Advertisement

ಇರಾನ್‌ನ ಪರಮಾಣು ಘಟಕ ಮೇಲೆ ದಾಳಿ :  ಇಸ್ರೇಲ್‌ ವಿರುದ್ಧ ಗುಟುರು ಹಾಕಿದ ಇರಾನ್‌

10:39 PM Apr 12, 2021 | Team Udayavani |

ದುಬೈ: ಟೆಹ್ರಾನ್‌ ಸಮೀಪದ ನತಾನ್‌l ಭೂಗತ ಪರಮಾಣು ಅಭಿವೃದ್ಧಿ ಘಟಕದ ಮೇಲೆ ದಾಳಿ ನಡೆಸಿದ ಇಸ್ರೇಲ್‌ ವಿರುದ್ಧ ಇರಾನ್‌ ಕೆಂಡಾ ಮಂಡಲವಾಗಿದೆ. ಇದಕ್ಕೆ ಶೀಘ್ರವೇ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ ವಿದೇಶಾಂಗ ಇಲಾಖೆ ಎಚ್ಚರಿಸಿದೆ.

Advertisement

“ಇದು ಇಸ್ರೇಲ್‌ ನಡೆಸಿದ ಪರಮಾಣು ಭಯೋತ್ಪಾದನೆ. ನತಾನ್‌lನಲ್ಲಿನ ಯುರೇನಿಯಂ ಘಟಕದ ಕೇಂದ್ರಾಪಗಾಮಿ ವ್ಯವಸ್ಥೆಗೆ ಇಸ್ರೇಲ್‌ ಸೇನೆಯ ದಾಳಿಯಿಂದ ಹಾನಿಯಾಗಿದೆ. ಇದರಿಂದ ಭಾನುವಾರ ಇಡೀ ದಿನ ವಿದ್ಯುತ್‌ ಇಲ್ಲದೆ ಭಾರೀ ತೊಂದರೆಯಾಗಿದೆ. ಇರಾನ್‌ ಇದಕ್ಕೆ ತನ್ನದೇ ದಾರಿಯಲ್ಲಿ ಪ್ರತ್ಯುತ್ತರ ನೀಡಲಿದೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಸಯೀದ್‌ ಖಾಟಿ ಭಾ ದೇಹ್‌ ಎಚ್ಚರಿಸಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್‌ ರನ್ನು ಭಾನುವಾರ ಭೇಟಿಯಾಗಿ, ಜಾಗತಿಕ ರಾಷ್ಟ್ರಗಳ ಪರಮಾಣು ಒಪ್ಪಂದಗಳ ಸ್ಥಗಿತಕ್ಕೆ ಶಪಥ ತೊಟ್ಟ ಬೆನ್ನಲ್ಲೇ ಇಸ್ರೇಲ್‌ ಸೇನೆ ಈ ದಾಳಿ ನಡೆಸಿದೆ ಎಂದು ವರದಿಗಳು ಹೇಳಿವೆ. ಆದರೆ, ಇಸ್ರೇಲ್‌ ಇದುವರೆಗೂ ಈ ದಾಳಿಯ ಬಗ್ಗೆ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ :ರಫೇಲ್ ಖರೀದಿ ವೇಳೆ ಮಧ್ಯವರ್ತಿಗೆ ಹಣ ನೀಡಿಕೆ ಆರೋಪ‌ : ವಿಚಾರಣೆಗೆ ಸುಪ್ರೀಂ ಅಸ್ತು

Advertisement

Udayavani is now on Telegram. Click here to join our channel and stay updated with the latest news.

Next