Advertisement

Iran: ಇರಾನ್‌ನಿಂದ ಸೊರಯ ಉಪಗ್ರಹ ಉಡಾವಣೆ: ಅಮೆರಿಕಕ್ಕೆ ಆತಂಕ

08:50 PM Jan 20, 2024 | Pranav MS |

ಜೆರುಸಲೇಮ್‌: ತನ್ನ ಇತಿಹಾಸದಲ್ಲೇ ಅತಿ ಎತ್ತರದ ಕಕ್ಷೆಗೆ ಉಪಗ್ರಹವನ್ನು ಕಳುಹಿಸಿದ್ದಾಗಿ ಇರಾನ್‌ ಹೇಳಿಕೊಂಡಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಗುವಿನ ಪರಿಸ್ಥಿತಿ ಇರುವಂತೆಯೇ ಈ ಹೇಳಿಕೆ ಹೊರಬಿದ್ದಿದೆ. ಆದರೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಈ ಬೆಳವಣಿಗೆ ಬಗ್ಗೆ ಆತಂಕ ಹೊಂದಿವೆ. ಅಣ್ವಸ್ತ್ರ ಹೊತ್ತೂಯ್ಯಬಲ್ಲ ಇರಾನಿನ ಖಂಡಾಂತರ ಕ್ಷಿಪಣಿ ಸಾಮರ್ಥ್ಯ ಇದರಿಂದ ಹೆಚ್ಚಾಗಲಿದೆ ಎಂಬುದು ಅವುಗಳಿಗಿರುವ ಆತಂಕ.

Advertisement

ಇತ್ತೀಚೆಗಷ್ಟೇ ಪಾಕ್‌ ಮತ್ತು ಇರಾನ್‌ ಪರಸ್ಪರ ದಾಳಿ ನಡೆಸಿ, ಈಗಷ್ಟೇ ಶಾಂತಿ ಮಾತುಕತೆಗೆ ಸಿದ್ಧವಾಗಿವೆ. ಇನ್ನು ಇಸ್ರೇಲ್‌-ಹಮಾಸ್‌ ನಡುವೆ ತೀವ್ರ ಘರ್ಷಣೆ ನಡೆಯುತ್ತಲೇ ಇದೆ. ಅದೇ ಹೊತ್ತಿನಲ್ಲಿ ಇರಾನ್‌, 750 ಕಿ.ಮೀ.ಗೂ ಅಧಿಕ ಎತ್ತರದ ಕಕ್ಷೆಯಲ್ಲಿ ಸೊರಯ ಉಪಗ್ರಹ ನಿಲ್ಲಿಸಿದ್ದೇವೆ. 3 ಹಂತದ ಖಾಯೆಮ್‌-100 ರಾಕೆಟ್‌ ಮೂಲಕ ಉಡಾವಣೆ ಮಾಡಿದ್ದೇವೆಂದು ಹೇಳಿದೆ. ಉಪಗ್ರಹದಲ್ಲಿ 50 ಕೆಜಿ ತೂಕದ ಪೇಲೋಡ್‌ ಇದೆ ಎಂದು ಇರಾನ್‌ ಹೇಳಿದೆ. ಆದರೆ ಉಪಗ್ರಹದ ಕೆಲಸವೇನೆಂದು ಗೊತ್ತಾಗಿಲ್ಲ.

ಪಾಕ್‌-ಇರಾನ್‌ ನಡುವೆ ಶಾಂತಿ ಮಾತುಕತೆ
ಯುದ್ಧಸನ್ನದ್ಧ ಸ್ಥಿತಿಗೆ ಪಾಕಿಸ್ತಾನ-ಇರಾನ್‌ ಸಂಬಂಧ ಮತ್ತೆ ಹಳಿಗೆ ಬಂದಿದೆ. ಪಾಕಿಸ್ತಾನ ಇಸ್ರೇಲ್‌ನೊಂದಿಗೆ ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧ ಮುಂದುವರಿಸಲು ತಾನು ಸಿದ್ಧ ಎಂದರೆ, ಇರಾನ್‌ ಕೂಡ ಪರೋಕ್ಷವಾಗಿ ಅದಕ್ಕೆ ಸಮ್ಮತಿಸಿದೆ.ಜ.16ರಂದು ಇರಾನ್‌, ಪಾಕಿಸ್ತಾನದ ಗಡಿಯಲ್ಲಿ ದಾಳಿ ಮಾಡಿ 2 ಮಕ್ಕಳ ಸಾವಿಗೆ ಕಾರಣವಾಗಿತ್ತು. ಜ.18ರಂದು ಇರಾನ್‌ ಗಡಿಯಲ್ಲಿ ಪಾಕ್‌ ಪ್ರತಿದಾಳಿ ಮಾಡಿ, ಇರಾನ್‌ 9 ಮಂದಿಯ ಸಾವಿಗೆ ಕಾರಣವಾಗಿತ್ತು. ಇದರಿಂದ ಎರಡೂ ದೇಶಗಳು ಪರಸ್ಪರ ರಾಯಭಾರಿಗಳನ್ನು ವಾಪಸ್‌ ಕರೆಸಿಕೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next