Advertisement
ಮಹಾರಾಷ್ಟ್ರ ಮೂಲದ ಅಲಿರಾಜಾ ಇರಾಣಿ (27), ಬೀದರ ಜಿಲ್ಲೆಯ ಬಿಲಾಲ ಇರಾಣಿ (21) ಹಾಗೂ ಮಧ್ಯಪ್ರದೇಶ ಮೂಲದಗುಲಾಮಅಲಿ ಇರಾಣಿ (29) ಬಂಧಿತರು.
ಬಂಗಾರ ಸೇರಿ ಒಟ್ಟು 1,44,440 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅವಳಿನಗರ ವಿವಿಧ ಬಡಾವಣೆಗಳಲ್ಲಿ ಕಳೆದ ಹಲವು ದಿನಗಳಿಂದ ನಡೆದ ಸರಗಳ್ಳತನದಲ್ಲಿ ಇರಾಣಿ ಗ್ಯಾಂಗ್ ತೊಡಗಿತ್ತು. ಈ ಗ್ಯಾಂಗ್ ಬಗ್ಗೆ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸಲಾಗಿದೆ ಎಂದು ಎಸಿಪಿ ಅನುಷಾ ತಿಳಿಸಿದ್ದಾರೆ.
Related Articles
Advertisement
ಅಕ್ರಮ ಮದ್ಯ ವಶ: ಆರೋಪಿ ಪರಾರಿಹುಬ್ಬಳ್ಳಿ: ಇಲ್ಲಿನ ಸೆಟ್ಲಮೆಂಟ್ ಗಂಗಾಧರ ನಗರದಲ್ಲಿ ರಸ್ತೆ ಬದಿ ಮಂಗಳವಾರ ಸಂಜೆ ಅಕ್ರಮವಾಗಿ ವಿವಿಧ ಬಗೆಯ ಮದ್ಯದ ಟೆಟ್ರಾ ಪಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾಗ ಬೆಂಡಿಗೇರಿ ಪೊಲೀಸರು ದಾಳಿ ಮಾಡಿ, ಅಂದಾಜು 3,015ರೂ. ಮೌಲ್ಯದ
94 ಟೆಟ್ರಾ ಪಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸೆಟ್ಲಮೆಂಟ್ ಬಾಟರ ಓಣಿಯ ಸುನೀಲ ಎಸ್. ಕಂಜರಬಾಟ ಪರಾರಿಯಾಗಿದ್ದಾನೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ: ಇಲ್ಲಿನ ಕೇಶ್ವಾಪುರ ಗಾಂಧಿವಾಡ ವೃತ್ತದ ಚರ್ಚ್ ಹತ್ತಿರ ಬುಧವಾರ ಬೆಳಗ್ಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಕೇಶ್ವಾಪುರ ಪೊಲೀಸರು ಬಂಧಿಸಿ, ಆತನಿಂದ ಅಂದಾಜು 2500ರೂ.
ಮೌಲ್ಯದ 5.5ಲೀಟರ್ ಮದ್ಯದ ಟೆಟ್ರಾ ಪಾಕೆಟ್ಸ್, 450 ರೂ. ವಶಪಡಿಸಿಕೊಂಡಿದ್ದಾರೆ. ಗಾಂಧಿವಾಡದ ಕುಬೇಂದ್ರ ಎ. ಚವ್ಹಾಣ ಬಂಧಿತನಾಗಿದ್ದು, ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯರು ಕಾಣೆ: ಕೇಶ್ವಾಪುರ ಠಾಣೆ ವ್ಯಾಪ್ತಿಯ ಪ್ರಕಾಶ ಕಾಲೋನಿ ಮತ್ತು ಸಿಮೆಂಟ್ ಚಾಳನಲ್ಲಿ ಯುವತಿಯರಿಬ್ಬರು ಪ್ರತ್ಯೇಕವಾಗಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಅವರ ಪಾಲಕರು ತಮ್ಮ ಮಕ್ಕಳನ್ನು ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಸಂಚಾರ ಉಲ್ಲಂಘನೆ: ಸಂಚಾರ ನಿಯಮ ಉಲ್ಲಂಘಿ ಸಿದವರ ಮೇಲೆ ಪೊಲೀಸರು ಮಂಗಳವಾರ 412 ಪ್ರಕರಣಗಳನ್ನು ದಾಖಲಿಸಿಕೊಂಡು, ಒಟ್ಟು 2,15,750 ರೂ. ದಂಡ ವಿಧಿಸಿದ್ದಾರೆ.