Advertisement

Israel Attack: ಇಸ್ರೇಲ್ ದಾಳಿಗೂ ಮುನ್ನ 500ಭಯೋತ್ಪಾದಕರಿಗೆ ತರಬೇತಿ ನೀಡಿದ್ದ ಇರಾನ್: ವರದಿ

09:42 AM Oct 26, 2023 | Team Udayavani |

ಟೆಹ್ರಾನ್: ಇರಾನ್‌ನ ಗಣ್ಯ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್‌ನ ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪುಗಳ ಕನಿಷ್ಠ 500 ಸದಸ್ಯರಿಗೆ ತರಬೇತಿ ನೀಡಿ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

Advertisement

ವರದಿ ಮಾಡಿದ ದ ವಾಲ್ ಸ್ಟ್ರೀಟ್ ಜರ್ನಲ್, ಹಮಾಸ್ ಇಸ್ರೇಲ್ ಮೇಲೆ ಭೂಮಿ, ವಾಯು ಮತ್ತು ಸಮುದ್ರದ ಮೂಲಕ ಅಭೂತಪೂರ್ವ ದಾಳಿಯನ್ನು ಪ್ರಾರಂಭಿಸುವ ಮೊದಲು ಸುಮಾರು ಐನೂರು ಮಂದಿ ಭಯೋತ್ಪಾದಕರು ಕಳೆದ ತಿಂಗಳು ಇರಾನ್‌ನಲ್ಲಿ “ವಿಶೇಷ ಯುದ್ಧ ತರಬೇತಿ”ಗೆ ಒಳಗಾಗಿದ್ದರು ಎಂದು ಹೇಳಿದೆ.

ಇಸ್ರೇಲ್‌ನ ಮೇಲೆ ದಾಳಿ ನಡೆಸಲು ಹಮಾಸ್‌ಗೆ ಇರಾನ್ ಸಹಾಯ ಮಾಡುತ್ತಿದೆ ಎಂದು ಇಸ್ರೇಲ್ ಪದೇ ಪದೇ ಆರೋಪಿಸಿದೆ, ಇದರ ನಡುವೆ ಇರಾನ್ ತಾವು ಯಾವುದೇ ಸಂಘಟನೆಗೆ ಸಾಥ್ ನೀಡುತ್ತಿಲ್ಲ ಎಂದು ಹೇಳಿ ಇಸ್ರೇಲ್ ಆರೋಪವನ್ನು ತಳ್ಳಿಹಾಕಿತ್ತು. ಇಸ್ರೇಲ್‌ ಮೇಲೆ ಇತಿಹಾಸದಲ್ಲೇ ಅತ್ಯಂತ ಮಾರಣಾಂತಿಕ ದಾಳಿಯನ್ನು ನಡೆಸಲು ಹಮಾಸ್ ಹೈ-ಟೆಕ್ ಗಾಜಾ ಗಡಿ ಬೇಲಿಯನ್ನು ಕೆಡವಲು ಮತ್ತು ಗಡಿಯುದ್ದಕ್ಕೂ ಅಡ್ಡದಾರಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಈ ತಿಂಗಳ ಆರಂಭದಲ್ಲಿ, ದಿ ವಾಲ್ ಸ್ಟ್ರೀಟ್ ಜರ್ನಲ್ ಇರಾನ್ ಇಸ್ರೇಲ್ ಮೇಲೆ ಹಮಾಸ್‌ನ ಅಭೂತಪೂರ್ವ ದಾಳಿಗಳನ್ನು ಯೋಜಿಸಲು ಸಹಾಯ ಮಾಡಿದೆ ಮತ್ತು ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ನಡೆದ ಸಭೆಯಲ್ಲಿ ದಾಳಿಗೆ ಅನುಮೋದನೆ ನೀಡಿತು ಎಂದು ಹಮಾಸ್‌ನ ಹಿರಿಯ ಸದಸ್ಯರು ಮತ್ತು ಇರಾನ್ ಬೆಂಬಲಿತ ಗುಂಪು ಹೆಜ್ಬೊಲ್ಲಾಹ್ ಹೇಳಿದ್ದಾರೆ.

ಇರಾನ್‌ನ ಶಕ್ತಿಶಾಲಿ ಮಿಲಿಟರಿಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಅಧಿಕಾರಿಗಳು ಆಗಸ್ಟ್‌ನಿಂದ ಹಮಾಸ್‌ನೊಂದಿಗೆ ಭೂಮಿ, ವಾಯು ಮತ್ತು ಸಮುದ್ರದ ಮೂಲಕ ಇಸ್ರೇಲ್‌ನ ಮೇಲೆ ತಮ್ಮ ಬಹು-ಮುಖ ದಾಳಿಯನ್ನು ರೂಪಿಸಲು ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಮಾಡಿತ್ತು.

Advertisement

ಬೈರುತ್‌ನಲ್ಲಿ ನಡೆದ ಹಲವಾರು ಸಭೆಗಳಲ್ಲಿ ಇಸ್ರೇಲ್‌ ಮೇಲೆ ದಾಳಿ ನಡೆಸುವ ವಿಚಾರವಾಗಿ ಚರ್ಚಿಸಲಾಗಿತ್ತು, ಇದರಲ್ಲಿ ಐಆರ್ ಜಿಸಿ(IRGC) ಅಧಿಕಾರಿಗಳು ಮತ್ತು ಹಮಾಸ್ ಮತ್ತು ಹೆಜ್ಬುಲ್ಲಾ ಸೇರಿದಂತೆ ನಾಲ್ಕು ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪುಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಹಮಾಸ್ ಗಾಜಾ ಪಟ್ಟಿಯನ್ನು ನಿಯಂತ್ರಿಸುತ್ತಿದ್ದರೆ, ಹೆಜ್ಬೊಲ್ಲಾ ಲೆಬನಾನ್‌ನಲ್ಲಿ ಶಿಯಾ ಭಯೋತ್ಪಾದಕ ಗುಂಪು ಮತ್ತು ರಾಜಕೀಯ ಬಣವಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹಮಾಸ್ ಉಗ್ರಗಾಮಿ ಸಂಘಟನೆ ಏಕಾಏಕಿ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡರು ಅಷ್ಟು ಮಾತ್ರವಲ್ಲದೆ ನೂರಾರು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಇದರ ನಡುವೆ ಹಮಾಸ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಇದರಿಂದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಜೀವಕಳೆದುಕೊಂಡರು. ಇನ್ನೂ ಇಸ್ರೇಲ್ ಹಮಾಸ್ ಸಂಘರ್ಷ ಮುಗಿದಿಲ್ಲ ಇಸ್ರೇಲ್ ಹಮಾಸ್ ಉಗ್ರರ ನಿರ್ನಾಮಕ್ಕೆ ಎಲ್ಲ ರೀತಿಯ ತಯಾರಿಯನ್ನು ನಡೆಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Road Mishap: ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ: ಮಗು ಸೇರಿ 12 ಮಂದಿ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next