ಬಾಗ್ಧಾದ್: ಇರಾಕ್ ಫುಟ್‌ಬಾಲ್ ದಿಗ್ಗಜ ಅಹ್ಮದ್ ರಾಧಿ (56 ವರ್ಷ) ಅವರು ಭಾನುವಾರ ಕೋವಿಡ್ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅಹ್ಮದ್ ರಾಧಿ ಅವರು ಜೂ.13ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರವಷ್ಟೇ ಗುಣಮುಖರಾಗಿ ಮನೆಗೆ ಬಂದಿದ್ದರು. ಮನೆಗೆ ಬಂದಿದ್ದ ಅವರ ಆರೋಗ್ಯದಲ್ಲಿ ಕೆಲವೇ ಗಂಟೆಗಳಲ್ಲಿ ಏರುಪೇರಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಯನ್ನು ನೀಡಲು ಜೋರ್ಡಾನ್‌ಗೆ ಕರೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಈ ನಡುವೆ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಅಹ್ಮದ್ ರಾಧಿ ಇರಾಕ್ ಫುಟ್‌ಬಾಲ್ ತಂಡದ ಮುಂಚೂಣಿ ಆಟಗಾರರಾಗಿದ್ದರು. 1988ರಲ್ಲಿ ಏಷ್ಯಾದ ಶ್ರೇಷ್ಠ ಫುಟ್‌ಬಾಲ್ ಆಟಗಾರ ಗೌರವಕ್ಕೆ ಭಾಜನರಾಗಿದ್ದರು. ಅದೇ ವರ್ಷ ನಡೆದಿದ್ದ ಒಲಿಂಪಿಕ್ಸ್‌ನಲ್ಲೂ ಕಣಕ್ಕೆ ಇಳಿದಿದ್ದರು. 1984 ಮತ್ತು 1988ರ ಗಲ್ಫ್ಕ ಪ್ ಕೂಟಗಳಲ್ಲಿ ಇರಾಕ್ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.