಮೊದಲು ಎನ್ನಲಾಗಿದೆ.

ಪ್ರಧಾನಿಯವರ ಅಧಿಕೃತ ನಿವಾಸವಿರುವ, ಅತ್ಯಂತ ಬಿಗಿಭದ್ರತೆಯುಳ್ಳ ಗ್ರೀನ್‌ ಝೋನ್‌ನಲ್ಲಿ ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಆಗಮಿಸಿದ ಎರಡು ಶಸ್ತ್ರಸಜ್ಜಿತ ಡ್ರೋನ್‌ಗಳು ಬಂಗಲೆಯ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದವು. ಘಟನೆಯಲ್ಲಿ ಮುಸ್ತಾಫಾರ ಏಳು ಅಂಗರಕ್ಷಕರಿಗೆ ಗಾಯಗಳಾಗಿವೆ.

ಇದನ್ನೂ ಓದಿ:ಪಕ್ಷ ಮತ್ತು ಸಾಮಾನ್ಯ ಜನರ ನಡುವೆ ನಂಬಿಕೆಯ ಸೇತುವೆಯಾಗಿ :ಪ್ರಧಾನಿ ಮೋದಿ

ಘಟನೆಯ ನಂತರ ಟ್ವೀಟ್‌ ಮಾಡಿರುವ ಮುಸ್ತಾಫಾ, “ದಾಳಿಯಲ್ಲಿ ನನಗೇನೂ ಆಗಿಲ್ಲ. ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ’ ಎಂದಿದ್ದಾರೆ.
ಕಳೆದ ತಿಂಗಳು ನಡೆದಿದ್ದ ಸಂಸದೀಯ ಚುನಾವಣೆಯ ಫ‌ಲಿತಾಂಶದ ಆಧಾರದಲ್ಲಿ ಮುಸ್ತಾಫಾ ಅವರು ಇರಾಕ್‌ನ ಅಧ್ಯಕ್ಷರಾಗಿ ನೇಮಕಗೊಂಡಿದ್ದನ್ನು, ಇರಾನ್‌ ಬೆಂಬಲಿತ ಉಗ್ರರ ಪಡೆ ಸಹಿಸದೆ ಈ ದಾಳಿ ನಡೆಸಿವೆ ಎಂದು ಇರಾಕ್‌ನ ಭದ್ರತಾ ಪಡೆಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next